Telangana Assembly Election Results 2023 Live : ತೆಲಂಗಾಣ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ಕಾಂಗ್ರೆಸ್ ಭರ್ಜರಿ ಮುನ್ನೆಡೆ ಕಾಯ್ದುಕೊಂಡು ಬಂದಿದೆ. ಸತತ ಎರಡು ಬಾರಿ ಸರ್ಕಾರ ರಚನೆ ಮಾಡಿದ್ದ ಬಿಆರ್ಎಸ್ ಪಾರ್ಟಿಗೆ ʼಕೈʼ ಟಕ್ಕರ್ ನೀಡಿದೆ.
ಹೌದು.. ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾಸ್ಟರ್ ಪ್ಲಾನ್ಸ್ ತೆಲಂಗಾಣ ಚುನಾವಣೆಯ ದಿಕ್ಕನ್ನೇ ಬದಾಲಾಯಿಸಿದೆ.. ಮತ ಎಣಿಕೆ ಪ್ರಾರಂಭದಿಂದಲೇ ಮುನ್ನಡೆ ಸಾಧಿಸಿರುವ ರೇವಂತ್ ರೆಡ್ಡಿ ನೇತೃತ್ವದ ಕೈ ಪಡೆ ಸರ್ಕಾರ ರಚಿಸುವ ಎಲ್ಲಾ ಮುನ್ಸೂಚನೆ ಗೋಚರವಾಗುತ್ತಿದೆ.
ಇದನ್ನೂ ಓದಿ: Rajasthan Election Result 2023: ಗೆಹ್ಲೋಟ್, ಪೈಲಟ್ ಮತ್ತು ವಸುಂಧರಾ ರಾಜೆಗೆ ಆರಂಭಿಕ ಮುನ್ನಡೆ
ತೆಲಂಗಾಣದಲ್ಲಿ ಈ ಭಾರಿ ಬದಲಾವಣೆಯ ಹಿಂದಿನ ಮಾಸ್ಟರ್ ಮೈಂಡ್ ಅಂದ್ರೆ, ಡಿಸಿಎಂ ಡಿಕೆ ಶಿವಕುಮಾರ್. ಕರ್ನಾಟಕದಲ್ಲಿ ಕೈ ಅಧಿಕಾರಕ್ಕೆ ತಂದಂತೆ ಗ್ಯಾರಂಟಿ ಯೋಜನೆಗಳ ಮೂಲಕ ಡಿಕೆಶಿ ತೆಲಂಗಾಣ ಮತದಾರರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ರೇವಂತ್ ರೆಡ್ಡಿಗೆ ಅವಕಾಶ ನೀಡಲು ಮತದಾರರು ಮುಂದಾದಂತಿದೆ.
ಕರ್ನಾಟಕದಲ್ಲಿ 5 ಗ್ಯಾರಂಟಿ ಯೋಜನೆಗಳ ಮೂಲಕ ಗೆಲುವಿನ ನಗೆ ಬೀರಿದ್ದ ಕೈ ಪಡೆ ಇದೀಗ ಇದೇ ಸೂತ್ರವನ್ನು ಆಧಾರವಾಗಿ ಇಟ್ಟುಕೊಂಡು ತೆಲಂಗಾಣದಲ್ಲಿ ಅಧಿಕಾರ ಸ್ಥಾಪನೆಗೆ ಮುಂದಾಗಿದೆ. ಈಗಾಗಲೇ 65 ಕ್ಷೇತ್ರಗಳಲ್ಲಿ ಕೈ ಪಡೆ ಭರ್ಜರಿ ಮುನ್ನೆಡೆ ಸಾಧಿಸುತ್ತಿದೆ. ತೆಲಂಗಾಣದಲ್ಲಿ 199 ವಿಧಾನಸಭಾ ಕ್ಷೇತ್ರಗಳಿವೆ.
ಇದನ್ನೂ ಓದಿ:ಚುನಾವಣಾ ರಾಶಿ ಭವಿಷ್ಯ 2023..! ಈ ರಾಶಿಯ ರಾಜಕಾರಣಿಗಳನ್ನು ಸೋಲಿಸಲು ಸಾಧ್ಯವೇ ಇಲ್ಲ
ಸಧ್ಯ ಡಿ.ಕೆ ಶಿವಕುಮಾರ್ ಹೈದ್ರಾಬಾದ್ನಲ್ಲಿದ್ದು, ಚುನಾವಣಾ ಫಲಿತಾಂಶ ವೀಕ್ಷಿಸುತ್ತಿದ್ದಾರೆ.. ಅಲ್ಲದೆ, ಸ್ಪಷ್ಟ ಬಹುಮತ (60) ಬಂದ್ರೆ ಸರ್ಕಾರ ರಚನೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಮತಹ್ವದ ಸಭೆ ನಡೆಸುವ ಸಾಧ್ಯತೆ ಇದೆ. ಅಲ್ಲದೆ, ಬಹುಮತ ಪಡೆಯುವಲ್ಲಿ ವಿಫಲವಾದರೆ, ವಿಪಕ್ಷಗಳಿಂದ ತಮ್ಮ ಶಾಸಕರನ್ನು ರಕ್ಷಿಸಲು ಡಿಕೆಶಿ ಬಲೆ ಹೆಣೆಯಲಿದ್ದಾರೆ.
ಅಖಂಡ ಆಂಧ್ರ ಪ್ರದೇಶ ವಿಭಜನೆ ನಂತರ ತೆಲಂಗಾಣ ರಾಜ್ಯ ಉಗಮವಾಯಿತು. 2014ರಲ್ಲಿ ನಡೆದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಟಿಆರ್ಎಸ್ ಗೆದ್ದು, ಮೊದಲ ಬಾರಿಗೆ ಸರ್ಕಾರ ರಚನೆ ಮಾಡಿತ್ತು. 2018 ರಲ್ಲಿಯೂ ಸಹ ಮತ್ತೊಮ್ಮೆ ಕೆಸಿಆರ್ ಸರ್ಕಾರ ರಚನೆಯಾಗಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.