ಬಿಗ್ ಬಾಸ್ ನಿಯಮ ಮೀರಿ ಅರ್ಧಕ್ಕೆ ಹೊರ ಬರುವವರಿಗೆ ಬೀಳುತ್ತೆ ಭಾರೀ ದಂಡ.!

Bigg Boss Kannada Season 10 : ಮೂರು ತಿಂಗಳ ಕಾಲ ನಡೆಯುವ ಈ ರಿಯಾಲಿಟಿ ಶೋ ಗೆ ಬರುವ ಮುನ್ನವೇ ಒಪ್ಪಂದ ನಡೆದಿರುತ್ತದೆ. ಭಾರತದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಬಿಗ್‌ ಬಾಸ್‌ ಪ್ರಸಾರವಾಗುತ್ತದೆ.

Written by - Chetana Devarmani | Last Updated : Nov 12, 2023, 02:33 PM IST
  • ಬಿಗ್ ಬಾಸ್ ಕನ್ನಡ 10
  • ಐದನೇ ವಾರದ ಎಲಿಮಿನೇಷನ್‌
  • ಅರ್ಧಕ್ಕೆ ಹೊರ ಬರುವವರಿಗೆ ಬೀಳುತ್ತೆ ದಂಡ.!
ಬಿಗ್ ಬಾಸ್ ನಿಯಮ ಮೀರಿ ಅರ್ಧಕ್ಕೆ ಹೊರ ಬರುವವರಿಗೆ ಬೀಳುತ್ತೆ ಭಾರೀ ದಂಡ.!  title=

Bigg Boss Rules To leave the show midway: ಬಿಗ್ ಬಾಸ್ ಕನ್ನಡ 10 ರ ಐದನೇ ವಾರದ ಎಲಿಮಿನೇಷನ್‌ ಸಿಕ್ಕಾಪಟ್ಟೆ ಗೊಂದಲಕ್ಕೆ ಕಾರಣವಾಗಿದೆ. ಈ ಬಾರಿ 34 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ವರ್ತೂರ್‌ ಸಂತೋಷ್‌ ಸೇವ್‌ ಆದರೂ ತಾವು ಹೊರ ಹೋಗುವುದಾಗಿ ಹೇಳಿದ್ದಾರೆ. ಹುಲಿ ಉಗುರಿನ ಪ್ರಕರಣದಿಂದ ಮನನೊಂದಿರುವ ಸಂತೋಷ್‌ ಬಿಗ್‌ ಬಾಸ್‌ ಮನೆಯಲ್ಲಿರಲು ಆಗುತ್ತಿಲ್ಲ ಎಂದು ಹೇಳಿದ್ದಾರೆ. 

ಬಿಗ್ ಬಾಸ್ ಸ್ಪರ್ಧಿ ವರ್ತೂರ್‌ ಸಂತೋಷ್ ಹುಲಿ ಉಗುರನ್ನು ಧರಿಸಿದ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. ಆ ಬಳಿಕ ಜಾಮೀನು ಪಡೆದು, ಬಿಗ್‌ ಬಾಸ್‌ ಮನೆಗೆ ಮರಳಿ ಬಂದಿದ್ದಾರೆ. ಆದರೆ ಸಂತೋಷ್‌ ಈ ವಾರ ಸೇಫ್‌ ಆದರೂ ತಾವು ಹೊರ ಹೋಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಆದರೆ ಬಿಗ್‌ ಬಾಸ್‌ ಮನೆಯಿಂದ ಹಾಗೆಲ್ಲ ಮನಸೋ ಇಚ್ಛೆ ಹೊರ ಬರಲು ಸಾಧ್ಯವಿಲ್ಲ. ಅಲ್ಲಿ ಎಲ್ಲವೂ ಒಪ್ಪಂದದ ಪ್ರಕಾರ ನಡೆಯುತ್ತಿದೆ. 

ಇದನ್ನೂ ಓದಿ : Bigg Boss 10 : ಈ ವಾರ ವರ್ತೂರ್‌ ಸಂತೋಷ್‌ ಪಡೆದ ಮತಗಳು ಎಷ್ಟು ಲಕ್ಷ ಗೊತ್ತೇ! 

ಮೂರು ತಿಂಗಳ ಕಾಲ ನಡೆಯುವ ಈ ರಿಯಾಲಿಟಿ ಶೋ ಗೆ ಬರುವ ಮುನ್ನವೇ ಒಪ್ಪಂದ ನಡೆದಿರುತ್ತದೆ. ಭಾರತದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಬಿಗ್‌ ಬಾಸ್‌ ಪ್ರಸಾರವಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಹಿಂದಿಯಲ್ಲಿ ಸಲ್ಮಾನ್ ಖಾನ್ ಬಿಗ್‌ ಬಾಸ್‌ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಪ್ರತಿ ವರ್ಷ ಕೆಲವರು ಬಿಗ್‌ ಬಾಸ್‌ ಶೋನಿಂದ ಅರ್ಧಕ್ಕೆ ಹೊರ ಹೋಗುವ ಪ್ರಯತ್ನ ಮಾಡ್ತಾರೆ. ಆದರೆ ಈ ರೀತಿ ಕಡಿಮೆ ಮತ ಪಡೆದು ಎಲಿಮಿನೇಟ್‌ ಆಗದೇ, ಅರ್ಧಕ್ಕೆ ಶೋನಿಂದ ಹೊರ ಹೋಗಲು ಬಯಸುವ ಸ್ಪರ್ಧಿಗಳು ದೊಡ್ಡ ಮೊತ್ತದ ದಂಡ ಪಾವತಿಸಬೇಕು ಎಂಬ ನಿಯಮವಿದೆ.

ಬಿಗ್‌ ಬಾಸ್‌ ಸ್ಪರ್ಧಿಗಳು ಮತ್ತು ಬಿಗ್ ಬಾಸ್ ಆಯೋಜಕರ ಮಧ್ಯೆ ಒಪ್ಪಂದ ಆಗಿರುತ್ತದೆ. ಬಿಗ್ ಬಾಸ್‌ನಿಂದ ಅರ್ಧಕ್ಕೆ ಹೊರಬರುವ ಹಾಗಿಲ್ಲ ಎಂಬ ವಿಚಾರ ಸೇರಿ ಅನೇಕ ನಿಯಮಗಳು ಇರುತ್ತವೆ. ಹಾಗೊಂದು ವೇಳೆ ಅರ್ಧಕ್ಕೆ ಹೊರಬರ ಬೇಕೆಂದರೆ 2 ಕೋಟಿ ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಆದರೆ ಇದೇ ನಿಯಮ ಕನ್ನಡದ ಬಿಗ್‌ ಬಾಸ್‌ ಸ್ಪರ್ಧಿಗಳಿಗೂ ಅನ್ವಯವಾಗುತ್ತಾ ಕಾದು ನೋಡಬೇಕಿದೆ. 

ಇದನ್ನೂ ಓದಿ : BBK10: ಬಿಗ್‌ಬಾಸ್‌ ಮನೆಯ ಐದನೇ ವಾರ ಬೆಸ್ಟ್‌ ಡ್ರೋನ್‌ ಪ್ರತಾಪ್‌ : ಕಳಪೆಯಾದ ನೀತು, ಇಶಾನಿ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News