ಕಿವೀಸ್ vs ಬಾಂಗ್ಲಾ ಟಿ20ಗೆ ಮಳೆರಾಯನ ಅಡ್ಡಿ...! ಫಲಿತಾಂಶ ಇಲ್ಲದೆ 2ನೇ ಪಂದ್ಯ ರದ್ದು

NZ vs BAN :ನ್ಯೂಜಿಲೆಂಡ್‌ ಮತ್ತು ಬಾಂಗ್ಲಾದೇಶ್‌ ದೇಶದ  ನಡುವಿನ ಮೂರನೆ ಟಿ20 ಪಂದ್ಯವು ಒವೆಲ್‌ ಸ್ಟೇಡಿಯಂನಲ್ಲಿ ಆಯೋಜಿಸಲಾಗಿತ್ತು. ಮಳೆಯ ಕಾರಣ ಪಂದ್ಯವನ್ನು ಅರ್ಧದಲ್ಲೆ ನಿಲ್ಲಿಸಲಾಯಿತು. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವು ಜಯಗಳಿಸಿದ್ದು, ಎರಡನೇ ಪಂದ್ಯವು ಮಳೆಯ ಕಾರಣದಿಂದ ಸ್ಥಗಿತಗೊಂಡಿದೆ. ಮುಂದಿನ ಪಂದ್ಯವು ಇದೆ ಡಿಸೆಂಬರ್‌ 31ರಣದು ನಡೆಯಲಿದ್ದು, ನ್ಯೂಜಿಲೆಂಡ್‌ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. 

Written by - Zee Kannada News Desk | Last Updated : Dec 29, 2023, 09:53 PM IST
  • ನ್ಯೂಜಿಲೆಂಡ್‌ ಮತ್ತು ಬಾಂಗ್ಲಾದೇಶ್‌ ನಡುವಿನ 2ನೇ T20 ಪಂದ್ಯ
  • ಮಳೆಯ ಕಾರಣ ಯಾವುದೇ ಫಲಿತಾಂಶವಿಲ್ಲದೇ ಪಂದ್ಯ ರದ್ದಾಯ್ತು
  • ಬಾಂಗ್ಲಾದೇಶ್‌ 1-0 ಅಂತರಗಳಿಂದ ಮುನ್ನಡೆ ಸಾಧಿಸಿದೆ.
ಕಿವೀಸ್ vs ಬಾಂಗ್ಲಾ ಟಿ20ಗೆ ಮಳೆರಾಯನ ಅಡ್ಡಿ...! ಫಲಿತಾಂಶ ಇಲ್ಲದೆ 2ನೇ ಪಂದ್ಯ ರದ್ದು title=

NZ vs BAN due to rain : ನ್ಯೂಜಿಲೆಂಡ್‌ ಹಾಗೂ ಬಾಂಗ್ಲದೇಶದ ನಡುವಿನ 2ನೇ ಟಿ20 ಪಂದ್ಯ ಇಂದು ಒವೆಲ್‌ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಮೊದಲ ಪಂದ್ಯದಲ್ಲಿ ಬಾಂಗ್ಲಾವು ಆತಿಥೇಯ ನ್ಯೂಜಿಲೆಂಡ್‌ ವಿರುದ್ದ 5 ವಿಕೆಟ್‌ಗಳ ಭರ್ಜರಿ ಜಯಗಳಿಸಿತ್ತು. ಇಂದಿನ(ಶುಕ್ರವಾರ) ಪಂದ್ಯದಲ್ಲಿ  ಬಾಂಗ್ಲಾದೇಶವು ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದು, ಕಿವೀಸ್‌ ಗೆ ಮೊದಲು ಬ್ಯಾಟಿಂಗ್‌ ಮಾಡಲು ಅವಕಾಶ ನೀಡಿತ್ತು. ಆದರೆ  ಮಳೆರಾಯನ ಕಾರಣದಿಂದ ಪಂದ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ ತಂಡವು 11 ಒವರ್‌ಗಳಲ್ಲಿ 2 ವಿಕೆಟ್‌ಗಳನ್ನು ಕಳೆದುಕೊಂಡು 72 ಕಲೆಹಾಕಿತ್ತು. ಇನ್ನು 9 ಒವರ್‌ಗಳು ಭಾಕಿ ಇರುವಾಗ ನೋಡು ನೋಡುತ್ತದಂತೆಯೇ ಮಳೆಯ ಆಗಮನವಾಗಿದೆ. ಮಳೆ ಬಂದ ಕಾರಣ ಪಂದ್ಯವನ್ನು ಅರ್ಧದಲ್ಲಿ ನಿಲ್ಲಿಸಿ ಎಲ್ಲ ಆಟಗಾರರು ಡ್ರೆಸಿಂಗ್‌ ರೂಮ್‌ಕಡೆ ಹೋದರು. ಮಳೆಯು ಇನ್ನೂ ಜೋರಾದ ಕಾರಣ ಪಂದ್ಯವನ್ನು ರದ್ಧು ಗೊಳಿಸಲಾಯಿತು. 

