ಒಂದು ಟೈಂನಲ್ಲಿ ಬಟ್ಟೆ ಕೊಳ್ಳಲೂ ಕಷ್ಟಪಡುತ್ತಿದ್ದ; ಆದ್ರೆ ಇಂದು ಈತನೇ ಟೀಂ ಇಂಡಿಯಾದ ‘ಬೆನ್ನೆಲುಬು’… ವಿಶ್ವದ ಶ್ರೇಷ್ಠ ಬೌಲರ್!

Jasprit Bumrah Biography: ಜನವರಿ 2016 ರಲ್ಲಿ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ ಅವರು, ಇದೀಗ ಟೀಂ ಇಂಡಿಯಾದ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಇನ್ನು ಬುಮ್ರಾ ಡೆತ್ ಓವರ್‌’ಗಳಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ.

Written by - Bhavishya Shetty | Last Updated : Jan 6, 2024, 04:28 PM IST
    • ಅಂತರಾಷ್ಟ್ರೀಯ ಕ್ರಿಕೆಟಿಗ ಜಸ್ಪ್ರೀತ್ ಜಸ್ಬೀರ್ ಸಿಂಗ್ ಬುಮ್ರಾ
    • ಎಲ್ಲಾ ಸ್ವರೂಪಗಳಲ್ಲಿಯೂ ಟೀಂ ಇಂಡಿಯಾದ ಪರ ಆಡಿರುವ ಬುಮ್ರಾ
    • ಬಲಗೈ ವೇಗದ ಬೌಲರ್ ಬುಮ್ರಾ ಗಂಟೆಗೆ 153 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ
ಒಂದು ಟೈಂನಲ್ಲಿ ಬಟ್ಟೆ ಕೊಳ್ಳಲೂ ಕಷ್ಟಪಡುತ್ತಿದ್ದ; ಆದ್ರೆ ಇಂದು ಈತನೇ ಟೀಂ ಇಂಡಿಯಾದ ‘ಬೆನ್ನೆಲುಬು’… ವಿಶ್ವದ ಶ್ರೇಷ್ಠ ಬೌಲರ್! title=
Jasprit Bumrah Life Story

Jasprit Bumrah Biography: ಅಂತರಾಷ್ಟ್ರೀಯ ಕ್ರಿಕೆಟಿಗ ಜಸ್ಪ್ರೀತ್ ಜಸ್ಬೀರ್ ಸಿಂಗ್ ಬುಮ್ರಾ ಅವರನ್ನು ಭಾರತೀಯ ವೇಗದ ಬೌಲಿಂಗ್‌’ನ ಬೆನ್ನೆಲುಬು ಎಂದು ಪರಿಗಣಿಸಲಾಗಿದೆ. ಎಲ್ಲಾ ಸ್ವರೂಪಗಳಲ್ಲಿಯೂ ಟೀಂ ಇಂಡಿಯಾದ ಪರ ಆಡಿರುವ ಬುಮ್ರಾ ಅನೇಕ ಪಂದ್ಯಗಳನ್ನು ತಮ್ಮ ಸ್ವಂತ ಬಲದಿಂದ ಗೆದ್ದು ಕೊಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ಈ ಮೂವರು ವೇಗಿಗಳು ಜಗತ್ತಿನ ಯಾವುದೇ ತಂಡವನ್ನು ಬೇಕಾದ್ರೂ ನಡುಗಿಸಬಲ್ಲರು: ಜಹೀರ್ ಖಾನ್

ಬಲಗೈ ವೇಗದ ಬೌಲರ್ ಬುಮ್ರಾ ಗಂಟೆಗೆ 153 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಅಷ್ಟೇ ಅಲ್ಲದೆ, ಬುಮ್ರಾ ಅವರನ್ನು ವಿಶ್ವದ ಅತ್ಯುತ್ತಮ ಬೌಲರ್‌’ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

ಜನವರಿ 2016 ರಲ್ಲಿ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ ಅವರು, ಇದೀಗ ಟೀಂ ಇಂಡಿಯಾದ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಇನ್ನು ಬುಮ್ರಾ ಡೆತ್ ಓವರ್‌’ಗಳಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ.

ಬುಮ್ರಾ ಗುಜರಾತ್‌’ನ ಅಹಮದಾಬಾದ್‌’ನಲ್ಲಿ ನೆಲೆಸಿರುವ ಪಂಜಾಬಿ ಸಿಖ್ ಕುಟುಂಬದಲ್ಲಿ ಜನಿಸಿದವರು. ಅವರ ತಂದೆ ಜಸ್ಬೀರ್ ಸಿಂಗ್ 5 ವರ್ಷದವರಾಗಿದ್ದಾಗ ನಿಧನರಾದರು. ಶಾಲಾ ಶಿಕ್ಷಕರಾಗಿದ್ದ ಅವರ ತಾಯಿ ದಲ್ಜಿತ್ ಬುಮ್ರಾ ಅವರು ಮಧ್ಯಮ ವರ್ಗದ ವಾತಾವರಣದಲ್ಲಿ ಬೆಳೆದರು. ಒಂದು ಕಾಲದಲ್ಲಿ ಬಟ್ಟೆ, ಶೂ ಖರೀದಿಸಲು ಕೂಡ ಬುಮ್ರಾ ಬಳಿ ದುಡ್ಡಿರಲಿಲ್ಲವಂತೆ, ಅಷ್ಟೊಂದು ಕಷ್ಟದ ಜೀವನ ಮುನ್ನಡೆಸಿದ್ದ ಬುಮ್ರಾ ಇಂದು ವಿಶ್ವದ ಅತ್ಯುತ್ತಮ ಬೌಲರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ರಾಕಿಂಗ್‌ ಸ್ಟಾರ್‌ ಯಶ್ ಬರ್ತ್‌ಡೇ ಕಾಮನ್ ಡಿಪಿ ಶಿವಣ್ಣನಿಂದ ರಿಲೀಸ್!

ಇನ್ನು 15 ಮಾರ್ಚ್ 2021 ರಂದು ಗೋವಾದಲ್ಲಿ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ಬುಮ್ರಾ ವಿವಾಹವಾದರು. ಮಹಾರಾಷ್ಟ್ರದ ಪುಣೆ ಮೂಲದ ಸಂಜನಾ ಅವರು ಮಾಜಿ ಮಿಸ್ ಇಂಡಿಯಾ ಫೈನಲಿಸ್ಟ್ ಕೂಡ ಆಗಿದ್ದರು. 4 ಸೆಪ್ಟೆಂಬರ್ 2023 ರಂದು, ಜಸ್ಪ್ರೀತ್ ಮತ್ತು ಸಂಜನಾ ಗಂಡು ಮಗುವಿಗೆ ಜನ್ಮ ನೀಡಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News