Rashmika Mandanna Deepfake : ಎಐ ಡೀಪ್ಫೇಕ್ ವಿಡಿಯೋಗೆ ನ್ಯಾಷುನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಬಲಿಯಾದ ಮೊದಲ ಭಾರತೀಯ ನಟಿಯರಲ್ಲಿ ಒಬ್ಬರು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ರಶ್ಮಿಕಾ ಎಐ ಅಶ್ಲೀಲ ವಿಡಿಯೋ ಬಹುದೊಡ್ಡ ಸಂಚಲನ ಸೃಷ್ಟಿಸಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ಸಧ್ಯ ನಾಲ್ವರು ಶಂಕಿತರನ್ನು ಪತ್ತೆ ಹಚ್ಚಿದ್ದಾರೆ.
ಹೌದು.. ಈ ಕುರಿತು ಸುದ್ದಿ ಸಂಸ್ಥೆ ANI ಮಾಹಿತಿ ನೀಡಿದೆ. ದೆಹಲಿ ಪೊಲೀಸರು ಈ ಪ್ರಕರಣದಲ್ಲಿ ನಾಲ್ವರು ಶಂಕಿತರನ್ನು ಪತ್ತೆಹಚ್ಚಿದ್ದಾರೆ. ಆದರೆ ಅವರು ಅಪ್ಲೋಡ್ ಮಾಡಿದವರು ಮತ್ತು ವೀಡಿಯೊದ ರಚನೆಕಾರರಲ್ಲ. ಪ್ರಮುಖ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ:Hema Chaudhary: ಕನ್ನಡದ ಹಿರಿಯ ನಟಿಯ ಆರೋಗ್ಯ ಸ್ಥಿತಿ ಗಂಭೀರ, ಐಸಿಯುನಲ್ಲಿ ಚಿಕಿತ್ಸೆ!
ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವಿಡಿಯೋ ಪ್ರೊಫೈಲ್ ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ವರು ಶಂಕಿತರನ್ನು ಪತ್ತೆಹಚ್ಚಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಆದರೆ ಅವರು ಅಪ್ಲೋಡ್ ಮಾಡುವವರು, ಸೃಷ್ಟಿಕರ್ತರು ಅಲ್ಲ. ಪೊಲೀಸರು ಪ್ರಮುಖ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇನ್ನು ಇತ್ತೀಚಿಗಷ್ಟೇ ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್ನಲ್ಲಿ ನಡೆದ ಅನಿಮಲ್ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುವಾಗ, ಡೀಪ್ಫೇಕ್ "ಭಯಾನಕ" ಎಂದು ಕರೆದಿದ್ದರು. ಅಲ್ಲದೆ, ವಿಡಿಯೋ ಕ್ಲಿಪ್ ವೈರಲ್ ಆದ ನಂತರ ತನಗೆ ಬೆಂಬಲ ನೀಡಿದ ಅಭಿಮಾನಿಗಳಿಗೆ, ಹಿರಿಯ ನಟರಿಗೆ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ:ಮಾಡಿದ್ದು ಬರೀ ಎರಡೇ ಸಿನಿಮಾ.. ಆದ್ರೆ ನಟಿ ಮೃಣಾಲ್ ಸಂಭಾವನೆ ಎಷ್ಟು ಗೊತ್ತೆ..?
ರಶ್ಮಿಕಾ ಅವರ ಡೀಪ್ಫೇಕ್ ವೀಡಿಯೊ ವೈರಲ್ ಆದ ತಕ್ಷಣ, ಸಿನಿರಂಗ ಅವರ ಬೆಂಬಲಕ್ಕೆ ನಿಂತಿತ್ತು. 'ಗುಡ್ಬೈ' ಚಿತ್ರದಲ್ಲಿ ರಶ್ಮಿಕಾ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಮಿತಾಬ್ ಬಚ್ಚನ್ ಬೆಂಬಲಕ್ಕೆ ಬಂದ ಮೊದಲ ವ್ಯಕ್ತಿ. ನಂತರ ಮೃಣಾಲ್ ಠಾಕೂರ್, ನಾಗ ಚೈತನ್ಯ ಹಾಗೂ ಚಿನ್ಮಯಿ ಶ್ರೀಪಾದ ಕೂಡ ನಟಿ ಪರ ನಿಂತಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.