Team india ICC World Cup final : ವಿಶ್ವಕಪ್-2023ರ ಚಾಂಪಿಯನ್ ಆಗಲು ಭಾರತ ತಂಡ ಕೇವಲ ಒಂದು ಹೆಜ್ಜೆ ದೂರದಲ್ಲಿದೆ. ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 70 ರನ್ ಗಳಿಂದ ಸೋಲಿಸಿದ ಟೀಂ ಇಂಡಿಯಾ ಅಜೇಯನಾಗಿ ಫೈನಲ್ ಪ್ರವೇಶಿಸಿದೆ. ಇದೀಗ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯವನ್ನು ಆಡಲಿದೆ.
ಇಂದು ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯುತ್ತಿದ್ದು, ಗೆದ್ದ ತಂಡವನ್ನು ಭಾರತ ಎದುರಿಸಲಿದೆ. ಇದರ ಹಿನ್ನೆಲೆ ವಿಶ್ವಕಪ್ ಫೈನಲ್ಗಾಗಿ ಟೀಂ ಇಂಡಿಯಾ ಅಹಮದಾಬಾದ್ಗೆ ತಲುಪಿದ್ದು, ಐಟಿಸಿ ನರ್ಮದಾ ಹೋಟೆಲ್ನಲ್ಲಿ ತಂಗಿದೆ.
ಇದನ್ನೂ ಓದಿ:ಇವರೇ ಟೀಮ್ ಇಂಡಿಯಾದ ಮುಂದಿನ ಹಾರ್ದಿಕ್ ಪಾಂಡ್ಯ.. ಭಾರತದ ಆಲ್ ರೌಂಡರ್ ಆಗಿ ಮಿಂಚ್ತಾರಾ ಈ ಯುವ ಆಟಗಾರ?
ನೆಟ್ ಅಭ್ಯಾಸ : ನಿನ್ನೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 70ರನ್ಗಳ ಅಂತರದಲ್ಲಿ ಸೋಲಿಸಿತು. ಈಗಾಗಲೇ ವಿಶ್ವಕಪ್ 2023ರ ಲೀಗ್ನಲ್ಲಿ ಭಾರತ ತಂಡವು ಅಹಮದಾಬಾದ್ನಲ್ಲಿ ಒಂದು ಪಂದ್ಯವನ್ನು ಆಡಿದೆ, ಇದೇ ಮೈದಾನದಲ್ಲಿ ರೋಹಿತ್ ಪಡೆ ಪಾಕಿಸ್ತಾನವನ್ನು ಸೋಲಿಸಿತು. ಇದೀಗ ಇತಿಹಾಸ ಸೃಷ್ಟಿಸಲು ಸಿದ್ಧವಾಗಿದೆ. ನಾಳೆ ಅಹಮದಾಬಾದ್ನಲ್ಲಿ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ತಂಡ ನೆಟ್ ಅಭ್ಯಾಸ ನಡೆಸಲಿದೆ.
ದರ ಏರಿಕೆ : ಅಹಮದಾಬಾದ್ನಲ್ಲಿ ಕ್ರಿಕೆಟ್ ವಿಶ್ವಕಪ್ ಫೈನಲ್ ಆಯೋಜನೆಗೊಂಡ ಹಿನ್ನಲೆ, ಅಲ್ಲಿನ ಹೋಟೆಲ್ ಉದ್ಯಮವು ಅಭಿವೃದ್ಧಿ ಹೊಂದುತ್ತಿದೆ. ವಿಶ್ವಕಪ್ ಫೈನಲ್ನಿಂದಾಗಿ ಹೋಟೆಲ್ ಬಾಡಿಗೆ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೇವಲ ಒಂದು ದಿನದ ಬಾಡಿಗೆ 50 ಸಾವಿರ ಗಡಿ ದಾಟಿದೆ. ಸಾಮಾನ್ಯ ದಿನಗಳಲ್ಲಿ ರೂಮ್ ಬಾಡಿಗೆ 4 ರಿಂದ 5 ಸಾವಿರ ರೂಪಾಯಿ ಇತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.