ನವದೆಹಲಿ: ಏರ್ ಇಂಡಿಯಾ ತನ್ನ ಮೊದಲ A350 ವಿಮಾನವನ್ನು ಜನವರಿ 22ರಿಂದ ದೇಶೀಯ ಮಾರ್ಗಗಳಲ್ಲಿ ಪ್ರಾರಂಭಿಸಲಿದ್ದು, ಬೆಂಗಳೂರಿನಿಂದ ಮುಂಬೈಗೆ ಮೊದಲ ಹಾರಾಟವನ್ನು ನಡೆಸಲಿದೆ.
A350-900 ವಿಮಾನವು 316 ಆಸನಗಳೊಂದಿಗೆ 3 ವರ್ಗದ ಕ್ಯಾಬಿನ್ ಸಂರಚನೆಯನ್ನು ಹೊಂದಿರುತ್ತದೆ. 28 ಬಿಸಿನೆಸ್ ಕ್ಲಾಸ್, 24 ಪ್ರೀಮಿಯಂ ಎಕಾನಮಿ ಮತ್ತು 264 ಎಕಾನಮಿ ಸೀಟುಗಳು ಇರುತ್ತವೆ.
ಇದನ್ನೂ ಓದಿ: ಇಸ್ರೋದ ಎಜಿಇಒಎಸ್: ಅಂಟಾರ್ಕ್‌ಟಿಕಾದ ರಿಮೋಟ್ ಸೆನ್ಸಿಂಗ್ ನೇತೃತ್ವ
Bookings open for our Airbus A350 operations in the domestic sector.
The brand-new aircraft, which is India’s first, will start commercial service from 22nd January 2024.
This is our way of celebrating the New Year with all of you, who just can’t wait to fly the new… pic.twitter.com/y0YebLee5v
— Air India (@airindia) January 1, 2024
‘ಭಾರತದ ಮೊದಲ ಏರ್‌ಬಸ್ A350 2024ರ ಜನವರಿ 22ರಂದು ವಾಣಿಜ್ಯ ಸೇವೆಯನ್ನು ಪ್ರವೇಶಿಸಲಿದೆ’ ಎಂದು ಏರ್‌ಲೈನ್ ಸೋಮವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
‘A350 ವಿಮಾನವನ್ನು ಆರಂಭದಲ್ಲಿ ಸಿಬ್ಬಂದಿ ಪರಿಚಿತತೆ ಮತ್ತು ನಿಯಂತ್ರಕ ಅನುಸರಣೆ ಉದ್ದೇಶಗಳಿಗಾಗಿ ವಿಮಾನವನ್ನು ದೇಶೀಯ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತದೆ. ನಂತರ ಖಂಡಗಳಾದ್ಯಂತದ ಸ್ಥಳಗಳಿಗೆ ದೀರ್ಘಾವಧಿಯ ವಿಮಾನಗಳಿಗಾಗಿ ನಿಯೋಜಿಸಲಾಗುವುದು" ಎಂದು ತಿಳಿಸಿದೆ.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಸವಾಲು!
A350 ಮೂಲಕ ನಿರ್ವಹಿಸಲಿರುವ ವಿಮಾನಗಳಿಗಾಗಿ ಏರ್ ಇಂಡಿಯಾ ಸೋಮವಾರ ಬುಕಿಂಗ್ ಆರಂಭಿಸಿದೆ. 20 A350-900 ವಿಮಾನಗಳ ಪೈಕಿ ಮೊದಲ ವಿಮಾನವು ಡಿಸೆಂಬರ್ 23ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲ್ಯಾಂಡ್ ಆಗಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.