ಭಾರತದೊಂದಿಗಿನ ವ್ಯಾಪಾರ ಸ್ಥಗಿತಗೊಳಿಸಿದ ಪಾಕಿಸ್ತಾನದಲ್ಲಿ 1 ಕೆಜಿ ಟೊಮ್ಯಾಟೋ ಬೆಲೆ ಎಷ್ಟು ಗೊತ್ತಾ?

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ತೆಗೆದುಹಾಕಿರುವ ಭಾರತದ ನಿರ್ಧಾರದಿಂದ ಅಸಮಾಧಾನಗೊಂಡ ಪಾಕಿಸ್ತಾನವು ಭಾರತದೊಂದಿಗಿನ ತನ್ನ ವ್ಯಾಪಾರ ಸಂಬಂಧವನ್ನು ಕಡಿದುಕೊಂಡಿತು. 

Last Updated : Aug 10, 2019, 03:31 PM IST
ಭಾರತದೊಂದಿಗಿನ ವ್ಯಾಪಾರ ಸ್ಥಗಿತಗೊಳಿಸಿದ ಪಾಕಿಸ್ತಾನದಲ್ಲಿ 1 ಕೆಜಿ ಟೊಮ್ಯಾಟೋ ಬೆಲೆ ಎಷ್ಟು ಗೊತ್ತಾ? title=

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ 370 ಅನ್ನು ತೆಗೆದುಹಾಕಿದ್ದರಿಂದ ಪಾಕಿಸ್ತಾನ ಆಘಾತಕ್ಕೊಳಗಾಗಿದೆ. ಈ ಕೋಪದಲ್ಲಿ ಅವರು ಭಾರತದೊಂದಿಗಿನ ವ್ಯವಹಾರ ಸಂಬಂಧವನ್ನು ಸ್ಥಗಿತಗೊಳಿಸಿದ್ದಾರೆ. ಆದರೆ, ಈ ನಿರ್ಧಾರ ಪಾಕಿಸ್ತಾನದಲ್ಲಿ ಭೀತಿ ಸೃಷ್ಟಿಸಿದೆ. ಭಾರತೀಯ ರೈತರು ಮತ್ತು ವ್ಯಾಪಾರಿಗಳು ತಮ್ಮ ಸರಕುಗಳನ್ನು ಪಾಕಿಸ್ತಾನಕ್ಕೆ ರಫ್ತು ಮಾಡಲು ನಿರಾಕರಿಸಿದರು. ಅಲ್ಲದೆ, ಸರ್ಕಾರವು ಕಸ್ಟಮ್ ಸುಂಕವನ್ನು 200 ಪ್ರತಿಶತ ಹೆಚ್ಚಿಸಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ಟೊಮ್ಯಾಟೋ ಬೆಲೆ ಪ್ರತಿ ಕಿಲೋಗ್ರಾಂಗೆ 300 ರೂಪಾಯಿಗಳನ್ನು ತಲುಪಿದೆ.

ಅಸೋಸಿಯೇಟ್ ವೆಬ್‌ಸೈಟ್ ಜೀಬಿಜ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪಾಕಿಸ್ತಾನಕ್ಕೆ ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಪೂರೈಸುವ ಆಜಾದ್ಪುರ ಮಂಡಿಯಲ್ಲಿನ ವ್ಯಾಪಾರಿಗಳು ಅಲ್ಲಿಗೆ ಸರಕುಗಳನ್ನು ಕಳುಹಿಸದಿರಲು ನಿರ್ಧರಿಸಿದ್ದಾರೆ. 

