ನವದೆಹಲಿ: ಬಿಎಸ್ಎನ್ಎಲ್ (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಕಂಪನಿಯು ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಹೊಸ ಸೀಮಿತ ಅವಧಿಯ ಕೊಡುಗೆಯನ್ನು ಜಾರಿಗೆ ತಂದಿದೆ. ಈ ಕೊಡುಗೆಯ ಅಡಿಯಲ್ಲಿ, ಕಂಪನಿಯು ತನ್ನ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಯೊಂದಿಗೆ 30 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಒದಗಿಸುತ್ತಿದೆ. ಬಿಎಸ್ಎನ್ಎಲ್ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ ಮೂಲಕ ಈ ಕೊಡುಗೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಕೆಲವು ಸಮಯದ ಹಿಂದೆ ಕಂಪನಿಯು ದೀಪಾವಳಿ ಕೊಡುಗೆಯ ಅಡಿಯಲ್ಲಿ ಅದರ ಕೆಲವು ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳೊಂದಿಗೆ ಹೆಚ್ಚುವರಿ ಡೇಟಾವನ್ನು ಒದಗಿಸುವುದಾಗಿ ಘೋಷಿಸಿತ್ತು. ಈ ಯೋಜನೆಗಳ ಬೆಲೆ ರೂ 251, ರೂ 299, ರೂ 399 ಮತ್ತು ರೂ 499.ರ ಯೋಜನೆಗಳು ಶಾಮೀಲಾಗಿವೆ. ಹೊಸ ಕೊಡುಗೆಗೆ ಸಂಬಂಧಿಸಿದ ಎಲ್ಲಾ ವಿವರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.(Technology News In Kannada)
ಬಿಎಸ್ಎನ್ಎಲ್ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ ಮೂಲಕ ಹೊಸ ಕೊಡುಗೆಯನ್ನು ಪ್ರಕಟಿಸಿದೆ. ಕಂಪನಿಯು ಇದೀಗ ರೂ 2,999 ರ ಸೂಪರ್ಚಾರ್ಜ್ ಯೋಜನೆಯೊಂದಿಗೆ ಹೆಚ್ಚುವರಿ ಮಾನ್ಯತೆಯನ್ನು ಒದಗಿಸುತ್ತಿದೆ ಎಂದು ಗ್ರಾಹಕರಿಗೆ ತಿಳಿಸಿದೆ. ಆದಾಗ್ಯೂ, ಇದು ಸೀಮಿತ ಅವಧಿಯ ಕೊಡುಗೆಯಾಗಿದೆ, ಇದು ಸ್ವಲ್ಪ ಅವಧಿಯವರೆಗೆ ಮಾತ್ರ ಲಭ್ಯವಿರಲಿದೆ. ಈ ಕೊಡುಗೆ ಮಾರ್ಚ್ 1 ರವರೆಗೆ ಮಾನ್ಯವಾಗಿರುತ್ತದೆ. ನೀವು ಬಿಎಸ್ಎನ್ಎಲ್ ಗ್ರಾಹಕರಾಗಿದ್ದರೆ ಮತ್ತು ಶೀಘ್ರದಲ್ಲೇ ಹೊಸ ರೀಚಾರ್ಜ್ ಮಾಡಲು ಯೋಜಿಸುತ್ತಿದ್ದರೆ, ಈ ಯೋಜನೆ ನಿಮಗಾಗಿ ಮಾತ್ರ. 2,999 ರ ಈ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಯೊಂದಿಗೆ ಕಂಪನಿಯು 30 ದಿನಗಳ ಹೆಚ್ಚುವರಿ ವ್ಯಾಲಿಡಿಟಿಯನ್ನು ನೀಡುತ್ತಿದೆ.
