Viral Video: ಕಿಕ್ಕಿರಿದ ಮೆಟ್ರೋದಲ್ಲಿ ಈ ತಾತ ಮಾಡಿದ ಅವಾಂತರ ನೋಡಿ..!

Delhi Metro Viral Video: ಈ ವಿಡಿಯೋದಲ್ಲಿ ವೃದ್ಧ ವ್ಯಕ್ತಿ ತಮ್ಮ ಜೇಬಿನಿಂದ ಬೀಡಿಯನ್ನು ತೆಗೆದು ಬಾಯಿಗೆ ಇಟ್ಟುಕೊಳ್ಳುತ್ತಾನೆ. ಬೆಂಕಿಕಡ್ಡಿ ಗಿರಿ ಬೀಡಿಗೆ ಹಚ್ಚಿಕೊಳ್ಳುತ್ತಾನೆ. ಆಮೇಲೆ ಬೀಡಿ ಸೇದುತ್ತಾ ಮೆಟ್ರೋದಲ್ಲಿಯೇ ಹೊಗೆ ಬಿಟ್ಟು ಬೆಂಕಿಕಡ್ಡಿಯನ್ನು ಅಲ್ಲಿಯೇ ಎಸೆಯುತ್ತಾನೆ. ​

Written by - Puttaraj K Alur | Last Updated : Nov 27, 2023, 05:09 PM IST
  • ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋ ಮತ್ತೊಮ್ಮೆ ಸದ್ದು ಮಾಡಿದೆ
  • ಮೆಟ್ರೋ ರೈಲಿನಲ್ಲಿ ವೃದ್ಧ ವ್ಯಕ್ತಿ ‘ಬೀಡಿ’ ಸೇದುತ್ತಿರುವ ವಿಡಿಯೋ ವೈರಲ್
  • ಕ್ರಮ ಕೈಗೊಳ್ಳುವಂತೆ ದೆಹಲಿ ಮೆಟ್ರೋ ಅಧಿಕಾರಿಗಳಿಗೆ ನೆಟಿಜನ್‍ಗಳ ಒತ್ತಾಯ
Viral Video: ಕಿಕ್ಕಿರಿದ ಮೆಟ್ರೋದಲ್ಲಿ ಈ ತಾತ ಮಾಡಿದ ಅವಾಂತರ ನೋಡಿ..!   title=
ಮೆಟ್ರೋದಲ್ಲಿ ಬೀಡಿ ಸೇದಿದ ವ್ಯಕ್ತಿ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋ ಮತ್ತೊಮ್ಮೆ ಸುದ್ದಿ ಮಾಡಿದೆ. ಸದಾ ಒಂದಿಲ್ಲೊಂದು ಘಟನೆಗಳಿಂದ ಸುದ್ದಿಯಾಗುವ ದೆಹಲಿ ಮೆಟ್ರೋದಲ್ಲಿ ಮತ್ತೊಂದು ಅಹಿತಕರ ಘಟನೆ ನಡೆದಿದೆ. ಮೆಟ್ರೋ ರೈಲಿನಲ್ಲಿ ವ್ಯಕ್ತಿಯೊಬ್ಬರು 'ಬೀಡಿ' ಸಿಗರೇಟ್ ಸೇದುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ದುರದೃಷ್ಟವಶಾತ್ ಈ ಘಟನೆಯ ನಿಖರವಾದ ದಿನಾಂಕ ಮತ್ತು ಸ್ಥಳ ಯಾವುದು ತಂದು ತಿಳಿದುಬಂದಿಲ್ಲ.   

ಸಖತ್ ವೈರಲ್ ಆಗಿರುವ ಈ ವಿಡಿಯೋದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ತನ್ನ ಜೇಬಿನಿಂದ 'ಬೀಡಿ' ತೆಗೆದು ಪ್ರಯಾಣಿಕರಿಂದ ಕಿಕ್ಕಿರಿದ ಮೆಟ್ರೋ ಕ್ಯಾರೇಜ್‌ನಲ್ಲಿ ಬೆಂಕಿ ಹಚ್ಚುವುದನ್ನು ಗಮನಿಸಬಹುದು. ಈ ವೇಳೆ ಕೆಲವು ಸಹ ಪ್ರಯಾಣಿಕರು ವೃದ್ಧನ ವರ್ತನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ವ್ಯಕ್ತಿ ತನ್ನ ಬಳಿ ಟಿಕೆಟ್ ಇದೆ ಅಂತಾ ಹೇಳುವ ಮೂಲಕ ಉದ್ಧಟತನ ತೋರಿದ್ದಾನೆ.

ಇದನ್ನೂ ಓದಿ: ʼಚಿಕನ್‌ʼಗೆ ಹಣ ಕೊಡದ ಪತ್ನಿಯನ್ನು ಕತ್ತರಿಯಿಂದ ಕತ್ತರಿಸಿ ಕೊಂದ ಗಂಡ..!

Manish Pandey ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವೃದ್ಧ ವ್ಯಕ್ತಿ ತಮ್ಮ ಜೇಬಿನಿಂದ ಬೀಡಿಯನ್ನು ತೆಗೆದು ಬಾಯಿಗೆ ಇಟ್ಟುಕೊಳ್ಳುತ್ತಾನೆ. ಬೆಂಕಿಕಡ್ಡಿ ಗಿರಿ ಬೀಡಿಗೆ ಹಚ್ಚಿಕೊಳ್ಳುತ್ತಾನೆ. ಆಮೇಲೆ ಬೀಡಿ ಸೇದುತ್ತಾ ಮೆಟ್ರೋದಲ್ಲಿಯೇ ಹೊಗೆ ಬಿಟ್ಟು ಬೆಂಕಿಕಡ್ಡಿಯನ್ನು ಅಲ್ಲಿಯೇ ಎಸೆಯುತ್ತಾನೆ. ಇದನ್ನು ಸಹ ಪ್ರಯಾಣಿಕರೊಬ್ಬರು ಪ್ರಶ್ನಿಸಿ ಈ ರೀತಿ ಮಾಡುವುದು ಸರಿಯಲ್ಲ ಅಂತಾ ಬುದ್ಧಿ ಹೇಳಿದ್ದಾರೆ. ಈ ವೇಳೆ ನನ್ನ ಬಳಿ ಟಿಕೆಟ್ ಇದೆ ಅಂತಾ ವೃದ್ಧ ಹೇಳುತ್ತಾನೆ.

ಈ ವಿಡಿಯೋ ಶೇರ್ ಆದ ಕೂಡಲೇ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ವೃದ್ಧನ ವರ್ತನೆ ಕಂಡು ಬೇಸರ ವ್ಯಕ್ತಪಡಿಸಿದ್ದು, ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ಮತ್ತು ದೆಹಲಿ ಮೆಟ್ರೋ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಡಿಎಂಆರ್‌ಸಿ ಅಧಿಕಾರಿಗಳು ಯಾವುದೇ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ: ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡ ಪ್ರಾಣಿ ಯಾವುದು..? ಸರಿಯಾದ ಉತ್ತರ ನಿಮ್ಮ ಬುದ್ಧಿಶಕ್ತಿ ಸಾಮರ್ಥ್ಯ ತೋರುತ್ತದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News