ಟೊಮ್ಯಾಟೋ ಟ್ರೇಡ್ ಅಸೋಸಿಯೇಶನ್ ಅಧ್ಯಕ್ಷ ಅಶೋಕ್ ಕೌಶಿಕ್ ಅವರ ಪ್ರಕಾರ, ಅಟಾರಿ-ಬಾಗಾ ರಸ್ತೆಯಿಂದ ಪ್ರತಿದಿನ 75 ರಿಂದ 100 ಟ್ರಕ್ ಟೊಮ್ಯಾಟೋಗಳು ಭಾರತದಿಂದ ಹೋಗುತ್ತಿದ್ದವು, ಆದರೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ತೆಗೆದುಹಾಕಿರುವ ಭಾರತದ ನಿರ್ಧಾರದಿಂದ ಅಸಮಾಧಾನಗೊಂಡ ಪಾಕಿಸ್ತಾನವು ಭಾರತದೊಂದಿಗಿನ ತನ್ನ ವ್ಯಾಪಾರ ಸಂಬಂಧವನ್ನು ಸ್ಥಗಿತಗೊಳಿಸಿರುವುದರಿಂದ, ವ್ಯಾಪಾರಿಗಳು ತರಕಾರಿಗಳು, ಹಣ್ಣುಗಳು, ಹತ್ತಿ ಮತ್ತು ನೂಲಿನ ವಸ್ತುಗಳ ಸರಬರಾಜನ್ನು ಈ ಮಾರ್ಗದ ಮೂಲಕ ಸಾಗಿಸುವ  ಬುಕಿಂಗ್ ನಿಲ್ಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಭಾರತದ ಜೊತೆಗಿನ ವ್ಯಾಪಾರ ಸ್ಥಗಿತಗೊಳಿಸಿರುವುದರಿಂದ ಪಾಕಿಸ್ತಾನದಲ್ಲಿ ಕೇವಲ ಟೊಮ್ಯಾಟೋ ಬೆಲೆ ಮಾತ್ರ ಗಗನಕ್ಕೇರಿಲ್ಲ. ಜೊತೆಗೆ ಆಲೂಗಡ್ಡೆ, ಈರುಳ್ಳಿ ಸೇರಿದಂತೆ ಹೆಚ್ಚಿನ ಹಸಿರು ತರಕಾರಿಗಳು ಅಲ್ಲಿ ದುಬಾರಿಯಾಗಿದೆ. ಸಾಮಾನ್ಯವಾಗಿ, ತರಕಾರಿಗಳ ಬೆಲೆ ದ್ವಿಗುಣಗೊಂಡಿದೆ. ಪಾಕಿಸ್ತಾನದ ತರಕಾರಿ ಮಾರುಕಟ್ಟೆಯಲ್ಲೂ ಆಲೂಗಡ್ಡೆ ಬೆಲೆ ಹೆಚ್ಚಾಗಿದೆ. ಫೆಬ್ರವರಿ 18 ರ ಮಾರುಕಟ್ಟೆಯ ಬೆಲೆಯನ್ವಯ ಆಲೂಗಡ್ಡೆಯನ್ನು ಕೆಜಿಗೆ 30-35 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಈ ಹಿಂದೆ ಅದು ಪ್ರತಿ ಕೆ.ಜಿ.ಗೆ 10-12 ರೂಪಾಯಿಗೆ ಮಾರಾಟವಾಗುತ್ತಿತ್ತು. ಸೌತೆಕಾಯಿ ಮತ್ತು ಕುಂಬಳಕಾಯಿಯನ್ನು ಹೋಲುವ ಚೀನೀಕಾಯಿ ಬೆಲೆ ಪ್ರತಿ ಕೆ.ಜಿ.ಗೆ 80 ರೂ., ತೊಂಡೆಕಾಯಿ ಬೆಲೆ ಪ್ರತಿ ಕೆ.ಜಿ.ಗೆ 60-80 ರೂ.ಗೆ ಮಾರಾಟವಾಗುತ್ತಿದೆ. ಈ ಮೊದಲು ಪ್ರತಿ ಕೆ.ಜಿ.ಗೆ 40 ರೂ. ಇತ್ತು. ಇದೇ ವೇಳೆ ದಪ್ಪ ಮೆಣಸಿನಕಾಯಿ(ಕ್ಯಾಪ್ಸಿಕಂ) ಪ್ರತಿ ಕೆ.ಜಿ.ಗೆ 80 ರೂ., ಬೆಂಡೆಕಾಯಿ ಪ್ರತಿ ಕೆ.ಜಿ.ಗೆ 120 ರೂ. ಇದಕ್ಕೂ ಮೊದಲು ಪುಲ್ವಾಮಾ ದಾಳಿಯ ನಂತರ ಭಾರತ ಪಾಕಿಸ್ತಾನದೊಂದಿಗೆ ವ್ಯಾಪಾರವನ್ನು ನಿಷೇಧಿಸಿತ್ತು. ಆ ಸಮಯದಲ್ಲಿ, ಟೊಮ್ಯಾಟೊ ಮತ್ತು ಇತರ ತರಕಾರಿಗಳ ಬೆಲೆಗಳು ಗಗನಕ್ಕೇರಿದ್ದವು.

370 ನೇ ವಿಧಿ ಸಂಬಂಧಿತ ಭಾರತದ ನಿರ್ಧಾರವನ್ನು ವಿರೋಧಿಸಿ ಪಾಕಿಸ್ತಾನ ಕೈಗೊಂಡಿರುವ ಹಲವು ಇಂತಹ ನಿರ್ಧಾರಗಳಿಂದ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದೆ. ಆದರೆ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿಲ್ಲ. ಇದರಿಂದಾಗಿ ತಾನೇ ತೋಡಿಕೊಂಡ ಹಳ್ಳಕ್ಕೆ ತಾನೇ ಬಿದ್ದಂತಾಗಿದೆ ಪಾಕಿಸ್ತಾನದ ಪರಿಸ್ಥಿತಿ.

ಮೊದಲಿಗೆ, ಸಂಜೌತಾ ಎಕ್ಸ್‌ಪ್ರೆಸ್ ಅನ್ನು ರದ್ದುಗೊಳಿಸಲು ಪಾಕಿಸ್ತಾನ ನಿರ್ಧರಿಸಿತು. ಅದರ ನಂತರ ವಾಗಾ ಗಡಿಯ ಮೂಲಕ ಹೋಗುವ ದೆಹಲಿ-ಲಾಹೋರ್ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇದಲ್ಲದೆ ಅವರು ಭಾರತೀಯ ಹೈಕಮಿಷನರ್ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸುವುದಾಗಿಯೂ ಘೋಷಿಸಿದರು. ಪಾಕಿಸ್ತಾನದ ಭಾರತೀಯ ಹೈಕಮಿಷನರ್ ಅಜಯ್ ಬಿಸಾರಿಯಾ ಇಂದು ಪಾಕಿಸ್ತಾನದಿಂದ ದೆಹಲಿಗೆ ಮರಳಲಿದ್ದಾರೆ. ಬಿಸಾರಿಯಾ ಇಸ್ಲಾಮಾಬಾದ್‌ನಿಂದ ಲಾಹೋರ್ ಮೂಲಕ ಅಮೃತಸರಕ್ಕೆ ಬರಲಿದ್ದಾರೆ.
 

Trending News