ಇದನ್ನೂ ಓದಿ-ಗೂಗಲ್ ಮ್ಯಾಪ್ಸ್ ಬಳಕೆದಾರರಿಗೊಂದು ಗುಡ್ ನ್ಯೂಸ್, ನಿಮ್ಮ ವಾಹನ ಇಂಧನ ಉಳಿಸಲು ಬಂದಿದೆ ಹೊಸ ವೈಶಿಷ್ಟ್ಯ!
ರೂ 2999 ಬಿಎಸ್ಎನ್ಎಲ್ ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು
ಬಿಎಸ್ಎನ್ಎಲ್ ಕಂಪನಿಯ ರೂ 2,999 ಪ್ಲಾನ್ ಕುರಿತು ಹೇಳುವುದಾದರೆ, ಇದು ಕಂಪನಿಯ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಯಾಗಿದೆ. ಈ ಯೋಜನೆಯಲ್ಲಿ, ಬಳಕೆದಾರರು 365 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಆದಾಗ್ಯೂ, ಹೊಸ ಕೊಡುಗೆಯ ಅಡಿಯಲ್ಲಿ, ಮುಂದಿನ ರೀಚಾರ್ಜ್ ಮಾಡುವ ಗ್ರಾಹಕರು ಈ ಯೋಜನೆಯಲ್ಲಿ 30 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಪಡೆಯುತ್ತಾರೆ, ಇದರೊಂದಿಗೆ ಬಳಕೆದಾರರು ಈ ಯೋಜನೆಯಲ್ಲಿ ಒಟ್ಟು 395 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ.
ಇದನ್ನೂ ಓದಿ-ಮೂರು ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದ ವಾಟ್ಸ್ ಆಪ್, ಈ ರೀತಿ ಬಳಸಬಹುದು!
ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಬಿಎಸ್ಎನ್ಎಲ್ ನ ಈ ಯೋಜನೆಯು ಬಳಕೆದಾರರಿಗೆ ಪ್ರತಿದಿನ 3ಜಿಬಿ ಡೇಟಾಗೆ ಪ್ರವೇಶವನ್ನು ನೀಡುತ್ತದೆ. ಹೊಸ ಕೊಡುಗೆಯ ಅಡಿಯಲ್ಲಿ, ಈಗ ಬಳಕೆದಾರರು ಯೋಜನೆಯಲ್ಲಿ 395 ದಿನಗಳವರೆಗೆ ಪ್ರತಿದಿನ 3 ಜಿಬಿ ಡೇಟಾವನ್ನು ಪ್ರಯೋಜನ ಪಡೆಯುತ್ತಾರೆ. ಅದರಂತೆ, ಈ ಯೋಜನೆಯು ಬಳಕೆದಾರರಿಗೆ ಒಟ್ಟು 1,185ಜಿಬಿ ಡೇಟಾಗೆ ಪ್ರವೇಶವನ್ನು ನೀಡಲಿದೆ. ದೈನಂದಿನ ಡೇಟಾ ಕೋಟಾ ಮುಗಿದ ನಂತರ, ಯೋಜನೆಯ ಅಡಿಯಲ್ಲಿ ಲಭ್ಯವಿರುವ ಡೇಟಾ ವೇಗವು 40 ಕೆಬಿಪಿಎಸ್ ಗೆ ಕಡಿಮೆಯಾಗುತ್ತದೆ. ಇದರ ಹೊರತಾಗಿ, ಯೋಜನೆಯು ಅನಿಯಮಿತ ಧ್ವನಿ ಕರೆ ಮತ್ತು ಪ್ರತಿದಿನ 100 ಉಚಿತ ಎಸ್ಎಂಎಸ್ ನೀಡುತ್ತದೆ.
Supercharge your connectivity with BSNL!
Unlock an extra 30 days of unlimited calling and data when you recharge with #PV2999. Stay connected, stay limitless!#RechargeNow: https://t.co/N7nS6NHhzu (For NZ,WZ& EZ) https://t.co/s6KNI4ijaZ (For SZ)#BSNL #RechargeRewards pic.twitter.com/tR15ruD9Bj— BSNL India (@BSNLCorporate) December 11, 2023
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