ಅನಿಮೇಷನ್‌ ಸರಣಿಯ ಮೂಲಕ ಸುಧಾ ಮೂರ್ತಿ ಮಕ್ಕಳ ಸಾಹಿತ್ಯಕ್ಕೆ ಜೀವ

ಲೇಖಕಿ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿರುವ ಸುಧಾ ಮೂರ್ತಿ ಅವರ ಮಕ್ಕಳ ಸಾಹಿತ್ಯ ಕೃತಿಗಳನ್ನು ಪರಿಚಯಿಸುತ್ತಿರುವ ಮೂರ್ತಿ ಮೀಡಿಯಾ “ಸ್ಟೋರಿ ಟೈಮ್‌ ವಿತ್‌ ಸುಧಾ ಅಮ್ಮ” ಹೆಸರಿನ ಅನಿಮೇಷನ್‌ ಸರಣಿಯನ್ನು ಪರಿಚಯಿಸುತ್ತಿದೆ.

Written by - Manjunath N | Last Updated : Nov 6, 2023, 04:09 PM IST
  • ಪ್ರೇರಣೆ ಮತ್ತು ಶಿಕ್ಷಣ ನೀಡುವುದರಲ್ಲಿ ಕಥೆಗಳಲ್ಲಿರುವ ಶಕ್ತಿಯಲ್ಲಿ ನನಗೆ ಸದಾ ನಂಬಿಕೆ ಇದೆ
  • ಈ ಸರಣಿಗೆ ಅನೇಕ ಯುವ ಮನಸ್ಸು ಮತ್ತು ಹೃದಯಗಳನ್ನು ತಲುಪುವ ಸಾಮರ್ಥ್ಯ ಇದೆ
  • ನೂತನ ಅನಿಮೇಷನ್‌ ಸರಣಿಯ ಪ್ರಸಾರ 2023ರ ಅಕ್ಟೋಬರ್‌ 31ರಿಂದ ಆರಂಭವಾಗಿದ್ದು
ಅನಿಮೇಷನ್‌ ಸರಣಿಯ ಮೂಲಕ ಸುಧಾ ಮೂರ್ತಿ ಮಕ್ಕಳ ಸಾಹಿತ್ಯಕ್ಕೆ ಜೀವ title=

ಬೆಂಗಳೂರು : ಲೇಖಕಿ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿರುವ ಸುಧಾ ಮೂರ್ತಿ ಅವರ ಮಕ್ಕಳ ಸಾಹಿತ್ಯ ಕೃತಿಗಳನ್ನು ಪರಿಚಯಿಸುತ್ತಿರುವ ಮೂರ್ತಿ ಮೀಡಿಯಾ “ಸ್ಟೋರಿ ಟೈಮ್‌ ವಿತ್‌ ಸುಧಾ ಅಮ್ಮ” ಹೆಸರಿನ ಅನಿಮೇಷನ್‌ ಸರಣಿಯನ್ನು ಪರಿಚಯಿಸುತ್ತಿದೆ.

ಸುಧಾ ಮೂರ್ತಿ ಅವರ ಜನಪ್ರಿಯ “ಗ್ರ್ಯಾಂಡ್‌ಮಾʼಸ್‌ ಬ್ಯಾಗ್‌ ಆಫ್‌ ಸ್ಟೋರಿಸ್‌”, “ಗ್ರ್ಯಾಂಡ್‌ಪೇರೆಂಟ್ಸ್‌ ಬ್ಯಾಗ್‌ ಆಫ್‌ ಸ್ಟೋರಿಸ್‌” ಮತ್ತು “ದಿ ಮ್ಯಾಜಿಕ್‌ ಡ್ರಮ್‌ ಆಂಡ್‌ ಅದರ್‌ ಫೇವರಿಟ್‌ ಸ್ಟೋರಿಸ್‌” ಕೃತಿಗಳನ್ನು ಆಧರಿಸಿ 52 ಸರಣಿಗಳನ್ನು ರೂಪಿಸಲಾಗಿದ್ದು, “ಮೂರ್ತಿ ಮೀಡಿಯಾ” ಯೂಟ್ಯೂಬ್‌ ಚಾನೆಲ್‌ನಲ್ಲಿ ಇದನ್ನು ಪ್ರಸಾರ ಮಾಡಲಾಗುತ್ತಿದೆ.

ಇದನ್ನೂಓದಿ- ವಿದ್ಯುತ್‌ ಬಳಕೆಯಲ್ಲಿ ಕಳೆದ ವರ್ಷಕ್ಕಿಂತ ಶೇ. 45 ರಷ್ಟು ಹೆಚ್ಚಳ-ಸಿಎಂ ಸಿದ್ದರಾಮಯ್ಯ

“ಸ್ಟೋರಿ ಟೈಮ್‌ ವಿತ್‌ ಸುಧಾ ಅಮ್ಮ” ಅನಿಮೇಟೆಡ್‌ ಸರಣಿ ಕನ್ನಡ, ಹಿಂದಿ, ಇಂಗ್ಲೀಷ್‌, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಲಭ್ಯವಿದೆ. ಈ ಮೂಲಕ ವಿವಿಧ ವರ್ಗಗಳ, ಅಭಿರುಚಿಯ ವೀಕ್ಷಕರಿಗೆ ಕಥೆಗಳನ್ನು ತಲುಪಿಸಲು ಉದ್ದೇಶಿಸಲಾಗಿದೆ.ಶಿಕ್ಷಣ ಮತ್ತು ಮನೋರಂಜನೆ ಎರಡಕ್ಕೂ ಒತ್ತು ನೀಡುತ್ತಿರುವ ಮೂರ್ತಿ ಮೀಡಿಯಾ “ಸ್ಟೋರಿ ಟೈಮ್‌ ವಿತ್‌ ಸುಧಾ ಅಮ್ಮ” ಸರಣಿಯ ಮೂಲಕ ಮಕ್ಕಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಪ್ರಯತ್ನ ಮಾಡಲಿದೆ.

