ರಾಜಭವನಕ್ಕೆ ಫೇಕ್‌ ಬಾಂಬ್ ಕಾಲ್‌ : ಬೆಳಿಗ್ಗೆಯಿಂದ ಏನಾಯ್ತು..? ಘಟನೆಯ ಕಂಪ್ಲೀಟ್‌ ರಿಪೋರ್ಟ್‌ ಇಲ್ಲಿದೆ

Bomb threat to Raj Bhavan : ತಡರಾತ್ರಿ ಬಂದ ಅದೊಂದು ಫೋನ್ ಕಾಲ್ ಸಿಲಿಕಾನ್‌ ಸಿಟಿ ಪೊಲೀಸರನ್ನು ನಡುಗುವಂತೆ ಮಾಡಿದೆ. ರಾತ್ರೋರಾತ್ರಿ ಡಿಸಿಪಿಯೇ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು. ಡಾಗ್ ಸ್ಕ್ವಾಡ್ ಸೇರಿ ಬಾಂಬ್ ನಿಷ್ಕ್ರಿಯ ದಳ ಕೂಡ ಎಂಟ್ರಿಯಾಗಿತ್ತು. ಆದರೆ ಅಂದೊದು ಫೇಕ್‌ ಕಾಲ್‌ ಎಂಬುದು ಗೊತ್ತಾಗಿತ್ತು. ಹಾಗಾದ್ರೆ ಆಗಿದ್ದೇನೂ ಅಂತೀರಾ ಈ ಸ್ಟೋರಿ ನೋಡಿ.. 

Written by - VISHWANATH HARIHARA | Edited by - Krishna N K | Last Updated : Dec 12, 2023, 02:34 PM IST
  • ರಾಜಭವನಕ್ಕೆ ಫೇಕ್‌ ಬಾಂಬ್ ಕಾಲ್‌.
  • ಮಧ್ಯರಾತ್ರಿ ಪೊಲೀಸರ ನಿದ್ದೆಗೆಡಿಸಿದ ಅಪರಿಚಿತ.
  • ಆದರೆ ಅಂದೊದು ಫೇಕ್‌ ಕಾಲ್‌.
ರಾಜಭವನಕ್ಕೆ ಫೇಕ್‌ ಬಾಂಬ್ ಕಾಲ್‌ : ಬೆಳಿಗ್ಗೆಯಿಂದ ಏನಾಯ್ತು..? ಘಟನೆಯ ಕಂಪ್ಲೀಟ್‌ ರಿಪೋರ್ಟ್‌ ಇಲ್ಲಿದೆ title=

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಇತ್ತೀಚೇಗೆ ಬರುತ್ತಿರುವ ಕರೆಗಳು ಪೊಲೀಸರ ನಿದ್ದೆ ಕೆಡಿಸ್ತಿದೆ.. ಒಂದೊಂದು ಇ-ಮೇಲ್ ಕೂಡ ಬೆಚ್ಚಿ ಬೀಳುವಂತೆ ಮಾಡ್ತಿದೆ. ಕಿಡಿಗೇಡಿಗಳ ಕಣ್ಣಾಮುಚ್ಚಾಲೆ ಆಟಕ್ಕೆ ಇಡೀ ಪೊಲೀಸ್ ಇಲಾಖೆಯೇ ತಲೆ ಕಡೆಸಿಕೊಳ್ಳುವಂತೆ ಮಾಡಿದೆ. ನಗರದಲ್ಲಿ ಹುಸಿ ಬಾಂಬ್ ಕರೆಗಳು ಹೆಚ್ಚಾಗ್ತಿದ್ದು, ಖಾಕಿ ಪಡೆಗೆ ಪದೆಪದೇ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ಹೌದು.. ನಿನ್ನೆ ರಾತ್ರಿ 11.30 ರ ಸಮಯ. ಈ ವೇಳೆ ವ್ಯಕ್ತಿಯೊಬ್ಬ ಬೆಂಗಳೂರಿನ ಎನ್ಐಎ ಕಚೇರಿಗೆ ಕರೆ ಮಾಡಿ ಸೀದಾ ಸೀದಾ ರಾಜಭವನಕ್ಕೆ ಬಾಂಬ್ ಇಟ್ಟಿದ್ದೀನಿ.ಇನ್ನೇನು ಕೆಲವೇ ಕ್ಷಣದಲ್ಲಿ ಬ್ಲಾಸ್ಟ್ ಆಗುತ್ತೆ ಎಂದು ಹೇಳುತ್ತಲೇ ಕಾಲ್ ಕಟ್‌ ಮಾಡಿದ್ದ. ಗಾಬರಿಗೊಂಡ ಎನ್ಐಎ ಅಧಿಕಾರಿಗಳು ನಗರ ಪೊಲೀಸರಿಗೆ ಮಾಹಿತಿ ನೀಡಿದ್ರು. ತಕ್ಷಣ ಅಲರ್ಟ್ ಆದ ಖಾಕಿ ತಂಡ ರಾಜಭವನಕ್ಕೆ ತೆರಳಿತ್ತು. ಡಾಗ್ ಸ್ಕ್ವಾಡ್ ,ಬಾಂಬ್ ಸ್ಕ್ವಾಡ್ ಎಂಟ್ರಿ ಕೊಟ್ಟು ರಾಜಭವನ ಸುತ್ತಾಮುತ್ತಾ ಪರಿಶೀಲನೆ ನಡೆಸಿತ್ತು. ಆದರೆ ಯಾವುದೇ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಲಿಲ್ಲ. ಆಗಲೇ ಗೊತ್ತಾಗಿದ್ದು ಇದೊಂದು ಹುಸಿ ಬಾಂಬ್ ಕರೆ ಅಂತಾ.

ಇದನ್ನೂ ಓದಿ: "ಗ್ಯಾರಂಟಿ ಯೋಜನೆಗಳು ಜನರನ್ನು ಆಲಸಿಗಳನ್ನಾಗಿ ಮಾಡುತ್ತಿದೆ"

ಇನ್ನೂ ತಕ್ಷಣ ಕರೆ ಬಂದ ನಂಬರ್ ನೆಟ್ ವರ್ಕ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಲೊಕೇಶನ್ ತೋರಿಸ್ತಿತ್ತು. ಸ್ಥಳಕ್ಕೆ ಭೇಟಿ ನೀಡುವಷ್ಟರಲ್ಲಿ ಆಸಾಮಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. 

ಬಂಧನದ ಬಳಿಕವಷ್ಟೇ ಕರೆ ಮಾಡೋದಕ್ಕೆ ಕಾರಣ ಏನು ಅನ್ನೋದು ಗೊತ್ತಾಗಲಿದೆ.. ಅದೆನೇ ಇರ್ಲಿ.. ಮೊನ್ನೆ ಮೊನ್ನೆ ತಾನೇ ಶಾಲೆಗಳಿಗೆ ಬಾಂಬ್‌ ಬೆದರಿಕೆ ಮೇಲ್‌ ಬಂದು ದೊಡ್ಡ ಸುದ್ದಿಯಾಗಿತ್ತು.. ಆದರೆ ಆಸಾಮಿಯೊಬ್ಬ ರಾಜಭವನಕ್ಕೆ ಬಾಂಬ್‌ ಇಟ್ಟಿರೋದಾಗಿ ಕರೆ ಮಾಡಿರುವುದು ನಗರ ಪೊಲೀಸರಿಗೆ ಸಾಕಷ್ಟು ತಲೆನೋವು ತರಿಸಿರುವುದಂತು ಸುಳ್ಳಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News