ದ್ರಾವಿಡ್ ಬಳಿಕ ಭಾರತದ ಮುಖ್ಯ ಕೋಚ್ ಯಾರಾಗ್ತಾರೆ? ಪಟ್ಟಿಯಲ್ಲಿ ಎಲ್ಲರಕ್ಕಿಂತ ಮುಂಚೂಣಿಯಲ್ಲಿದೆ ಈ ದಿಗ್ಗಜನ ಹೆಸರು

Who will be the next Head Coach of India: ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್‌’ನ ಫೈನಲ್‌’ನಲ್ಲಿ ಸೋಲಿನ ಬರೆ ತಂಡಕ್ಕೆ ಬಿದ್ದಿತ್ತು. ಇದೀಗ ದ್ರಾವಿಡ್ ಅವರ ಒಪ್ಪಂದದ ಅವಧಿಯೂ ಮುಗಿದಿದೆ.

Written by - Bhavishya Shetty | Last Updated : Nov 23, 2023, 06:04 PM IST
    • ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್
    • ಇದೀಗ ದ್ರಾವಿಡ್ ಅವರ ಒಪ್ಪಂದದ ಅವಧಿಯೂ ಮುಗಿದಿದೆ.
    • ಈ ಹಿನ್ನೆಲೆಯಲ್ಲಿ ಅವರ ಸ್ಥಾನವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಕಾಡುತ್ತಿದೆ.
ದ್ರಾವಿಡ್ ಬಳಿಕ ಭಾರತದ ಮುಖ್ಯ ಕೋಚ್ ಯಾರಾಗ್ತಾರೆ? ಪಟ್ಟಿಯಲ್ಲಿ ಎಲ್ಲರಕ್ಕಿಂತ ಮುಂಚೂಣಿಯಲ್ಲಿದೆ ಈ ದಿಗ್ಗಜನ ಹೆಸರು  title=
Rahul Dravid

Who will be the next Head Coach of India: ICC ODI ವಿಶ್ವಕಪ್ 2023ರ ಫೈನಲ್‌’ನಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಆಸ್ಟ್ರೇಲಿಯಾ ಹೀನಾಯವಾಗಿ ಸೋಲಿಸಿತು. ಈ ಸೋಲಿನೊಂದಿಗೆ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರ ಒಪ್ಪಂದದ ಅವಧಿಯೂ ಅಂತ್ಯಗೊಂಡಿದೆ. ಈ ಬೆನ್ನಲ್ಲೇ ದ್ರಾವಿಡ್ ಮತ್ತೆ ಆ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಟಿ20 ಸರಣಿ ಆರಂಭಕ್ಕೂ ಮುನ್ನವೇ ಪಂದ್ಯದಿಂದ ಹೊರಬಿದ್ದ ಸ್ಟಾರ್ ಬೌಲರ್

ಮುಂದಿನ ಮುಖ್ಯ ಕೋಚ್ ಯಾರು?

ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್‌’ನ ಫೈನಲ್‌’ನಲ್ಲಿ ಸೋಲಿನ ಬರೆ ತಂಡಕ್ಕೆ ಬಿದ್ದಿತ್ತು. ಇದೀಗ ದ್ರಾವಿಡ್ ಅವರ ಒಪ್ಪಂದದ ಅವಧಿಯೂ ಮುಗಿದಿದೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಕಾಡುತ್ತಿದೆ.  

ದ್ರಾವಿಡ್ ನಂತರ, ಟೀಂ ಇಂಡಿಯಾದ ಮುಖ್ಯ ಕೋಚ್ ಜವಾಬ್ದಾರಿಯನ್ನು ಅನುಭವಿ ವಿವಿಎಸ್ ಲಕ್ಷ್ಮಣ್ ಅವರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಭಾರತ ತಂಡವು ನವೆಂಬರ್ 23 ರಿಂದ ಅಂದರೆ ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ 20 ಸರಣಿಯನ್ನು ಆಡಲಿದ್ದು, ಲಕ್ಷ್ಮಣ್ ಅವರು ಕೋಚ್ ಆಗಿ ತಂಡದೊಂದಿಗೆ ಇದ್ದಾರೆ. ಲಕ್ಷ್ಮಣ್ ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ವರದಿಯೊಂದರ ಪ್ರಕಾರ, ರಾಹುಲ್ ದ್ರಾವಿಡ್ ಅವರು ತಮ್ಮ ಕೋಚ್ ಗುತ್ತಿಗೆಯನ್ನು ವಿಸ್ತರಿಸುವ ಮನಸ್ಥಿತಿಯಲ್ಲಿಲ್ಲ. ಟೀಂ ಇಂಡಿಯಾದ ಮುಖ್ಯ ಕೋಚ್ ಆಗಲು ಲಕ್ಷ್ಮಣ್ ಆಸಕ್ತಿ ತೋರಿಸಿದ್ದಾರೆ ಎಂಬ ಹೇಳಿಕೆಗಳೂ ಇವೆ. ಅವರು ಕೋಚ್‌ ಆದರೆ ಮುಂದಿನ ವರ್ಷ ಟಿ20 ವಿಶ್ವಕಪ್‌ ಲಕ್ಷ್ಮಣ್‌ ಮಾರ್ಗದರ್ಶನದಲ್ಲಿ ನಡೆಯಲಿದೆ.

ಇದನ್ನೂ ಓದಿ: ದಕ್ಷಿಣ ಭಾರತದ ಈ ಭಾಗಗಳಲ್ಲಿ ಮುಂದಿನ 5 ದಿನ ಕುಂಭದ್ರೋಣ ಮಳೆ! ಗುಡುಗು ಸಹಿತ ಬಲವಾದ ಗಾಳಿ ಬೀಸುವ ಮುನ್ನೆಚ್ಚರಿಕೆ

ಮತ್ತೊಂದು ವರದಿಯ ಪ್ರಕಾರ, ವಿಶ್ವಕಪ್ ಸಂದರ್ಭದಲ್ಲಿ ಲಕ್ಷ್ಮಣ್ ಈ ನಿಟ್ಟಿನಲ್ಲಿ ಅಹಮದಾಬಾದ್‌’ನಲ್ಲಿ ಬಿಸಿಸಿಐನ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿ ಅವರನ್ನು ಕಳುಹಿಸಬಹುದು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News