Shan Masood Contract Grade: ಇತ್ತೀಚೆಗೆ ಏಕದಿನ ವಿಶ್ವಕಪ್’ಗೆ ಭಾರತವು ಆತಿಥ್ಯ ವಹಿಸಿತ್ತು. ಈ ಐಸಿಸಿ ಟೂರ್ನಮೆಂಟ್’ನಲ್ಲಿ ಕಳಪೆ ಪ್ರದರ್ಶನದ ನೀಡಿದ್ದ ಪಾಕಿಸ್ತಾನ, ಬಳಿಕ ಅನೇಕ ವಿವಾದಗಳಿಗೆ ತುತ್ತಾಗಿತ್ತು. ಈ ಬೆನ್ನಲ್ಲೇ ಬಾಬರ್ ಅಜಮ್ ಎಲ್ಲಾ ಸ್ವರೂಪಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವವನ್ನು ತೊರೆದರು.
ಈ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಶಾನ್ ಮಸೂದ್’ಗೆ ಟೆಸ್ಟ್ ನಾಯಕತ್ವವನ್ನು ಹಸ್ತಾಂತರಿಸಿದೆ. ಜೊತೆಗೆ ಗುತ್ತಿಗೆ ದರ್ಜೆಯನ್ನು ಸಹ ಬದಲಾಯಿಸಿದೆ.
ಪಾಕಿಸ್ತಾನದ ಟೆಸ್ಟ್ ನಾಯಕ ಶಾನ್ ಮಸೂದ್ ಅವರ ಒಪ್ಪಂದವನ್ನು 'ಡಿ' ಬದಲಿಗೆ 'ಬಿ' ವರ್ಗಕ್ಕೆ ಬದಲಾಯಿಸಲಾಗಿದೆ. ಅವರ ನಾಯಕತ್ವದಲ್ಲಿ ತಂಡವು ಟೆಸ್ಟ್ ಸರಣಿ ಆಡಲು ಆಸ್ಟ್ರೇಲಿಯಾಕ್ಕೆ ತೆರಳಿದೆ. ಬಾಬರ್ ಅಜಮ್ ನಾಯಕತ್ವದಿಂದ ಕೆಳಗಿಳಿದ ನಂತರ, 34 ವರ್ಷದ ಶಾನ್ ಮಸೂದ್ ಅವರಿಗೆ ನವೆಂಬರ್ 15 ರಂದು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023-25 ರ ಋತುವಿನ ಅಂತ್ಯದವರೆಗೆ ಟೆಸ್ಟ್ ನಾಯಕತ್ವವನ್ನು ನೀಡಲಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೇಳಿಕೆಯಲ್ಲಿ, 'ಬೋರ್ಡ್ ಪಾಕಿಸ್ತಾನಿ, ಟೆಸ್ಟ್ ನಾಯಕ ಶಾನ್ ಮಸೂದ್ ಅವರ ಕೇಂದ್ರ ಒಪ್ಪಂದವನ್ನು 'ಡಿ' ಬದಲಿಗೆ 'ಬಿ' ವರ್ಗಕ್ಕೆ ಬದಲಾಯಿಸಿದೆ. ಎ ಅಥವಾ ಬಿ ಕೆಟಗರಿಗಿಂತ ಕೆಳಗಿರುವ ಗುತ್ತಿಗೆ ಹೊಂದಿರುವ ಕ್ರಿಕೆಟಿಗರು ನಾಯಕನಾದರೆ, ಅವರು ನಾಯಕರಾಗಿ ಉಳಿಯುವವರೆಗೆ ಅವರ ಗುತ್ತಿಗೆ ಬಿ ಕೆಟಗರಿಯಲ್ಲಿರಲಿದೆ ಎಂಬುದು ಮಂಡಳಿಯ ನೀತಿಯಾಗಿದೆ” ಎಂದು ಹೇಳಿದೆ.
ಇದನ್ನೂ ಓದಿ: ತಿಂಗಳಿಗೆ 75 ಸಾವಿರ ರೂ. ಸಂಪಾದಿಸುವ ಈ ಭಿಕ್ಷುಕನ ಆಸ್ತಿ 7.5 ಕೋಟಿ!
ಶಾನ್ ಮಸೂದ್ ಅವರು ತಮ್ಮ ವೃತ್ತಿಜೀವನದಲ್ಲಿ ಪಾಕಿಸ್ತಾನಕ್ಕಾಗಿ 30 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 4 ಶತಕ ಮತ್ತು 7 ಅರ್ಧ ಶತಕಗಳ ಸಹಾಯದಿಂದ ಒಟ್ಟು 1597 ರನ್ ಗಳಿಸಿದ್ದಾರೆ. ಪಾಕಿಸ್ತಾನ ತಂಡ ಡಿಸೆಂಬರ್ 14 ರಿಂದ ಆಸ್ಟ್ರೇಲಿಯಾ ಆತಿಥ್ಯದಲ್ಲಿ ಸರಣಿಯನ್ನು ಆಡಲಿದ್ದು, ಅದರ ಮೊದಲ ಪಂದ್ಯ ಪರ್ತ್’ನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಡಿಸೆಂಬರ್ 6ರಿಂದ 9ರವರೆಗೆ ಕ್ಯಾನ್’ಬೆರಾದಲ್ಲಿ ಅಭ್ಯಾಸ ಪಂದ್ಯ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