ಬಲು ವಿಶೇಷ 2023ರ ವಿಶ್ವಕಪ್ : 12 ಸೀಸನ್ ಗಳಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ ಈ ಪವಾಡ !

World Cup 2023 Semi Finals: ವಿಶ್ವಕಪ್ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಪವಾಡ ಪ್ರಸಕ್ತ ಟೂರ್ನಿಯಲ್ಲಿ ನಡೆದಿದೆ. ಇಂಗ್ಲೆಂಡ್‌ನ ಗೆಲುವಿನಿಂದಾಗಿ ವಿಶ್ವಕಪ್‌ನಲ್ಲಿ ಇದು ಮೊದಲ ಬಾರಿಗೆ ಸಂಭವಿಸಿದೆ.

Written by - Ranjitha R K | Last Updated : Nov 9, 2023, 11:07 AM IST
  • ವಿಶ್ವಕಪ್ 2023 ರ 40 ಪಂದ್ಯಗಳು ಈಗಾಗಲೇ ಮುಕ್ತಾಯ
  • ಸೆಮಿಫೈನಲ್‌ ಪ್ರವೇಶಿಸಿರುವ ಮೂರು ತಂಡಗಳು
  • ಇಂಗ್ಲೆಂಡ್, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್ ಮತ್ತು ಶ್ರೀಲಂಕಾ ಹೊರಕ್ಕೆ
ಬಲು ವಿಶೇಷ 2023ರ ವಿಶ್ವಕಪ್ : 12 ಸೀಸನ್ ಗಳಲ್ಲಿ ಇದೇ ಮೊದಲ ಬಾರಿಗೆ  ನಡೆದಿದೆ ಈ ಪವಾಡ ! title=

World Cup 2023 Semi Finals : ವಿಶ್ವಕಪ್ 2023 ರ 40 ಪಂದ್ಯಗಳು ಈಗಾಗಲೇ ಮುಕ್ತಾಯವಾಗಿದೆ. ಇಷ್ಟು ಪಂದ್ಯಗಳ ನಂತರ, ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಮೂರು ತಂಡಗಳು ಸೆಮಿಫೈನಲ್‌ ಪ್ರವೇಶಿಸಿವೆ. ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನದ ತಂಡಗಳು ನಾಲ್ಕನೇ ಸ್ಥಾನಕ್ಕಾಗಿ ರೇಸ್‌ನಲ್ಲಿವೆ. ಇನ್ನು ಇಂಗ್ಲೆಂಡ್, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್ ಮತ್ತು ಶ್ರೀಲಂಕಾ 2023 ರ ವಿಶ್ವಕಪ್‌ನಿಂದ ಹೊರಗುಳಿಯುವ ತಂಡಗಳಾಗಿವೆ. ವಿಶ್ವಕಪ್ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಪವಾಡ ಪ್ರಸಕ್ತ ಟೂರ್ನಿಯಲ್ಲಿ ನಡೆದಿದೆ.

ಇಂಗ್ಲೆಂಡ್‌ನ ಗೆಲುವಿನಿಂದಾಗಿ ವಿಶ್ವಕಪ್‌ನಲ್ಲಿ ಇದು ಮೊದಲ ಬಾರಿಗೆ ಸಂಭವಿಸಿದೆ. ವಿಶ್ವಕಪ್ 2023 ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ತುಂಬಾ ಮುಜುಗರ ಕ್ಕೆ ಒಳಗಾಗಿದೆ. ಈ ತಂಡ ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆದ್ದು ಟೂರ್ನಿಯಿಂದ ಹೊರಬಿದ್ದಿದೆ. ನೆದರ್ಲೆಂಡ್ಸ್ ವಿರುದ್ಧದ ಎರಡನೇ ಗೆಲುವಿನೊಂದಿಗೆ ವಿಶ್ವಕಪ್‌ನಲ್ಲಿ ವಿಶೇಷ ಘಟನೆಯೊಂದು ನಡೆದಿದೆ.  ವಾಸ್ತವವಾಗಿ, ವಿಶ್ವಕಪ್‌ನ 12 ಸೀಸನ್‌ಗಳಲ್ಲಿ ಎಲ್ಲಾ ತಂಡಗಳು ಕನಿಷ್ಠ 2 ಪಂದ್ಯಗಳನ್ನು ಗೆದ್ದಿರುವ ಘಟನೆ ಹಿಂದೆಂದೂ ನಡೆದಿರಲಿಲ್ಲ. ಆದರೆ ಈ ಬಾರಿ  ಹಾಗಾಗಿದೆ. ಎಲ್ಲಾ 10 ತಂಡಗಳು ಕನಿಷ್ಠ 2 ಪಂದ್ಯಗಳನ್ನು ಗೆದ್ದಿವೆ. 

