ಟೀಂ ಇಂಡಿಯಾದ ಈ 4 ಆಟಗಾರರಿಗೆ ಇದೇ ಕೊನೆಯ ವಿಶ್ವಕಪ್! ರಾಹುಲ್ ದ್ರಾವಿಡ್ ಜೊತೆ ಅಂತ್ಯವಾಯ್ತು ಇವರ ಕ್ರಿಕೆಟ್ ಬದುಕು

last ODI World Cup for these 4 players: ಟೀಂ ಇಂಡಿಯಾದ 4 ಆಟಗಾರರಿಗೆ ಬಹುಶಃ ಇದುವೇ ಕೊನೆಯ ಏಕದಿನ ವಿಶ್ವಕಪ್ ಆಗಲಿದೆ ಎನ್ನಲಾಗುತ್ತಿದೆ. ಮುಂದಿನ ಏಕದಿನ ವಿಶ್ವಕಪ್ 2027 ರಲ್ಲಿ ನಡೆಯಲಿದ್ದು, ಆ ಸಂದರ್ಭದಲ್ಲಿ ಈ ನಾಲ್ವರು ಖಚಿತವಾಗಿ ನಿವೃತ್ತಿ ಘೋಷಿಸಲಿದ್ದಾರೆ.

Written by - Bhavishya Shetty | Last Updated : Nov 22, 2023, 12:16 AM IST
    • ಈ ಎಲ್ಲದರ ಮಧ್ಯೆ ಇದೀಗ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ.
    • ಟೀಂ ಇಂಡಿಯಾದ 4 ಆಟಗಾರರಿಗೆ ಇದುವೇ ಕೊನೆಯ ಏಕದಿನ ವಿಶ್ವಕಪ್!
    • ಆ ಸಂದರ್ಭದಲ್ಲಿ ಈ ನಾಲ್ವರು ಖಚಿತವಾಗಿ ನಿವೃತ್ತಿ ಘೋಷಿಸಲಿದ್ದಾರೆ
ಟೀಂ ಇಂಡಿಯಾದ ಈ 4 ಆಟಗಾರರಿಗೆ ಇದೇ ಕೊನೆಯ ವಿಶ್ವಕಪ್! ರಾಹುಲ್ ದ್ರಾವಿಡ್ ಜೊತೆ ಅಂತ್ಯವಾಯ್ತು ಇವರ ಕ್ರಿಕೆಟ್ ಬದುಕು title=
World Cup 2023

World Cup 2023: ಕಳೆದ ಭಾನುವಾರ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯ ವಿರುದ್ಧ 6 ವಿಕೆಟ್‌’ಗಳ ಸೋಲನ್ನು ಎದುರಿಸಬೇಕಾಯಿತು. ಈ ಮೂಲಕ 12 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆಲ್ಲುವ ಟೀಂ ಇಂಡಿಯಾದ ಕನಸು ಕಮರಿಹೋಗಿತ್ತು.

ಇದನ್ನೂ ಓದಿ: ಭಾರತದ ಈ ಆಟಗಾರ ವಿಶ್ವದ ಅತ್ಯಂತ ನತದೃಷ್ಟ ವ್ಯಕ್ತಿ: ಟ್ರಾವಿಸ್ ಹೆಡ್ ಹೇಳಿದ್ದು ಯಾರ ಬಗ್ಗೆ?

ಈ ಎಲ್ಲದರ ಮಧ್ಯೆ ಇದೀಗ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಅದೇನೆಂದರೆ ಟೀಂ ಇಂಡಿಯಾದ 4 ಆಟಗಾರರಿಗೆ ಬಹುಶಃ ಇದುವೇ ಕೊನೆಯ ಏಕದಿನ ವಿಶ್ವಕಪ್ ಆಗಲಿದೆ ಎನ್ನಲಾಗುತ್ತಿದೆ. ಮುಂದಿನ ಏಕದಿನ ವಿಶ್ವಕಪ್ 2027 ರಲ್ಲಿ ನಡೆಯಲಿದ್ದು, ಆ ಸಂದರ್ಭದಲ್ಲಿ ಈ ನಾಲ್ವರು ಖಚಿತವಾಗಿ ನಿವೃತ್ತಿ ಘೋಷಿಸಲಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅವರ ವಯಸ್ಸು.

