T20 World Cup 2024 ವೇಳಾಪಟ್ಟಿ ಬಿಡುಗಡೆ, ಭಾರತ-ಪಾಕ್ ಪಂದ್ಯದ ದಿನಾಂಕ ಪ್ರಕಟ!

T20 World Cup 2024 Schedule: ಟಿ20 ವಿಶ್ವಕಪ್ 2024 ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿವೆ. ಈ ಟೂರ್ನಿ ಜೂನ್ 1ರಿಂದ ಆರಂಭವಾಗಲಿದೆ. ಆದರೆ, ಅಂತಿಮ ಪಂದ್ಯ ಜೂನ್ 29 ರಂದು ನಡೆಯಲಿದೆ. (Sports News In Kannada)  

Written by - Nitin Tabib | Last Updated : Jan 5, 2024, 07:50 PM IST
  • ಭಾರತವು ಜೂನ್ 9, 2024 ರಂದು ನ್ಯೂಯಾರ್ಕ್‌ನಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
  • ಅನುಭವಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2007 ರಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಟೀಮ್ ಇಂಡಿಯಾ ಮೊದಲ ಬಾರಿಗೆ T20 ವಿಶ್ವಕಪ್ ಗೆದ್ದುಕೊಂಡಿದೆ ಎಂಬುದು ಇಲ್ಲಿ ಉಲ್ಲೇಖನೀಯ.
  • ಇದಾದ ಬಳಿಕ ಜೂನ್ 12ರಂದು ನ್ಯೂಯಾರ್ಕ್ ನಲ್ಲಿ ಆತಿಥೇಯ ಅಮೆರಿಕ ವಿರುದ್ಧ ಪಂದ್ಯ ನಡೆಯಲಿದೆ. ನಂತರ ಜೂನ್ 15 ರಂದು ಟೀಂ ಇಂಡಿಯಾ ಫ್ಲೋರಿಡಾದಲ್ಲಿ ಕೆನಡಾವನ್ನು ಎದುರಿಸಲಿದೆ.
T20 World Cup 2024 ವೇಳಾಪಟ್ಟಿ ಬಿಡುಗಡೆ, ಭಾರತ-ಪಾಕ್ ಪಂದ್ಯದ ದಿನಾಂಕ ಪ್ರಕಟ! title=

T20 World Cup 2024 Full Schedule: ಟಿ20 ವಿಶ್ವಕಪ್ 2024 ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿವೆ. ಈ ಟೂರ್ನಿ ಜೂನ್ 1ರಿಂದ ಆರಂಭವಾಗಲಿದೆ. ಆದರೆ, ಅಂತಿಮ ಪಂದ್ಯ ಜೂನ್ 29 ರಂದು ನಡೆಯಲಿದೆ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿವೆ. ಈ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ಎ ಗುಂಪಿನಲ್ಲಿವೆ. (Sports News In Kannada)

ಜೂನ್ 9 ರಂದು ಭಾರತ-ಪಾಕಿಸ್ತಾನ ಹಣಾಹಣಿ
ಭಾರತವು ಜೂನ್ 9, 2024 ರಂದು ನ್ಯೂಯಾರ್ಕ್‌ನಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಅನುಭವಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2007 ರಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಟೀಮ್ ಇಂಡಿಯಾ ಮೊದಲ ಬಾರಿಗೆ T20 ವಿಶ್ವಕಪ್ ಗೆದ್ದುಕೊಂಡಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಭಾರತ ಈ ಟೂರ್ನಿಯ ಆರಂಭಿಕ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಜೂನ್ 12 ರಂದು ನ್ಯೂಯಾರ್ಕ್‌ನಲ್ಲಿ ಆತಿಥೇಯ ಅಮೆರಿಕ ವಿರುದ್ಧ ಪಂದ್ಯ ನಡೆಯಲಿದೆ. ನಂತರ ಜೂನ್ 15 ರಂದು ಟೀಂ ಇಂಡಿಯಾ ಫ್ಲೋರಿಡಾದಲ್ಲಿ ಕೆನಡಾವನ್ನು ಎದುರಿಸಲಿದೆ. ಭಾರತವು ತನ್ನ ಎಲ್ಲಾ ಲೀಗ್ ಪಂದ್ಯಗಳನ್ನು ಯುಎಸ್ಎಯಲ್ಲಿ ಆಡಲಿದೆ ಎಂಬುದು ಇಲ್ಲಿ ಗಮನಾರ್ಹ.

