Extra Marital Affair: ಸೆಲೆಬ್ರಿಟಿಗಳ ವಿವಾಹೇತರ ಸಂಬಂಧಗಳ ಬಗ್ಗೆ ಆಗಾಗ್ಗೆ ಸುದ್ದಿಗಳು ಕೇಳಿಬರುತ್ತವೆ. ಇದೀಗ ಈ ವರದಿಯಲ್ಲಿ ಮದುವೆ ಬಳಿಕ ಗಂಡನ ಹೊರತಾಗಿ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿರುವ ಸೆಲೆಬ್ರಿಟಿಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.
ಇದನ್ನೂ ಓದಿ: “ನನಗೆ ‘ಅದು’ ಬೇಕು… ಆದ್ರೆ ನನ್ನ ಗಂಡ ಸಹಕರಿಸುತ್ತಿಲ್ಲ…”-ಪುಷ್ಪಾ ನಟಿ ಅನಸೂಯ ಬೇಸರ
ಟೀಂ ಇಂಡಿಯಾದಲ್ಲಿ ಸಖತ್ ಹೆಸರು ಮಾಡಿರುವ ದಿನೇಶ್ ಕಾರ್ತಿಕ್ ಎಲ್ಲರಿಗೂ ಚಿರಪರಿಚಿತ. ಅವರ ಮೊದಲ ಪತ್ನಿ ನಿಕಿತಾ ವಂಜಾರಾ ಕಾರ್ತಿಕ್’ಗೆ ದ್ರೋಹ ಬಗೆದು, ದಿನೇಶ್ ಕಾರ್ತಿಕ್ ಅವರ ಸ್ನೇಹಿತ ಮತ್ತು ಕ್ರಿಕೆಟಿಗ ಮುರಳಿ ವಿಜಯ್ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಚಾರ ತಿಳಿದ ನಂತರ ದಿನೇಶ್ ವಿಚ್ಛೇದನ ನೀಡಿದರು.
ನಟರಾದ ಅಮೀರ್ ಅಲಿ ಮತ್ತು ಸಂಜೀದಾ ಶೇಖ್ ಜನಪ್ರಿಯ ಟಿವಿ ಜೋಡಿ. ಮಾಧ್ಯಮ ವರದಿಗಳ ಪ್ರಕಾರ, ಸಂಜೀದಾ ಶೇಖ್ ವಿವಾಹೇತರ ಸಂಬಂಧ ಹೊಂದಿದ್ದರು ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ, ಇವರಿಬ್ಬರ ವಿಚ್ಛೇದನಕ್ಕೆ ನಟ ಹರ್ಷವರ್ಧನ್ ರಾಣೆ ಕಾರಣ ಎನ್ನಲಾಗಿತ್ತು.
ಖ್ಯಾತ ಕಿರುತೆರೆ ನಟಿ ಕಾಮ್ಯಾ ಪಂಜಾಬಿ ಸಂಜಯ್ ದತ್ ಅವರ ಸೋದರ ಸಂಬಂಧಿ ನಿಮಾಯ್ ಬಾಲಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಮಾಜಿ ಪತಿ ಬಂಟಿ ನೇಗಿ ಆರೋಪಿಸಿದ್ದರು. ಕಾಮ್ಯಾ ಈ ಆರೋಪಗಳನ್ನು ನಿರಾಕರಿಸಿದ್ದರು. ಆದರೆ ಬಂಟಿ ನೇಗಿಗೆ ಡಿವೋರ್ಸ್ ಕೊಟ್ಟ ಬಳಿಕ, ನಿಮಾಯ್ ಜೊತೆ ಸಂಬಂಧ ಬೆಳೆಸಿದ್ದರು ಈ ನಟಿ.
ಇದನ್ನೂ ಓದಿ: ರೋಹಿತ್ ಶರ್ಮಾ 10 ವರ್ಷಗಳ ನಾಯಕತ್ವ ಅಂತ್ಯ: ಮುಂಬೈ ಇಂಡಿಯನ್ಸ್’ಗೆ ಹಾರ್ದಿಕ್ ಪಾಂಡ್ಯ ನೂತನ ನಾಯಕ
ಇನ್ನು ಬಾಲಿವುಡ್ ನಟಿ ಮಲೈಕಾ ಅರೋರಾ ಹೆಸರು ಕೂಡ ಈ ಪಟ್ಟಿಯಲ್ಲಿದೆ. ಮಾಧ್ಯಮ ವರದಿಗಳ ಪ್ರಕಾರ, ಅರ್ಬಾಜ್ ಖಾನ್ ಜೊತೆ ಮಲೈಕಾ ವಿಚ್ಛೇದನ ಪಡೆಯಲು ಅರ್ಜುನ್ ಕಪೂರ್ ಜೊತೆಗಿನ ಸಂಬಂಧವೇ ಕಾರಣ ಎನ್ನಲಾಗುತ್ತಿದೆ. ಆದರೆ ಕೆಲ ವರ್ಷಗಳ ಕಾಲ ಅರ್ಜುನ್ ಜೊತೆ ಲಿವಿಂಗ್ ರಿಲೇಶನ್ಶಿಪ್’ನಲ್ಲಿದ್ದ ಮಲೈಕಾ ಇದೀಗ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದೆಷ್ಟು ಸತ್ಯ ಎಂಬುದು ತಿಳಿದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