ಇದನ್ನೂ ಓದಿ : Joe Root: ಮಿಡ್ ಲೆಗ್ ಬಾಲ್.. ವಿಚಿತ್ರ ರೀತಿಯಲ್ಲಿ ಜೋ ರೂಟ್ ಕ್ಲೀನ್‌ಬೌಲ್ಡ್

 ಈ ಬಾರಿಯ ಪಾಯಿಂಟ್ ಟೇಬಲ್ ಹೀಗಿದೆ : 
ಆಡಿರುವ 8 ಪಂದ್ಯದಲ್ಲಿ 8 ರಲ್ಲೂ ಗೆಲುವು ಸಾಧಿಸಿರುವ ಭಾರತ ತಂಡವು 16 ಅಂಕಗಳೊಂದಿಗೆ ನಂಬರ್-1 ಆಗಿದೆ. ದಕ್ಷಿಣ ಆಫ್ರಿಕಾ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 12 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಈ ಮೂರು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ನಾಲ್ಕನೇ ಸ್ಥಾನಕ್ಕಾಗಿ ಪಾಕಿಸ್ತಾನ (8 ಪಂದ್ಯಗಳು-8 ಅಂಕಗಳು), ನ್ಯೂಜಿಲೆಂಡ್ (8 ಪಂದ್ಯಗಳು-8 ಅಂಕಗಳು) ಮತ್ತು ಅಫ್ಘಾನಿಸ್ತಾನ (8 ಪಂದ್ಯಗಳು-8 ಅಂಕಗಳು) ನಡುವೆ  ಕಾದಾಟ ಮುಂದುವರಿದಿದೆ. ಇನ್ನು ಇಂಗ್ಲೆಂಡ್ (8 ಪಂದ್ಯಗಳು - 4 ಅಂಕಗಳು), ಬಾಂಗ್ಲಾದೇಶ (8 ಪಂದ್ಯಗಳು - 4 ಅಂಕಗಳು), ಶ್ರೀಲಂಕಾ (8 ಪಂದ್ಯಗಳು - 4 ಅಂಕಗಳು) ಮತ್ತು ನೆದರ್ಲ್ಯಾಂಡ್ಸ್ (8 ಪಂದ್ಯಗಳು - 4 ಅಂಕಗಳು) ಟೂರ್ನಿಯಿಂದ ಹೊರಗುಳಿದಿವೆ. 

ತನ್ನ ಎರಡನೇ ಗೆಲುವು ದಾಖಲಿಸಿದ ಇಂಗ್ಲೆಂಡ್  : 
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನೆದರ್ಲೆಂಡ್ಸ್ ಅನ್ನು 160 ರನ್‌ಗಳಿಂದ ಸೋಲಿಸುವ ಮೂಲಕ ಹಾಲಿ ಚಾಂಪಿಯನ್ ಇಂಗ್ಲೆಂಡ್ ಪಂದ್ಯಾವಳಿಯಲ್ಲಿ ತನ್ನ ಎರಡನೇ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆನ್ ಸ್ಟೋಕ್ಸ್ (108) ಮತ್ತು ಮೊಯಿನ್ ಅಲಿ ಅವರ 51 ರನ್‌ಗಳ ಅದ್ಭುತ ಶತಕದಿಂದಾಗಿ ತಂಡವು 9 ವಿಕೆಟ್ ಕಳೆದುಕೊಂಡು 339 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಉತ್ತರವಾಗಿ ನೆದರ್ಲೆಂಡ್ಸ್ ಬ್ಯಾಟ್ಸ್‌ಮನ್‌ಗಳು ಕೇವಲ 37.2 ಓವರ್‌ಗಳಲ್ಲಿ ಕೇವಲ 179 ರನ್‌ಗಳಿಗೆ ಆಲೌಟ್ ಆಯಿತು. 

ಇದನ್ನೂ ಓದಿ :ಶಾಕಿಂಗ್…! ಜಸ್ಪ್ರೀತ್ ಬುಮ್ರಾ ಎಸೆದ ಬಾಲ್ ಹೊಟ್ಟೆಗೆ ಬಡಿದು ಕುಸಿದುಬಿದ್ದ ಟೀಂ ಇಂಡಿಯಾದ ಸ್ಟಾರ್ ಆಟಗಾರ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News