Sangeetha sringeri: ಬಿಗ್ ಬಾಸ್ ಕನ್ನಡ ಸೀಸನ್ 10 ಮುಕ್ತಾಯದ ಹಂತಕ್ಕೆ ಬಂತು ತಲುಪಿದೆ. ಇನ್ನೇನು ಕೆಲವೇ ವಾರಗಳಲ್ಲಿ ಸೀಸನ್ 10ರ ಗ್ರಾಂಡ್ ಫಿನಾಲೆ ನಡೆಯಲಿದೆ. ಇದಕ್ಕೂ ಮುನ್ನ ನಡೆದ ಕಿಚ್ಚನ ಪಂಚಾಯ್ತಿಯಲ್ಲಿ ತಾನು ನಾನ್ ವೆಜ್ ಏಕೆ ತಿನ್ನುತ್ತಿಲ್ಲ ಎಂಬುದರ ಬಗ್ಗೆ ಸಂಗೀತಾ ಶೃಂಗೇರಿ ಸ್ಪಷ್ಟನೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಬಿಗ್ ಬಾಸ್ ಕನ್ನಡ ಸೀಸನ್ 10ರ 12ನೇ ವಾರದ ಪಂಚಾಯ್ತಿ ನಡೆದಿದೆ. ಈ ವಾರದ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆಯ ಓರ್ವ ಸ್ಪರ್ಧಿ ಸರಿಸುಮಾರು 74 ಲಕ್ಷಕ್ಕೂ ಅಧಿಕ ಮತ ಪಡೆದಿರುವ ಬಗ್ಗೆ ಕಿಚ್ಚ ಸುದೀಪ್ ಮಾಹಿತಿ ಬಹಿರಂಗಪಡಿಸಿದ್ದರು.
ಇಷ್ಟೊಂದು ಓಟುಗಳನ್ನು ಯಾರು ಪಡೆದಿರಬಹುದು ಎಂಬ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಚರ್ಚೆಗಳು ನಡೆಯುತ್ತಿವೆ. ಇದರ ಜೊತೆಗೆ ವೀಕ್ಷಕರು ಕೂಡ ಈ ವಿಚಾರದ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದು, ಸಂಗೀತಾ ಅಥವಾ ಪ್ರತಾಪ್’ಗೆ ಇಷ್ಟೊಂದು ಓಟು ಬಂದಿರಬಹುದು ಎಂದು ಊಹೆ ಮಾಡುತ್ತಿದ್ದಾರೆ.
ಇನ್ನೊಂದೆಡೆ ಕಿಚ್ಚ ಸುದೀಪ್ ಸಂಗೀತಾಗೆ ಪ್ರಶ್ನೆಯೊಂದನ್ನು ಕೇಳಿದ್ದರು-“ನೀವು ನಾನ್ ವೆಜ್ ತಿನ್ನುತ್ತೀರಿ, ಆದ್ರೆ ಬಿಗ್ ಬಾಸ್ ಮನೆಯಲ್ಲಿ ಯಾಕೆ ತಿನ್ನಲ್ಲ?”
ಅದಕ್ಕೆ ಪ್ರತಿಕ್ರಿಯಿಸಿದ ಸಂಗೀತಾ, “ನಾನು ನಾನ್ ವೆಜ್ ತಿನ್ನುತ್ತೇನೆ ಸರ್, ಆದರೆ ಇಲ್ಲಿ ತಿನ್ನಲ್ಲ ಎಂದು ಸಂಕಲ್ಪ ಮಾಡಿಕೊಂಡಿದ್ದೇನೆ” ಎಂದು ಹೇಳಿದ್ದಾರೆ. ಅದೇ ಸಂದರ್ಭದಲ್ಲಿ ಟ್ರೋಫಿ ಎತ್ತಿಹಿಡಿದ ಮೇಲೆಯೇ ನಾನ್ ವೆಜ್ ತಿನ್ನೋ ಶಪಥ ಮಾಡಿದ್ದೀರಾ ಎಂದು ಕಿಚ್ಚ ಕೇಳಿದ್ದಾರೆ. ಅದಕ್ಕೆ ಸಂಗೀತಾ ನಸುನಕ್ಕು ಸುಮ್ಮನಾಗಿದ್ದಾರೆ.
ಪ್ರಸ್ತುತ ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಮತ್ತು ಪ್ರತಾಪ್ ನಡುವೆ ಭಾರೀ ಪೈಪೋಟಿ ಇದೆ. ಈ ಇಬ್ಬರು ಸ್ಪರ್ಧಿಗಳಿಗೆ ಮನೆಯ ಹೊರಗೆ ಸಖತ್ ಫ್ಯಾನ್ ಫಾಲೋವಿಂಗ್ ಇದ್ದು, ಫಿನಾಲೆಯಲ್ಲಿ ಟಾಪ್ 3 ಕಂಟೆಸ್ಟೆಂಟ್ ಆಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆ ಇದೆ.