Laung Remedies: ಪ್ರತಿ ಭಾರತೀಯ ಅಡುಗೆ ಮನೆಯಲ್ಲೂ ಕಂಡು ಬರುವ ಮಸಾಲೆ ಲವಂಗ. ಇದು ಖಾದ್ಯದ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯಕ್ಕೂ ದಿವ್ಯೌಷಧ. ಮಾತ್ರವಲ್ಲ, ವೈದಿಕ ಜ್ಯೋತಿಷ್ಯದಲ್ಲಿ ಲವಂಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪೂಜೆ ಸಮಯದಲ್ಲಿ ಅದರಲ್ಲೂ ನವರಾತ್ರಿ ಪೂಜೆಯಲ್ಲಿ ಲವಂಗವನ್ನು ದೇವರಿಗೆ ಅರ್ಪಿಸುವುದರಿಂದ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆಯೂ ಇದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ, ಲವಂಗಕ್ಕೆ ಸಂಬಂಧಿಸಿದ ಹಲವು ಪರಿಹಾರಗಳನ್ನು ಉಲ್ಲೇಖಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೇವಲ ಎಂಟೇ ಎಂಟು ಲವಂಗವನ್ನು ಮಲಗುವಾಗ ದಿಂಬಿನ ಕೆಳಗೆ ಇಡುವುದರಿಂದ ಇದು ಯಶಸ್ಸಿನ ಮೆಟ್ಟಿಲುಗಳನ್ನು ಏರಲು ಸಹಕರಿಸುತ್ತದೆ. ಮಾತ್ರವಲ್ಲ, ಇದು ವ್ಯಕ್ತಿಯ ಅದೃಷ್ಟವನ್ನೇ ಬದಲಿಸಲಿದ್ದು ಬಹುಬೇಗ ಶ್ರೀಮಂತರಾಗುವ ಯೋಗವನ್ನು ನೀಡುತ್ತದೆ ಎನ್ನಲಾಗುತ್ತದೆ.
ಎಂಟು ಲವಂಗವನ್ನು ದಿಂಬಿನ ಕೆಳಗಿಟ್ಟು ಮಲಗಿದರೆ ಆಗುವ ಪ್ರಯೋಜನಗಳು:-
* ನೆಗೆಟಿವ್ ಎನರ್ಜಿ ದೂರವಾಗುತ್ತದೆ:-
ಧಾರ್ಮಿಕ ನಂಬಿಕೆಗಳ ಪ್ರಕಾರ, ರಾತ್ರಿ ಮಲಗುವಾಗ ದಿಂಬಿನ ಕೆಳಗೆ 8 ಲವಂಗವನ್ನು ಇತ್ತು ಮಲಗುವುದರಿಂದ ಮನಸ್ಸಿನ ಚಂಚಲತೆ ದೂರವಾಗುತ್ತದೆ. ಮಾತ್ರವಲ್ಲ, ಇದು ನಕಾರಾತ್ಮಕತೆಯನ್ನು ದೂರವಾಗುವಂತೆ ಮಾಡಿ, ಸಕಾರಾತ್ಮಕತೆಯನ್ನು ತುಂಬುತ್ತದೆ.
ಇದನ್ನೂ ಓದಿ- ಈ ರಾಶಿಯವರಿಗೆ ವಿಶೇಷ ರಾಜಯೋಗ ! ನಿಮ್ಮ ಜೀವನದ ಮುಂದಿರುವುದು ಬರೀ ಗೆಲುವಿನ ಹಾದಿ! ಇನ್ನು ನಿಮಗಿರುವುದಿಲ್ಲ ಹಣದ ಕೊರತೆ
* ಕೆಟ್ಟ ಕನಸು:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಿಮಗೆ ಮಲಗಿದಾಗ ದುಃಸ್ವಪ್ನಗಳು ಕಾಡುತ್ತಿದ್ದರೆ ಇದರಿಂದ ಪರಿಹಾರ ಪಡೆಯಲು ನೀವು ಮಲಗುವ ದಿಂಬಿನ ಕೆಳಗೆ 8 ಲವಂಗವನ್ನು ಇಟ್ಟು ಮಲಗಿ.
* ಧನ ಲಾಭ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾತ್ರಿ ಮಲಗುವಾಗ 8 ಲವಂಗವನ್ನು ದಿಂಬಿನ ಕೆಳಗಿಟ್ಟು ಮಲಗಿ, ಮುಂಜಾನೆ ಆ ಲವಂಗಗಳನ್ನು ನೀರಿನಲ್ಲಿ ಎಸೆಯಿರಿ. ಸತತ 28 ದಿನಗಳ ಕಾಲ ಈ ರೀತಿ ಮಾಡುವುದರಿಂದ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗಿ, ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ.
* ಕೆಟ್ಟ ದೃಷ್ಟಿ:
ನಿಮ್ಮ ಕುಟುಂಬದ ಮೇಲೆ ಯಾರದಾದರೂ ಕೆಟ್ಟ ಕಣ್ಣು ಬಿದ್ದಿದೆ ಎಂದು ನೀವು ಬಾವಿಸಿದರೆ ದಿಂಬಿನ ಕೆಳಗೆ ಲವಂಗ ಇಟ್ಟು ಮಲಗುವುದರಿಂದ ನಿಮಗೆ ಪರಿಹಾರ ದೊರೆಯುತ್ತದೆ.
ಇದನ್ನೂ ಓದಿ- ಶನಿ ಹಿಮ್ಮುಖ ಚಲನೆ: 2024ರಲ್ಲಿ ಹೆಚ್ಚಾಗಲಿದೆ ಈ ರಾಶಿಯವರ ತೊಂದರೆ
* ದುರದೃಷ್ಟ ಅದೃಷ್ಟವಾಗಿ ಬದಲಾಗುತ್ತೆ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾತ್ರಿ ವೇಳೆ 8 ಲವಂಗಗಳನ್ನು ನೀವು ಮಲಗುವ ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಇದು ವ್ಯಕ್ತಿಯ ದುರಾದೃಷ್ಟವನ್ನು ಸಹ ಅದೃಷ್ಟವಾಗಿ ಬದಲಾಯಿಸುತ್ತದೆ ಎಂಬ ನಂಬಿಕೆಯಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.