Government Banned 174 Betting And Gambling Apps : ಅಕ್ರಮ ಜೂಜು ಮತ್ತು ಬೆಟ್ಟಿಂಗ್ ವಿರುದ್ಧ ಕ್ರಮ ಕೈಗೊಂಡಿರುವ ಸರ್ಕಾರ, ಇದುವರೆಗೆ ಒಟ್ಟು 581 ಆ್ಯಪ್ ಗಳನ್ನು ನಿರ್ಬಂಧಿಸಿದೆ. ಇವುಗಳಲ್ಲಿ 174 ಜೂಜು ಮತ್ತು ಬೆಟ್ಟಿಂಗ್ ಆ್ಯಪ್ಗಳು ಮತ್ತು 87 ಸಾಲ ನೀಡುವ ಅಪ್ಲಿಕೇಶನ್ಗಳು ಸೇರಿವೆ. ಭಾರತದಲ್ಲಿ ಕಾನೂನುಬಾಹಿರವಾಗಿರುವ ಕಾರಣ ಈ ಆ್ಯಪ್ಗಳನ್ನು ಸರ್ಕಾರ ನಿರ್ಬಂಧಿಸಿದೆ. ಅಕ್ರಮ ಬೆಟ್ಟಿಂಗ್ ಮತ್ತು ಗ್ಯಾಬ್ಲಿಂಗ್ ಅಪ್ಲಿಕೇಶನ್ಗಳು ಜನರು ಹಣವನ್ನು ಕಳೆದುಕೊಳ್ಳಲು ಕಾರಣವಾಗಿತ್ತು. ಅಲ್ಲದೆ ಜನರನ್ನು ಜೂಜಿನ ಚಟಕ್ಕೆ ಗುರಿಯಾಗಿಸುತ್ತಿತ್ತು. ಸಾಲ ನೀಡುವ ಅಪ್ಲಿಕೇಶನ್ಗಳು ಕೂಡಾ ಜನರಿಗೆ ಆರ್ಥಿಕವಾಗಿ ಹಾನಿಯನ್ನುಂಟುಮಾಡುತ್ತಿತ್ತು. ಈ app ಮೂಲಕ ತೆಗೆದುಕೊಳ್ಳುವ ಸಾಲಗಳಿಗೆ ಹೆಚ್ಚಿನ ದರದಲ್ಲಿ ಬಡ್ಡಿ ವಿಧಿಸಲಾಗುತ್ತಿತ್ತು.
ಬೆಟ್ಟಿಂಗ್ ಮತ್ತು ಗ್ಯಾಬ್ಲಿಂಗ್ ಅಪ್ಲಿಕೇಶನ್ ಬ್ಯಾನ್ :
IT ಕಾಯಿದೆ, 2000 ರ ಸೆಕ್ಷನ್ 69A ಅಡಿಯಲ್ಲಿ ಒಟ್ಟು 581 ಅಪ್ಲಿಕೇಶನ್ಗಳನ್ನು ನಿರ್ಬಂಧಿಸಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ. ಇವುಗಳಲ್ಲಿ 174 ಬೆಟ್ಟಿಂಗ್ ಮತ್ತು ಗ್ಯಾಬ್ಲಿಂಗ್ ಸಂಬಂಧಿತ ಅಪ್ಲಿಕೇಶನ್ಗಳು, 87 ಲೋನ್ ಅಪ್ಲಿಕೇಶನ್ಗಳು ಮತ್ತು PUBG, GArena ಫ್ರೀ ಫೈರ್ ಮುಂತಾದ ಗೇಮಿಂಗ್ ಅಪ್ಲಿಕೇಶನ್ಗಳು ಸೇರಿವೆ. ಇಡಿ ಕೋರಿಕೆಯ ಮೇರೆಗೆ, 22 ಅಕ್ರಮ ಬೆಟ್ಟಿಂಗ್ ಮತ್ತು ಗ್ಯಾಬ್ಲಿಂಗ್ ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳನ್ನು ನಿರ್ಬಂಧಿಸಲಾಗಿದೆ.
ಇದನ್ನೂ ಓದಿ : ತನ್ನ ಈ ರೀಚಾರ್ಜ್ ಯೋಜನೆಯಲ್ಲಿ 1 ತಿಂಗಳ ಹೆಚ್ಚುವರಿ ವ್ಯಾಲಿಡಿಟಿ ನೀಡುತ್ತಿದೆ ಈ ಟೆಲಿಕಾಂ ಕಂಪನಿ... ಅದೂ ಉಚಿತ!