ಇದನ್ನು ಓದಿ-ಟೀಂ ಇಂಡಿಯಾಗೆ ಭಾರಿ ದಂಡ ವಿಧಿಸಿದ ಐಸಿಸಿ: ಕಾರಣವಾಯ್ತು ನಿಧಾನಗತಿಯ ಬೌಲಿಂಗ್...!

 ಅತಿಥಿ ದೇಶವಾದ ಬಾಂಗ್ಲಾ ವಿರದ್ದ ನ್ಯೂಜಿಲೆಂಡ್‌ ತಂಡವು ತಮ್ಮ ತವರಿನಲ್ಲೆ ಹೀನಾಯವಾಗಿ ಸೋಲನ್ನು ಅನುಭವಿಸಿದೆ. 3 ಪಂದ್ಯಗಳ T20 ಸರಣಿಯಲ್ಲಿ ಬಾಂಗ್ಲಾ ದೇಶವು ಒಂದು ಪಂದ್ಯದಲ್ಲಿ ಜಯಗಳಿಸಿಕೊಂಡರೆ  ಆತಿಥೇಯ ದೇಶ ನ್ಯೂಜಿಲೆಂಡ್‌ಗೆ ಇನ್ನೂ ಜಯ ದೊರೆಕ್ಕಿಲ್ಲ. ಈ ಪಂದ್ಯವು ಕೂಡ ಮಳೆಯಿಂದ ರದ್ದಾಗಿದೆ.

ಬಾಂಗ್ಲಾದೇಶವು 1-0 ಅಂತರಗಳಿಂದ ಮುನ್ನಡೆ ಸಾಧಿಸಿದೆ. ಮುಂದಿನ 3ನೇ ಟಿ20 ಪಂದ್ಯವು ಇದೇ ಡಿಸೆಂಬರ್‌ 31ರಂದು ನಡೆಯಲಿದ್ದು, ಈ ಪಂದ್ಯವು ಆತಿಥೇಯಾ ನ್ಯೂಜಿಲೆಂಡ್‌ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯೌಆಗಲಿದೆ. ಅಷ್ಟೇ ಅಲ್ಲದೇ ಈ ಪಂದ್ಯದಲ್ಲಿ ಸೋತರೇ ಬಾಂಗ್ಲಾ ವಿರುದ್ದ ತವರಿನಲ್ಲೇ ಸೋತು ತೀರ ಮುಖಭಂಗಕ್ಕೆ ಒಳಗಾಗ ಬೇಕಾಗುತ್ತದೆ. ಆದರಿಂದ ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ ಗೆಲುವು ದಾಖಲಿಸಲೇ ಬೇಕಾಗಿದೆ. ಇನ್ನೊಂದು ಕಡೆ ಬಾಂಗ್ಲಾವು ಸರಣಿಯನ್ನು ವಶಪಡಿಸಿಕೊಳ್ಳಲು ನೋಡುತ್ತಿದೆ.

ಇದನ್ನು ಓದಿ-2023 ರ ಕ್ಯಾಲೆಂಡರ್‌ ವರ್ಷದಲ್ಲಿ "ಶುಭ್ಮನ್‌ ಗಿಲ್‌", "ವಿರಾಟ್‌ ಕೊಹ್ಲಿ"ಯೇ ಅತ್ಯಧಿಕ ರನ್‌ ಗೆಟ್ಟರ್ಸ್! ಭಾರತದ ಇಬ್ಬರು ಆಟಗಾರರಿಗೆ ಅಗ್ರಗಣ್ಯ ಸ್ಥಾನ

ಪಂದ್ಯದ ವಿವರ :

ನ್ಯೂಜಿಲೆಂಡ್‌ ಪರ ಬ್ಯಾಟಿಂಗ್‌ನಲ್ಲಿ ಫಿನ್ ಅಲೆನ್ 2 (5), ಟಿಮ್ ಸೀಫರ್ಟ್ 42 (23) ಗಳಿಸಿ ಔಟ್‌ ಆದರೆ, ಡ್ಯಾರಿಲ್‌ ಮಿಚೆಲ್‌ 18 (24)*, ಗ್ಲೇನ್‌ ಪಿಲಿಪ್ಸ್‌ 9 (14)* ರನ್‌ಗಳಿಸಿ ಅಜೇಯರಾಗಿ ಉಳಿದರು.

ಇನ್ನೂ ಬಾಂಗ್ಲಾದೇಶ್‌ ಪರ ಬೌಲಿಂಗ್‌ನಲ್ಲಿ, ತನ್ಜಿಮ್ ಸಾಕಿಬ್ ಮತ್ತು ಶೋರಿಫ್ ಇಸ್ಲಾಂ ತಲಾ 2 ಒವರ್‌ ಮಾಡಿ 1 ವಿಕೆಟ್‌ ಪಡೆದುಕೊಂಡರು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News