ಜೂನ್ 29 ರಂದು ವಿಜೇತ ತಂಡದ ಘೋಷಣೆ
ಜೂನ್ 1ರಂದು ಆತಿಥೇಯ ಅಮೆರಿಕ ಮತ್ತು ಕೆನಡಾ ನಡುವಿನ ಪಂದ್ಯದೊಂದಿಗೆ ಟೂರ್ನಿ ಆರಂಭವಾಗಲಿದೆ. ಗುಂಪು ಹಂತದ ಪಂದ್ಯಗಳು ಜೂನ್ 1 ರಿಂದ 18 ರವರೆಗೆ ನಡೆಯಲಿವೆ. ಇದರ ನಂತರ ಜೂನ್ 19 ಮತ್ತು 24 ರ ನಡುವೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಇದೇ ವೇಳೆ, ಪಂದ್ಯಾವಳಿಯ ಸೆಮಿಫೈನಲ್ ಪಂದ್ಯಗಳು ಜೂನ್ 26 ಮತ್ತು 27 ರಂದು ನಡೆಯಲಿದ್ದು, 2024 ರ ಟಿ 20 ವಿಶ್ವಕಪ್ ವಿಜೇತ ತಂಡವನ್ನು ಜೂನ್ 29 ರಂದು ಪ್ರಕಟಿಸಲಾಗುವುದು.

ಸೆಮಿಫೈನಲ್‌ವರೆಗಿನ ಪಯಣ ಹೀಗೆ ನಿರ್ಧಾರವಾಗಲಿದೆ.
2024ರ ಟಿ20 ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸಲಿವೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೂಪರ್ 8 ಸುತ್ತಿಗೆ ಅರ್ಹತೆ ಪಡೆಯುತ್ತವೆ. ಒಂದು ಗುಂಪಿನಲ್ಲಿ A1, B2, C1 ಮತ್ತು D2 ತಂಡಗಳು ಮತ್ತು ಇನ್ನೊಂದು ಗುಂಪಿನಲ್ಲಿ A2, B1, C2 ಮತ್ತು D1 ತಂಡಗಳು ಇರಲಿವೆ. ಪ್ರತಿ ಸೂಪರ್ 8 ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ.

ಇದನ್ನೂ ಓದಿ-Viral Video: ನ್ಯೂಜಿಲ್ಯಾಂಡ್ ನಲ್ಲಿನ ಈ ಮಹಿಳಾ ಸಂಸದೆಯ ಕಡಕ್ ಭಾಷಣ ವೈರಲ್ ಆಗುತ್ತಿದೆ... ವಿಡಿಯೋ ನೋಡಿ!

ಪ್ರತಿಯೊಂದು ಗುಂಪಿನಲ್ಲಿರುವ ತಂಡಗಳ ವಿವರ ಇಂತಿದೆ

ಗುಂಪು A: ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ ಮತ್ತು ಯುಎಸ್ಎ

ಇದನ್ನೂ ಓದಿ-Viral Video: ನ್ಯೂಜಿಲ್ಯಾಂಡ್ ನಲ್ಲಿನ ಈ ಮಹಿಳಾ ಸಂಸದೆಯ ಕಡಕ್ ಭಾಷಣ ವೈರಲ್ ಆಗುತ್ತಿದೆ... ವಿಡಿಯೋ ನೋಡಿ!

ಗುಂಪು ಬಿ: ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್ ಮತ್ತು ಓಮನ್

ಗುಂಪು ಸಿ: ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಉಗಾಂಡಾ ಮತ್ತು ಪಪುವಾ ನ್ಯೂಗಿನಿಯಾ

ಗುಂಪು ಡಿ: ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್ ಮತ್ತು ನೇಪಾಳ

ಇದನ್ನೂ ಓದಿ -Trending Video: 'ಗಜರಾಜನಿಗೆ ಇರುವ ಈ ಪ್ರಜ್ಞೆ ಮನುಷ್ಯರಿಗೆ ಏಕೆ ಇಲ್ಲ', ಅಷ್ಟಕ್ಕೂ ಆನೆ ಮಾಡಿದ್ದಾದರು ಏನು?

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News