ಈ ಅಪ್ಲಿಕೇಶನ್ಗಳ ನಿಷೇಧದ ಹಿಂದಿನ ಕಾರಣ :
ಕಳೆದ ವರ್ಷ ಅಕ್ಟೋಬರ್ನಲ್ಲಿ, ಡೊಮೇನ್ ಫಾರ್ಮಿಂಗ್ ಮೂಲಕ ಚಾಲನೆಯಲ್ಲಿರುವ 114 ಅಕ್ರಮ ಬೆಟ್ಟಿಂಗ್ ಮತ್ತು ಗ್ಯಾಬ್ಲಿಂಗ್ ಅಪ್ಲಿಕೇಶನ್ಗಳನ್ನು ಸರ್ಕಾರ ನಿರ್ಬಂಧಿಸಿತ್ತು. ಫೆಬ್ರವರಿಯಲ್ಲಿ, ಸರ್ಕಾರವು 138 ಅಕ್ರಮ ಬೆಟ್ಟಿಂಗ್ ಮತ್ತು ಗೇಮಿಂಗ್ ವೆಬ್ಸೈಟ್ಗಳನ್ನು ನಿರ್ಬಂಧಿಸಿದೆ. ಇತ್ತೀಚೆಗಷ್ಟೇ ಜುಲೈನಲ್ಲಿ ಸರ್ಕಾರ ಐಜಿಎಸ್ಟಿ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಈ ತಿದ್ದುಪಡಿಯ ಪ್ರಕಾರ, ಎಲ್ಲಾ ಆಫ್ಶೋರ್ ಗೇಮಿಂಗ್ ಕಂಪನಿಗಳು ಭಾರತದಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.
ಇದಲ್ಲದೆ, ನೋಂದಣಿಯಾಗದ ಮತ್ತು ಕಾನೂನು ಉಲ್ಲಂಘಿಸುವ ವೆಬ್ಸೈಟ್ಗಳನ್ನು ನಿರ್ಬಂಧಿಸುವ ಅಧಿಕಾರವನ್ನೂ ಸರ್ಕಾರಕ್ಕೆ ನೀಡಲಾಗಿದೆ. ಅಕ್ರಮ ಬೆಟ್ಟಿಂಗ್ ಮತ್ತು ಗ್ಯಾಬ್ಲಿಂಗ್ ವೇದಿಕೆಗಳು ಪ್ರಾಕ್ಸಿ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು UPI ಪಾವತಿಗಳನ್ನು ಹೆಚ್ಚಾಗಿ ಸಂಗ್ರಹಿಸುತ್ತವೆ. ಈ ಪ್ಲಾಟ್ಫಾರ್ಮ್ಗಳು ಪ್ರಾಕ್ಸಿ ಖಾತೆಗಳಲ್ಲಿ ಠೇವಣಿ ಮಾಡಿದ ಮೊತ್ತವನ್ನು ಹವಾಲಾ, ಕ್ರಿಪ್ಟೋ ಮತ್ತು ಇತರ ಕಾನೂನುಬಾಹಿರ ಮಾರ್ಗಗಳ ಮೂಲಕ ಬಳಸಿಕೊಳ್ಳುತ್ತವೆ.
ಇದನ್ನೂ ಓದಿ : ಗೂಗಲ್ ಮ್ಯಾಪ್ಸ್ ಬಳಕೆದಾರರಿಗೊಂದು ಗುಡ್ ನ್ಯೂಸ್, ನಿಮ್ಮ ವಾಹನ ಇಂಧನ ಉಳಿಸಲು ಬಂದಿದೆ ಹೊಸ ವೈಶಿಷ್ಟ್ಯ!
ಯಾವ ಅಪ್ಲಿಕೇಶನ್ಗಳನ್ನು ನಿಷೇಧಿಸಲಾಗಿದೆ? :
ಮಹಾದೇವ್ ಆ್ಯಪ್ ಹೊರತುಪಡಿಸಿ, ಸರ್ಕಾರವು ಅನೇಕ ಅಕ್ರಮ ಬೆಟ್ಟಿಂಗ್ ಮತ್ತು ಜೂಜಿನ ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳನ್ನು ನಿರ್ಬಂಧಿಸಿದೆ. ನಿರ್ಬಂಧಕ್ಕೆ ಒಳಗಾದ ಅಪ್ಲಿಕೇಶನ್ಗಳಲ್ಲಿ Parimatch, Fairplay, 1XBET, Lotus365, Dafabet ಮತ್ತು Betwaysatta ಸೇರಿವೆ. ಈ ಅಪ್ಲಿಕೇಶನ್ಗಳಲ್ಲಿ ಹಲವು ಈಗಾಗಲೇ ನಿಷೇಧಿತ ಪಟ್ಟಿಯಲ್ಲಿವೆ. ಕೆಲವು ಭಾರತದಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