ಖಂಡ್ವಾ: ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯಲ್ಲಿ ಅಕ್ರಮವಾಗಿ ಗೋವು ಸಾಗಿಸುತ್ತಿದ್ದರೆನ್ನಲಾದ 20 ಕ್ಕೂ ಅಧಿಕ ಮಂದಿಯನ್ನು ಕಟ್ಟಿಹಾಕಿದ ಗ್ರಾಮಸ್ಥರು 'ಗೋಮಾತೆಗೆ ಜೈ' ಎಂಬ ಘೋಷಣೆ ಹೇಳಿಸಿದ್ದಾರೆ.
#WATCH Several people tied with a rope and made to chant "Gau mata ki jai" in Khandwa, Madhya Pradesh on accusation of carrying cattle in their vehicles. (7.7.19) (Note - Abusive language) pic.twitter.com/5pbRZ4hNsR
— ANI (@ANI) July 7, 2019
ಗೋವುಗಳ ಕಳ್ಳಸಾಗಣೆ ಮಾಡುತ್ತಿದ್ದವರನ್ನು ಸನ್ವಾಲಿಖೆಡ ಗ್ರಾಮಸ್ಥರು ಎಂದು ಗುರುತಿಸಲಾಗಿದ್ದು, ಅವರು ವಾಹನಗಳಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ. ಗೋವುಗಳ ಕಳ್ಳಸಾಗಣೆ ವೇಳೆ ಸಿಕ್ಕವರನ್ನು ಗ್ರಾಮಸ್ಥರೇ ಹಿಡಿದು, ಹಗ್ಗದಲ್ಲಿ ಕಟ್ಟಿಹಾಕಿ 'ಗೋಮಾತೆಗೆ ಜೈ' ಘೋಷಣೆ ಹೇಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.