Budha Nakshatra Parivartane: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಬುಧನು ನಾಳೆ (ಜನವರಿ 20, 2024) ಮಧ್ಯಾಹ್ನ 03:48ರ ಸುಮಾರಿಗೆ ಪೂರ್ವಾಷಾಢ ನಕ್ಷತ್ರವನ್ನು ಪ್ರವೇಶಿಸಲಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ, ತರ್ಕ, ಬುದ್ದಿ, ಮಾತು, ವೃತ್ತಿ-ವ್ಯವಹಾರದ ಅಂಶ ಎಂದು ಪರಿಗಣಿಸಲಾಗಿರುವ ಬುಧನ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ವ್ಯಕ್ತಿಯ ಜೀವನದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ ಎಂದು ಪರಿಗಣಿಸಲಾಗಿದೆ.
ಪೂರ್ವಾಷಾಢ ನಕ್ಷತ್ರವು 27 ನಕ್ಷತ್ರಗಳಲ್ಲಿ 20 ನೇ ನಕ್ಷತ್ರವಾಗಿದೆ. ಪೂರ್ವಾಷಾಢ ನಕ್ಷತ್ರದ ಅಧಿಪತಿ ಗ್ರಹವಾದ ಶುಕ್ರ ಹಾಗೂ ಬುಧನ ನಡುವೆ ಸ್ನೇಹಭಾವ ಇರುವುದರಿಂದ ಬುಧನ ಈ ನಕ್ಷತ್ರ ಪರಿವರ್ತನೆಯು ಕೆಲವು ರಾಶಿಯವರ ಜೀವನದಲ್ಲಿ ಮಂಗಳಕರ ಫಲಗಳನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಬುಧನ ನಕ್ಷತ್ರ ಬದಲಾವಣೆ ಯಾವ ರಾಶಿಯವರ ಮೇಲೆ ಏನು ಪರಿಣಾಮ ಬೀರಲಿದೆ ಎಂದು ತಿಲಿಯೋಣ...
ಬುಧ ನಕ್ಷತ್ರ ಪರಿವರ್ತನೆ- ದ್ವಾದಶ ರಾಶಿಗಳ ಮೇಲೆ ಇದರ ಪರಿಣಾಮ:-
ಮೇಷ ರಾಶಿ:
ಪೂರ್ವಾಷಾಢ ನಕ್ಷತ್ರದಲ್ಲಿ ಬುಧನ ಸಂಚಾರವು ಮೇಷ ರಾಶಿಯವರಿಗೆ ಉನ್ನತ ಶಿಕ್ಷಣ, ಪ್ರವಾಸ ಮತ್ತು ಆಧ್ಯಾತ್ಮಿಕತೆಯಲ್ಲಿ ಆಸಕ್ತಿಯನ್ನೂ ಹೆಚ್ಚಿಸಲಿದೆ.
ವೃಷಭ ರಾಶಿ:
ಬುಧನ ನಕ್ಷತ್ರ ಬದಲಾವಣೆಯು ವೃಷಭ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಭಾರೀ ಯಶಸ್ಸನ್ನು ಕರುಣಿಸಲಿದೆ.
ಮಿಥುನ ರಾಶಿ:
ಪೂರ್ವಾಷಾಢ ನಕ್ಷತ್ರದಲ್ಲಿ ಬುಧನ ಪ್ರವೇಶವು ಈ ಅವಧಿಯಲ್ಲಿ, ವಿದೇಶಕ್ಕೆ ಪ್ರಯಾಣಿಸಲು ಯೋಜಿಸುತ್ತಿದ್ದರೆ ಅಥವಾ ವಿದೇಶದಲ್ಲಿ ವ್ಯಾಪಾರ ಮಾಡಲು ಯೋಚಿಸುತ್ತಿರುವ ಮಿಥುನ ರಾಶಿಯ ಜನರಿಗೆ ಅನುಕೂಲಕರವಾಗಿರುತ್ತದೆ.
ಕರ್ಕಾಟಕ ರಾಶಿ:
ಬುಧ ಸಂಚಾರದಲ್ಲಿನ ಬದಲಾವಣೆಯಿಂದಾಗಿ ಕರ್ಕಾಟಕ ರಾಶಿಯವರು ವಿವಾದಗಳಲ್ಲಿ ಸಿಲುಕುವ ಸಾಧ್ಯತೆ ಇದೆ. ಹಾಗಾಗಿ, ನಿಮ್ಮ ಮಾತಿನ ಮೇಲೆ ಸಂಯಮ ಕಾಯ್ದುಕೊಳ್ಳಿ.
