ಅಹಂಕಾರ ತೋರಿ ನಿಯಮ ಉಲ್ಲಂಘಿಸಿದ ಸ್ಪರ್ಧಿ! ಇದೇ ಮೊದಲ ಬಾರಿಗೆ ಮನೆಯಿಂದ ಹೊರನಡೆಯುವಂತೆ ಹೇಳಿದ ‘ಬಿಗ್ ಬಾಸ್’

Bigg Boss Hindi Season: ಬಿಗ್ ಬಾಸ್‌’ನ ಪ್ರಮುಖ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಸನ್ನಿ ಆರ್ಯ ಎಂಬ ಸ್ಪರ್ಧಿಯನ್ನು ಸಹ ಮನೆಯಿಂದ ಹೊರ ನಡೆಯುವಂತೆ ಸೂಚಿಸಿದ್ದಾರೆ.

Written by - Bhavishya Shetty | Last Updated : Dec 3, 2023, 07:29 PM IST
    • ಈ ಬಾರಿ 'ಬಿಗ್ ಬಾಸ್ 17' ಹಿಂದಿ ಶೋ ಭಾರೀ ವಿವಾದಗಳನ್ನು ಸೃಷ್ಟಿಸಿತ್ತು
    • ಬಿಗ್ ಬಾಸ್‌’ನ ಪ್ರಮುಖ ನಿಯಮ ಉಲ್ಲಂಘಿಸಿದ ಸನ್ನಿ ಆರ್ಯ
    • ವೀಕೆಂಡ್ ಕಾ ವಾರ್’ನ ಇತ್ತೀಚಿನ ಪ್ರೋಮೋ ಬಿಡುಗಡೆ
ಅಹಂಕಾರ ತೋರಿ ನಿಯಮ ಉಲ್ಲಂಘಿಸಿದ ಸ್ಪರ್ಧಿ! ಇದೇ ಮೊದಲ ಬಾರಿಗೆ ಮನೆಯಿಂದ ಹೊರನಡೆಯುವಂತೆ ಹೇಳಿದ ‘ಬಿಗ್ ಬಾಸ್’   title=
Bigg Boss

Bigg Boss Hindi Season: ಈ ಬಾರಿ 'ಬಿಗ್ ಬಾಸ್ 17' ಹಿಂದಿ ಶೋ ಭಾರೀ ವಿವಾದಗಳನ್ನು ಸೃಷ್ಟಿಸಿತ್ತು. ಇದೀಗ ಈ ವೀಕೆಂಡ್ ಕಾ ವಾರ್ ಅಂದರೆ  ಸಲ್ಮಾನ್ ಖಾನ್ ಹೋಸ್ಟ್ ಮಾಡುತ್ತಿದ್ದ ವೀಕೆಂಡ್ ಶೋ ಅನ್ನು ಕರಣ್ ಜೋಹರ್ ಅವರು ಹೋಸ್ಟ್ ಮಾಡಿದ್ದಾರೆ. ಆದರೆ ಶುಕ್ರವಾರದಂದು ಕರಣ್, ಮನೆಯ ಸ್ಪರ್ಧಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: “ಈ ಆಟಗಾರ ಭಾರತದಲ್ಲಿರೋದು ಪುಣ್ಯದ ಫಲ-ಹೆಮ್ಮೆಯ ಸಂಗತಿ”: ಮುತ್ತಯ್ಯ ಮುರಳೀಧರನ್ ಹೇಳಿದ್ದು ಯಾರ ಬಗ್ಗೆ?

ಬಿಗ್ ಬಾಸ್‌’ನ ಪ್ರಮುಖ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಸನ್ನಿ ಆರ್ಯ ಎಂಬ ಸ್ಪರ್ಧಿಯನ್ನು ಸಹ ಮನೆಯಿಂದ ಹೊರ ನಡೆಯುವಂತೆ ಸೂಚಿಸಿದ್ದಾರೆ.

ಈ ಘಟನೆ ಹಿನ್ನೆಲೆಯನ್ನು ತಿಳಿಯುವುದಾದರೆ, ಅಭಿಷೇಕ್ ಕುಮಾರ್ ಮತ್ತು ಅರುಣ್ ಮಾಶೆಟ್ಟಿ ನಡುವೆ ವಾಗ್ವಾದ ಉಂಟಾಗಿತ್ತು. ಆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸನ್ನಿ ಆರ್ಯ ಕೋಪಗೊಂಡು, ಅಭಿಷೇಕ್ ಅವರ ಕಾಲರ್ ಹಿಡಿದು ಬೆದರಿಕೆ ಹಾಕಿದ್ದಾರೆ. ಇದು ಬಿಗ್ ಬಾಸ್ ನ ಅತಿ ದೊಡ್ಡ ನಿಯಮ ಉಲ್ಲಂಘನೆಯಾಗಿದೆ.

ಇದನ್ನೂ ಓದಿ: ಕೇವಲ 20 ರನ್ ಗಳಿಸಿದ್ರೆ ಸಾಕು ವಿರಾಟ್-ರೋಹಿತ್’ರ ಈ 3 ವಿಶ್ವದಾಖಲೆಗಳನ್ನೇ ಬ್ರೇಕ್ ಮಾಡಲಿದ್ದಾರೆ ಸೂರ್ಯಕುಮಾರ್!

ವೀಕೆಂಡ್ ಕಾ ವಾರ್’ನ ಇತ್ತೀಚಿನ ಪ್ರೋಮೋ ಹೊರಬಂದಿದ್ದು, ಇದರಲ್ಲಿ ಅಭಿಷೇಕ್ ಕುಮಾರ್ ಕಿರುಚುತ್ತಿರುವುದನ್ನು ಕಾಣಬಹುದು. ಕರಣ್ ಜೋಹರ್ ಸನ್ನಿ ಆರ್ಯ ಅವರಿಗೆ ಶಿಕ್ಷೆ ವಿಧಿಸಿ ಹೊರನಡೆಯುವಂತೆ ಸೂಚಿಸಿದ್ದಾರೆ. ಇದರಿಂದ ಅಭಿಷೇಕ್ ಕುಮಾರ್ ಮತ್ತು ಅರುಣ್ ಮಾಶೆಟ್ಟಿ ಅಳಲು ಶುರುಮಾಡಿದ್ದಾರೆ. ಸನ್ನಿಯನ್ನು ಹೊರಕಳುಹಿಸದಂತೆ ಬಿಗ್ ಬಾಸ್ ಬಳಿ ಕಣ್ಣೀರಿಡುತ್ತಾ ವಿನಂತಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News