Rahu Ketu Dosh: ಜ್ಯೋತಿಷ ಶಾಸ್ತ್ರದಲ್ಲಿ ರಾಹು-ಕೇತು ಗ್ರಹಗಳನ್ನು ಪಾಪ ಗ್ರಹಗಳು ಎಂದು ಕರೆಯಲಾಗುತ್ತದೆ. ಸದಾ ಹಿಮ್ಮುಖವಾಗಿ ಚಲಿಸುವ ಈ ಗ್ರಹಗಳು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಯೋಣ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ನೆರಳು ಗ್ರಹಗಳು, ಕ್ರೂರ ಗ್ರಹಗಳು ಎಂತಲೇ ಬಣ್ಣಿಸಲ್ಪಡುವ ರಾಹು-ಕೇತು ಗ್ರಹಗಳು ಸದಾ ಹಿಮ್ಮುಖವಾಗಿ ಚಲಿಸುತ್ತವೆ. ಈ ಗ್ರಹಗಳು 18 ತಿಂಗಳು ಅಥವಾ ಒಂದೂವರೆ ವರ್ಷಗಳಿಗೊಮ್ಮೆ ತಮ್ಮ ರಾಶಿಚಕ್ರವನ್ನು ಬದಲಾಯಿಸುತ್ತವೆ.
ರಾಹು ಗೋಚಾರ: ಇತ್ತೀಚೆಗಷ್ಟೇ 30 ಅಕ್ಟೋಬರ್ 2023 ರಂದು ರಾಹುವು ಮೇಷ ರಾಶಿಯನ್ನು ತೊರೆದು ಮೀನಾ ರಾಶಿಯನ್ನು ಪ್ರವೇಶಿಸಿದ್ದಾನೆ.
ಕೇತು ಗೋಚಾರ: ಅದೇ ಸಮಯದಲ್ಲಿ ಕೇತು ತುಲಾದಿಂದ ಹೊರಬಂದು ಕನ್ಯಾ ರಾಶಿಗೆ ಪದಾರ್ಪಣೆ ಮಾಡಿದ್ದಾನೆ.
ರಾಹು-ಕೇತು ಗ್ರಹಗಳ ಸಂಚಾರವು ಇತರ ಗ್ರಹಗಳಂತೆ ಎಲ್ಲಾ ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಜಾತಕದಲ್ಲಿ ರಾಹು-ಕೇತು ದೋಷವಿದ್ದಾಗ ಜೀವನವು ಸಮಸ್ಯೆಗಳಿಂದ ಕೂಡಿರುತ್ತದೆ. ಆದರೆ, ನೀವು ಕೆಲವು ಸರಳ ಪರಿಹಾರಗಳ ಮೂಲಕ ರಾಹು-ಕೇತು ದೋಷದಿಂದ ಪರಿಹಾರವನ್ನು ಪಡೆಯಬಹುದು. ಅವುಗಳೆಂದರೆ...
ಪ್ರತಿ ದಿನ ಕಪ್ಪು ನಾಯಿಗೆ ಆಹಾರವನ್ನು ನೀಡುವುದರಿಂದ ಜಾತಕದಲ್ಲಿ ರಾಹು-ಕೇತು ದೋಷದಿಂದ ಪರಿಹಾರ ಸಿಗಲಿದೆ.
ಭಾನುವಾರದ ದಿನ ಕನ್ಯೆಯರನ್ನು ಮನೆಗೆ ಕರೆದು ಅವರ ಪಾದ ಪೂಜೆ ಮಾಡಿ, ಹಬ್ಬದ ಅಡಿಗೆ ಮಾಡಿ ಬಾಳೆ ಎಲೆಯಲ್ಲಿ ಊಟಕ್ಕೆ ಹಾಕಿ. ಇದರಿಂದ ಜಾತಕದಲ್ಲಿ ರಾಹು-ಕೇತು ಗ್ರಹಗಳ ಕೆಟ್ಟ ಪ್ರಭಾವ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ.
ಶೇಷನಾಗನ ಮೇಲೆ ನರ್ತಿಸುವ ಶ್ರೀ ಕೃಷ್ಣನ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ರಾಹು-ಕೇತುಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ಹೇಳಲ್ಲಾಗುತ್ತದೆ.
9 ಮುಖಿ ರುದ್ರಾಕ್ಷಿ: ಬುಧವಾರದ ದಿನ 9 ಮುಖಿ ರುದ್ರಾಕ್ಷಿಯನ್ನು ಧರಿಸುವುದರಿಂದಲೂ ಕೇತು ಗ್ರಹಕ್ಕೆ ಸಂಬಂಧಿಸಿದ ದೋಷಗಳನ್ನು ಹೋಗಲಾಡಿಸಬಹುದು ಎಂದು ಹೇಳಲಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.