ನವದೆಹಲಿ: ಪಿಂಕ್ ಸಿಟಿ ಎಂದೇ ಖ್ಯಾತಿಯಾಗಿರುವ ಜೈಪುರ ಈಗ ಯುನೆಸ್ಕೋ ವಿಶ್ವ ಪರಂಪರೆಯ ನಗರ ಎಂದು ಯುನೆಸ್ಕೋ ತನ್ನ 43 ನೇ ಅಧಿವೇಶನದಲ್ಲಿ ಘೋಷಿಸಿದೆ.
ರಾಜಸ್ಥಾನದ ರಾಜಧಾನಿಯಾದ ಜೈಪುರವನ್ನು 1727 ರಲ್ಲಿ ಸವಾಯಿ ಜೈ ಸಿಂಗ್ II ಸ್ಥಾಪಿಸಿದರು ಮತ್ತು ಇದು ಚಿನ್ನದ ತ್ರಿಕೋನದ ಭಾಗವಾಗಿರುವ ಪ್ರಮುಖ ಪ್ರವಾಸಿ ತಾಣವಾಗಿದೆ - ಇದು ದೆಹಲಿ, ಆಗ್ರಾ ಮತ್ತು ಜೈಪುರವನ್ನು ಸಂಪರ್ಕಿಸುವ ಪ್ರವಾಸಿ ಸರ್ಕ್ಯೂಟ್ ಆಗಿದೆ.
🔴 BREAKING
Just inscribed as @UNESCO #WorldHeritage Site: Jaipur City in Rajasthan, #India 🇮🇳. Bravo 👏
ℹ️ https://t.co/thV0mwrj0X #43WHC pic.twitter.com/NU4W32dy3x
— UNESCO (@UNESCO) July 6, 2019
ಯುನೆಸ್ಕೋ ತನ್ನ ಘೋಷಣೆಯಲ್ಲಿ "ಈ ನಗರದ ಯೋಜನೆ ಪ್ರಾಚೀನ ಹಿಂದೂ ಮತ್ತು ಆಧುನಿಕ ಮೊಘಲ್ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗಳ ವಿಚಾರಗಳ ವಿನಿಮಯವನ್ನು ತೋರಿಸುತ್ತದೆ. ಗ್ರಿಡ್ ಯೋಜನೆ ಪಶ್ಚಿಮದಲ್ಲಿ ಚಾಲ್ತಿಯಲ್ಲಿರುವ ಒಂದು ಮಾದರಿಯಾಗಿದೆ, ಆದರೆ ವಿವಿಧ ಜಿಲ್ಲೆಗಳ ಸಂಘಟನೆಯು ಸಾಂಪ್ರದಾಯಿಕ ಹಿಂದೂ ಪರಿಕಲ್ಪನೆಗಳನ್ನು ಸೂಚಿಸುತ್ತದೆ. " ಎಂದು ಯುನೆಸ್ಕೋ, ಹೇಳಿದೆ.ಇನ್ನು ಮುಂದುವರೆದು "ಚೌಪರ್, ಮಾರುಕಟ್ಟೆಗಳು, ಅಂಗಡಿಗಳು, ನಿವಾಸಗಳು ಮತ್ತು ಮುಖ್ಯ ಬೀದಿಗಳಲ್ಲಿ ನಿರ್ಮಿಸಲಾದ ದೇವಾಲಯಗಳು ಏಕರೂಪದ ಮುಂಭಾಗಗಳನ್ನು ಹೊಂದಿವೆ ಎಂದು ಹೇಳಿದೆ.
Jaipur is a city associated with culture and valour. Elegant and energetic, Jaipur’s hospitality draws people from all over.
Glad that this city has been inscribed as a World Heritage Site by @UNESCO. https://t.co/1PIX4YjAC4
— Narendra Modi (@narendramodi) July 6, 2019
ಈಗ ಯುನೆಸ್ಕೋ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿ "ಜೈಪುರ ಸಂಸ್ಕೃತಿ ಮತ್ತು ಶೌರ್ಯಕ್ಕೆ ಸಂಬಂಧಿಸಿದ ನಗರವಾಗಿದೆ. ಸೊಗಸಾದ ಜೈಪುರದ ಆತಿಥ್ಯವು ಜನರನ್ನು ಸೆಳೆಯುತ್ತದೆ. ಈ ನಗರವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಪರಿಗಣಿಸಿರುವುದಕ್ಕೆ ಸಂತೋಷವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
Defence Minister Rajnath Singh on Jaipur declared a World Heritage site by UNESCO, today: It's a big achievement, I want to congratulate the people of Rajasthan, and entire country. pic.twitter.com/6EHcppxQJL
— ANI (@ANI) July 6, 2019
ಈ ಸಾಧನೆಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಜಸ್ಥಾನದ ಜನರನ್ನು ಅಭಿನಂದಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. "ಇದು ಒಂದು ದೊಡ್ಡ ಸಾಧನೆ, ನಾನು ರಾಜಸ್ಥಾನ ಮತ್ತು ಇಡೀ ದೇಶದ ಜನರನ್ನು ಅಭಿನಂದಿಸಲು ಬಯಸುತ್ತೇನೆ" ಎಂದು ರಾಜನಾಥ್ ಹೇಳಿದರು.
ಭಾರತವು ಈಗ 38 ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳನ್ನು ಹೊಂದಿದೆ. ಭಾರತ, ಚೀನಾ, ಇಂಡೋನೇಷ್ಯಾ, ಜಪಾನ್, ಲಾವೊ, ಬಹ್ರೇನ್ ಮತ್ತು ಆಸ್ಟ್ರೇಲಿಯಾದ ಏಳು ದೇಶಗಳ ಏಳು ತಾಣಗಳನ್ನು ಪರಂಪರೆಯ ಪಟ್ಟಿ ಸೇರಿಸಲಾಯಿತು.