Pakistan Test batsman Asad Shafiq retirement: ಪಾಕಿಸ್ತಾನದ ಟೆಸ್ಟ್ ಬ್ಯಾಟರ್ ಅಸದ್ ಶಫೀಕ್ ಎಲ್ಲಾ ಮಾದರಿಯ ಕ್ರಿಕೆಟ್’ಗೆ ವಿದಾಯ ಘೋಷಿಸಿದ್ದಾರೆ. “ಆಟದ ಮೇಲಿನ ಉತ್ಸಾಹ ಕಡಿಮೆಯಾಗಿದೆ” ಎನ್ನುತ್ತಾ ವಿದಾಯದ ಸುದ್ದಿಯನ್ನು ಪ್ರಕಟಿಸಿದ್ದಾರೆ.
ರಾಷ್ಟ್ರೀಯ ಟಿ 20 ಚಾಂಪಿಯನ್‌ಶಿಪ್’ನಲ್ಲಿ ಕರಾಚಿ ವೈಟ್ಸ್’ನ್ನು ಪ್ರಶಸ್ತಿಯತ್ತ ಕೊಂಡೊಯ್ದ ಶಫೀಕ್ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. “ನನಗೆ ಇನ್ನು ಮುಂದೆ ಕ್ರಿಕೆಟ್ ಆಡುವ ಉತ್ಸಾಹವಿಲ್ಲ. ಈಗ ಅಂತರರಾಷ್ಟ್ರೀಯ ಕ್ರಿಕೆಟ್’ನಲ್ಲಿ ಆಡುವ ಫಿಟ್‌ನೆಸ್ ಮಟ್ಟವು ಒಂದೇ ಆಗಿಲ್ಲ. ಹೀಗಾಗಿ ಆಟಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದೇನೆ” ಎಂದಿದ್ದಾರೆ.
ಇದನ್ನೂ ಓದಿ: ಒಂದು ವರ್ಷದ ಬಳಿಕ ಶಶಿ-ಮಂಗಳರಿಂದ 'ಧನ ರಾಜಯೋಗ' ರಚನೆ, ಈ ಜನರಿಗೆ ಭಾರಿ ಧನಲಾಭ!
“ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಪೈಡ್ ನ್ಯಾಷನಲ್ ಪ್ಲೇಯರ್ ಆಗಿ ಆಡುವ ಒಪ್ಪಂದ ಬಂದಿದ್ದು, ಪರಿಶೀಲಿಸುತ್ತಿದ್ದೇನೆ. ಶೀಘ್ರದಲ್ಲೇ ಸಹಿ ಮಾಡುತ್ತೇನೆ” ಎಂದು ಇದೇ ವೇಳೆ ತಿಳಿಸಿದ್ದಾರೆ.
2010 ಮತ್ತು 2020ರ ನಡುವೆ ಪಾಕಿಸ್ತಾನ ಪರ ಶಫೀಕ್ 77 ಟೆಸ್ಟ್’ಗಳನ್ನಾಡಿದ್ದು, 4660 ರನ್ ಗಳಿಸಿದ್ದಾರೆ. ಇದರಲ್ಲಿ 12 ಶತಕ ಮತ್ತು 27 ಅರ್ಧ ಶತಕಗಳು ಸೇರಿವೆ. ಇದಲ್ಲದೆ 60 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನೂ ಆಡಿದ್ದಾರೆ.
ನಿವೃತ್ತಿ ತೆಗೆದುಕೊಳ್ಳುವ ನಿರ್ಧಾರದ ಕುರಿತು ಮಾತನಾಡಿದ ಶಫೀಕ್, “2020 ರಲ್ಲಿ ಕೈಬಿಟ್ಟ ನಂತರ, ನಾನು ಮೂರು ವರ್ಷಗಳ ಕಾಲ ದೇಶೀಯ ಕ್ರಿಕೆಟ್ ಆಡುವುದನ್ನು ಮುಂದುವರೆಸಿದೆ. ಆದರೆ ಇದೀಗ ಈ ಸೀಸನ್ ಪ್ರಾರಂಭವಾಗುವ ಮೊದಲೇ ಇದು ನನ್ನ ಕೊನೆಯ ಸೀಸನ್ ಎಂದು ನಾನು ನಿರ್ಧರಿಸಿದ್ದೆ. 38 ನೇ ವಯಸ್ಸಿನಲ್ಲಿ, ಜನರು ನನ್ನನ್ನು ಹೊರಗಿಡುವಂತೆ ಹೇಳುವುದಕ್ಕಿಂತ ಇದು ನಿವೃತ್ತಿಗೆ ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿ: ಮದುವೆಯಿಲ್ಲದೆ 45ನೇ ವಯಸ್ಸಿನಲ್ಲಿ ತಾಯಿಯಾದ ʼದಂಗಲ್ʼ ಸಿನಿಮಾ ನಟಿ..! ಫ್ಯಾನ್ಸ್ ಶಾಕ್
ಅಝರ್ ಅಲಿ, ಯೂನಿಸ್ ಖಾನ್ ಮತ್ತು ಮಿಸ್ಬಾ ಉಲ್ ಹಕ್ ಅವರೊಂದಿಗೆ ಅಸಾದ್ ಪಾಕಿಸ್ತಾನದ ಟೆಸ್ಟ್ ಬ್ಯಾಟಿಂಗ್ ಅನ್ನು ಬಲಪಡಿಸಿದ್ದರು. ಮಿಸ್ಬಾ-ಉಲ್-ಹಕ್ ನೇತೃತ್ವದಲ್ಲಿ ಪಾಕಿಸ್ತಾನ ತಂಡಕ್ಕೆ ನೀಡಿದ ಕೊಡುಗೆಯ ಬಗ್ಗೆ ಹೆಮ್ಮೆಪಡುವ ಅಸಾದ್ ಸ್ಪಾಟ್ ಫಿಕ್ಸಿಂಗ್ ಹಗರಣದ ನಂತರದ ಸವಾಲಿನ ಸಮಯವನ್ನು ನೆನಪಿಸಿಕೊಂಡರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