ಇದನ್ನೂಓದಿ-Weather Update: ಕರ್ನಾಟಕದ ಈ ಭಾಗಗಳಲ್ಲಿ ಭಾರೀ ಮಳೆ ಸಾಧ್ಯತೆ.. ಗುಡುಗು ಮಿಂಚಿನ ಆರ್ಭಟ!

ಸರಣಿಯಲ್ಲಿರುವ ವಿಷಯಗಳು ಮಕ್ಕಳಿಗೆ ಮನೋರಂಜನೆ ಮಾತ್ರವಲ್ಲದೇ ಅವರ ಮನಸ್ಸುಗಳನ್ನು ವಿಕಸಿತಗೊಳಿಸಲಿವೆ. ಸರಣಿಯ ಥೀಮ್‌ ಹಾಡನ್ನು ಹೆಸರಾಂತ ಸಂಗೀತ ದಿಗ್ದರ್ಶಕರಾದ ಪ್ರಸೂನ್‌ ಜೋಶಿ ಮತ್ತು ಶಾಂತನು ಮೊಯ್ತ್ರಾ ರೂಪಿಸಿದ್ದು, ಅವರ ಮಾರ್ಗದರ್ಶನದಲ್ಲಿ ಇತ್ತೀಚೆಗೆ ಮಕ್ಕಳು ನೇರಪ್ರಸಾರದಲ್ಲಿ ಹಾಡಿದ್ದರು.

ಅನಿಮೇಷನ್‌ ಸರಣಿಯ ಬಿಡುಗಡೆಯ ಕುರಿತು ಮಾತನಾಡಿದ ಮೂರ್ತಿ ಮೀಡಿಯಾದ ಅಧ್ಯಕ್ಷರಾದ ಮತ್ತು ಸರಣಿಯ ಹಿಂದಿರುವ ಶಕ್ತಿಯಾಗಿರುವ ಅಪರ್ಣಾ ಕೃಷ್ಣನ್‌ “ಸ್ಟೋರಿ ಟೈಮ್‌ ವಿತ್‌ ಸುಧಾ ಅಮ್ಮ ಸರಣಿಯನ್ನು ಎಲ್ಲರಿಗೂ ದಕ್ಕುವ ಯೂಟ್ಯೂಬ್‌ ವೇದಿಕೆಯಲ್ಲಿ ಬಿಡುಗಡೆ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಶ್ರೀಮತಿ ಮೂರ್ತಿ ಅವರ ಕತೆಗಳಲ್ಲಿ ಮನೋರಂಜನೆಯ ಜೊತೆಗೆ ಜೀವನಕ್ಕೆ ಬೇಕಾದ ಅರ್ಥಪೂರ್ಣ ಪಾಠಗಳಿರುತ್ತವೆ. ಮಕ್ಕಳು ಮತ್ತು ಕುಟುಂಬಗಳು ಇದನ್ನು ವೀಕ್ಷಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದರು.

ಇದನ್ನೂಓದಿ-ಕೆ‌ಪಿ‌ಎಸ್‌ಸಿ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳ ಮಂಗಳಸೂತ್ರ, ಕಾಲುಂಗುರ ತೆಗೆಸಿದ್ದು ದುರ್ನಡತೆಯ ಪರಮಾವಧಿ: ಜೆಡಿಎಸ್

ಸುಧಾ ಮೂರ್ತಿ ಮಾತನಾಡಿ “ಪ್ರೇರಣೆ ಮತ್ತು ಶಿಕ್ಷಣ ನೀಡುವುದರಲ್ಲಿ ಕಥೆಗಳಲ್ಲಿರುವ ಶಕ್ತಿಯಲ್ಲಿ ನನಗೆ ಸದಾ ನಂಬಿಕೆ ಇದೆ. ಈ ಸರಣಿಗೆ ಅನೇಕ ಯುವ ಮನಸ್ಸು ಮತ್ತು ಹೃದಯಗಳನ್ನು ತಲುಪುವ ಸಾಮರ್ಥ್ಯ ಇದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನೂತನ ಅನಿಮೇಷನ್‌ ಸರಣಿಯ ಪ್ರಸಾರ 2023ರ ಅಕ್ಟೋಬರ್‌ 31ರಿಂದ ಆರಂಭವಾಗಿದ್ದು, ವಾರಕ್ಕೊಂದು ಕಥೆ ಪ್ರಸಾರಗೊಳ್ಳಲಿದೆ. ಯೂಟ್ಯೂಬ್‌ ಚಾನೆಲ್‌ ಲಿಂಕ್‌ ಇಲ್ಲಿದೆ; youtube.com/@Murty-Media

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News