1. ರೋಹಿತ್ ಶರ್ಮಾ:

36 ವರ್ಷ ವಯಸ್ಸಿನ ಭಾರತೀಯ ನಾಯಕ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಬಹುಶಃ ತಮ್ಮ ಕೊನೆಯ ಏಕದಿನ ವಿಶ್ವಕಪ್ ಆಡಿದ್ದಾರೆ. ಏಕೆಂದರೆ ಮುಂಬರುವ ಏಕದಿನ ವಿಶ್ವಕಪ್ 2027ರಲ್ಲಿ ನಡೆಯಲಿದ್ದು, ಆ ಸಂದರ್ಭದಲ್ಲಿ ರೋಹಿತ್ ವಯಸ್ಸು 40 ವರ್ಷ ಆಗಿರಲಿದೆ. ಈ ವಯಸ್ಸಿನಲ್ಲಿ ಆಡುವುದು ದೊಡ್ಡ ಸವಾಲು ಎಂದೇ ಹೇಳಬಹುದು. ಇದೇ ಆಧಾರದಲ್ಲಿ 2023ರ ವಿಶ್ವಕಪ್ ರೋಹಿತ್ ಶರ್ಮಾಗೆ ಕೊನೆಯ ಐಸಿಸಿ ಪಂದ್ಯಾವಳಿ ಆಗಿರಬಹುದು ಎಂದು ಹೇಳಲಾಗುತ್ತಿದೆ.

2. ಮೊಹಮ್ಮದ್ ಶಮಿ:

33 ವರ್ಷದ ಭಾರತೀಯ ವೇಗದ ಬೌಲರ್ ಮೊಹಮ್ಮದ್ ಶಮಿಗೂ ಕೂಡ ಬಹುಶಃ ಇದು ಕೊನೆಯ ಪಂದ್ಯಾವಳಿ.  2027ರ ವಿಶ್ವಕಪ್ ವೇಳೆಗೆ ಮೊಹಮ್ಮದ್ ಶಮಿಯ ವಯಸ್ಸು 37 ವರ್ಷ ಆಗಿರುತ್ತದೆ. ಆ ಸಂದರ್ಭದಲ್ಲಿ ಆಡುವುದು ಕಷ್ಟ.  

3. ರವಿಚಂದ್ರನ್ ಅಶ್ವಿನ್:

ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್’ಗೆ ಇದೀಗ 37 ವರ್ಷ. ಹೀಗಿರುವಾಗ ಮುಂದಿನ ಏಕದಿನ ವಿಶ್ವಕಪ್ ಆಡುವುದು ಅಸಾಧ್ಯವೇ ಎನ್ನಲಾಗುತ್ತಿದೆ. ಏಕೆಂದರೆ 2027ರ ವಿಶ್ವಕಪ್ ವೇಳೆಗೆ ಅಶ್ವಿನ್ ಅವರಿಗೆ 41 ವರ್ಷವಾಗಿರುತ್ತದೆ.

4 ರವೀಂದ್ರ ಜಡೇಜಾ:

34 ವರ್ಷದ ಭಾರತೀಯ ಆಲ್‌’ರೌಂಡರ್ ರವೀಂದ್ರ ಜಡೇಜಾಗೂ ಇದು ಕೊನೆಯ ಏಕದಿನ ವಿಶ್ವಕಪ್‌ ಆಗಿದೆ ಎಂದನಿಸುತ್ತದೆ. ಏಕೆಂದರೆ 2027ರಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯ ವೇಳೆಗೆ ಅವರ ವಯಸ್ಸು 38 ಆಗಿರುತ್ತದೆ. ಫಿಟ್ನೆಸ್ ಕಾಯ್ದುಕೊಂಡರೆ ಆಡುವ ಅವಕಾಶವೂ ಇದೆ. ಆದರೆ ಕೆಲ ಮೂಲಗಳ ಮಾಹಿತಿ ಪ್ರಕಾರ ಜಡೇಜಾಗೆ ಇದು ಕೊನೆಯ ಪಂದ್ಯಾವಳಿ. 

ಇದನ್ನೂ ಓದಿ: 2024ರ ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾ ಪ್ರಕಟ: ಈ ಆಟಗಾರನೇ ನಾಯಕ- ರೋಹಿತ್, ಕೊಹ್ಲಿಗಿಲ್ಲ ಸ್ಥಾನ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News