ಧನತ್ರಯೋದಶಿಯಂದೇ ಭರ್ಜರಿ ಇಳಿಕೆಯಾಯಿತು ಚಿನ್ನದ ದರ ! ಬೆಳ್ಳಿ ಕೂಡಾ ಬಲು ಅಗ್ಗ

Gold and Silver Price Today :ಈ ಇಡೀ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಇಂದು ಕೂಡಾ ಹಳದಿ ಲೋಹದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. 

Written by - Ranjitha R K | Last Updated : Nov 10, 2023, 08:55 AM IST
  • ದೇಶಾದ್ಯಂತ ದೀಪಾವಳಿ ಸಡಗರ ಮನೆ ಮಾಡಿದೆ.
  • ಚಿನ್ನ ಬೆಳ್ಳಿ ಖರೀದಿಗೆ ಬಹಳ ಮಹತ್ವವಿದೆ
  • ಹಳದಿ ಲೋಹದ ಬೆಲೆಯಲ್ಲಿ ಕುಸಿತ
ಧನತ್ರಯೋದಶಿಯಂದೇ  ಭರ್ಜರಿ ಇಳಿಕೆಯಾಯಿತು ಚಿನ್ನದ ದರ  ! ಬೆಳ್ಳಿ ಕೂಡಾ ಬಲು ಅಗ್ಗ  title=

Gold and Silver Price Today : ದೇಶಾದ್ಯಂತ ದೀಪಾವಳಿ ಸಡಗರ  ಮನೆ ಮಾಡಿದೆ. ಇಂದು ಧನತ್ರಯೋದಶಿ. ಅಂದರೆ ಚಿನ್ನ  ಬೆಳ್ಳಿ ಖರೀದಿಗೆ ಬಹಳ ಮಹತ್ವವಿದೆ. ಧನತ್ರಯೋದಶಿಗಿಂತ ಮುನ್ನವೇ ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಈ ಇಡೀ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಇಂದು ಕೂಡಾ ಹಳದಿ ಲೋಹದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. 

ಚಿನ್ನದ ಬೆಲೆಯಲ್ಲಿ ಕುಸಿತ : 
ದುರ್ಬಲ ಜಾಗತಿಕ ಸೂಚನೆಗಳ ನಡುವೆ, ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದು, 10 ಗ್ರಾಂ ಬಂಗಾರದ ಬೆಲೆ 60,750 ರೂಪಾಯಿ ಆಗಿದೆ. ಕಳೆದ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 61,350 ರೂ. ಆಗಿತ್ತು. 

ಇದನ್ನೂ ಓದಿ : 2024ರಿಂದ 8ನೇ ವೇತನ ಆಯೋಗ ! ಕೈ ಸೇರುವ ವೇತನದಲ್ಲಿ 44.44 ಶೇ. ದಷ್ಟು ಹೆಚ್ಚಳ

22 ಕ್ಯಾರೆಟ್ ಚಿನ್ನದ ಬೆಲೆ : 
ದೆಹಲಿಯಲ್ಲಿ -55,850 ರೂ
ಬೆಂಗಳೂರು -  55,690ರೂ.
ಚೆನ್ನೈ - 56,140 ರೂ. 
ಮುಂಬೈ - 55,690ರೂ.. 
ಕೋಲ್ಕತ್ತಾ - 55,690ರೂ.
ಕೇರಳ - 55,690ರೂ.

ಅಗ್ಗವಾಯಿತು ಬೆಳ್ಳಿ : 
ಚಿನ್ನದ ದರದೊಂದಿಗೆ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆಯೂ ಕುಸಿದಿದೆ. ಬೆಳ್ಳಿಯ ಬೆಲೆಯೂ 300 ರೂಪಾಯಿ ಇಳಿಕೆಯಾಗಿ ಪ್ರತಿ ಕೆಜಿಗೆ 73,200 ರೂಪಾಯಿಗಳಿಗೆ ತಲುಪಿದೆ.

ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ : (100 ಗ್ರಾಮ್ ಗಳಲ್ಲಿ )
ದೆಹಲಿಯಲ್ಲಿ -7,320ರೂ
ಬೆಂಗಳೂರು -7,200 ರೂ.
ಚೆನ್ನೈ -7,620 ರೂ.
ಮುಂಬೈ - 7,320 ರೂ.
ಕೋಲ್ಕತ್ತಾ - 7,320 ರೂ.

ಇದನ್ನೂ ಓದಿ: PPF Account: ನಿಮ್ಮ ಪಿ‌ಪಿ‌ಎಫ್ ಖಾತೆ ಬಂದ್ ಆಗಿದೆಯೇ? ಇಂದೇ ಈ ಕೆಲಸ ಮಾಡಿ, ಇಲ್ಲವೇ ಭಾರೀ ನಷ್ಟ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ​ ಎಷ್ಟಿದೆ ಬೆಲೆ : 
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 1,950 ಡಾಲರ್‌ಗೆ ಕುಸಿದಿದ್ದು, ಬೆಳ್ಳಿ ಕೂಡ ಪ್ರತಿ ಔನ್ಸ್‌ಗೆ 22.45 ಡಾಲರ್‌ಗೆ ಇಳಿಕೆಯಾಗಿದೆ. 

10 ಗ್ರಾಂ ಬೆಲೆಯನ್ನು ಪರಿಶೀಲಿಸಿ : 
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ಈ ನಂಬರ್ ಗೆ ಮಿಸ್ಕಾಲ್ ಕೊಡುತ್ತಿದ್ದಂತೆಯೇ ಇಂದಿನ ಬೆಲೆ ಎಷ್ಟಿದೆ ಎನ್ನುವ ಮೆಸೇಜ್ ನಿಮ್ಮ ಮೊಬೈಲ್ ಗೆ ಬರುತ್ತದೆ. 

ಇದನ್ನೂ ಓದಿ : ವಿಸ್ತಾರ ಏರ್ಲೈನ್ಸ್ ಫೆಸ್ಟಿವಲ್‌ ಸೇಲ್:‌ ಭಾರಿ ರಿಯಾಯಿತಿ ಹಾಗೂ ಆಫರ್‌ಗಳು ಲಭ್ಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News