ಇದನ್ನೂ ಓದಿ- Snake In Dream: ಕನಸಿನಲ್ಲಿ ಯಾವ ಬಣ್ಣದ ಹಾವನ್ನು ಕಂಡರೆ ಏನು ಫಲ?
ಸಿಂಹ ರಾಶಿ:
ಪೂರ್ವಾಷಾಢ ನಕ್ಷತ್ರದಲ್ಲಿ ಬುಧನ ಪ್ರವೇಶದ ಪರಿಣಾಮವಾಗಿ ನಿಮ್ಮ ಮಾತು ಮಧುರವಾಗಲಿದ್ದು, ಇದೇ ನಿಮ್ಮ ಬಂಡವಾಳವಾಗಲಿದೆ.
ಕನ್ಯಾ ರಾಶಿ:
ಬುಧ ನಕ್ಷತ್ರ ಪರಿವರ್ತನೆಯ ಪರಿಣಾಮವಾಗಿ ಕನ್ಯಾ ರಾಶಿಯವರಿಗೆ ನಿಮ್ಮ ಜ್ಞಾಪಕ ಶಕ್ತಿಯು ಉತ್ತಮವಾಗಿರುತ್ತದೆ. ರಾಜಕೀಯ ಜೀವನದಲ್ಲಿರುವ ಜನರಿಗೆ ಭಾರೀ ಪ್ರಯೋಜನವಾಗಲಿದೆ.
ತುಲಾ ರಾಶಿ:
ಬುಧ ನಕ್ಷತ್ರ ಬದಲಾವಣೆ ಪ್ರಭಾವದಿಂದಾಗಿ ತುಲಾ ರಾಶಿಯವರು ನೀವು ನಿಮ್ಮ ಮಾಧುರ್ಯದ ಮಾತುಗಳಿಂದ ಎಲ್ಲಾ ಕೆಲಸಗಳನ್ನು ಸಮರ್ಥವಾಗಿ ಮಾಡಲು ಸಾಧ್ಯವಾಗುತ್ತದೆ.
ವೃಶ್ಚಿಕ ರಾಶಿ:
ಪೂರ್ವಾಷಾಢ ನಕ್ಷತ್ರದಲ್ಲಿ ಸಂಚರಿಸುತ್ತಿರುವ ಬುಧನು ವೃಶ್ಚಿಕ ರಾಶಿಯವರ ಜೀವನದಲ್ಲಿ ಆರ್ಥಿಕ ಪ್ರಗತಿಯನ್ನು ತರಲಿದೆ.
ಇದನ್ನೂ ಓದಿ- 2024ರಲ್ಲಿ 3 ಬಾರಿ ಬದಲಾಗಲಿದೆ ಶನಿದೇವನ ಸ್ಥಾನ: ಇನ್ಮುಂದೆ ಈ 3 ರಾಶಿಗಳಿಗೆ ಸುಖದ ಸುಪ್ಪತ್ತಿಗೆ- ಕಷ್ಟಗಳ ಬಗ್ಗೆ ಚಿಂತೆಯೇ ಬೇಡ
ಧನು ರಾಶಿ:
ಬುಧ ನಕ್ಷತ್ರ ಬದಲಾವಣೆಯು ಧನು ರಾಶಿಯವರಿಗೆ ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳುವ ಅವಕಾಶವನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ಜೀವನಶೈಲಿಯಲ್ಲಿ ಧನಾತ್ಮಕ ಮತ್ತು ಕ್ರಾಂತಿಕಾರಿ ಬದಲಾವಣೆಗಳು ಕಂಡು ಬರಲಿವೆ.
ಮಕರ ರಾಶಿ:
ಪೂರ್ವಾಷಾಢ ನಕ್ಷತ್ರದಲ್ಲಿ ಸಂಚರಿಸಲಿರುವ ಬುಧನು ಮಕರ ರಾಶಿಯವರ ಮಾನಸಿಕ ಸಾಮರ್ಥ್ಯವನ್ನು ಬಲಗೊಳಿಸಳಿದ್ದಾನೆ.
ಕುಂಭ ರಾಶಿ:
ಕುಂಭ ರಾಶಿಯ ಅಧಿಪತಿಯಾದ ಶನಿಯ ಸ್ನೇಹಿ ಗ್ರಹವಾದ ಬುಧನ ನಕ್ಷತ್ರ ಬದಲಾವಣೆಯು ಈ ಸಮಯದಲ್ಲಿ ನಿಮ್ಮ ಹೆಸರು, ಖ್ಯಾತಿಯನ್ನು ಹೆಚ್ಚಿಸಲಿದೆ. ಹಣಕಾಸಿನ ಲಾಭ ಸಾಧ್ಯತೆಯೂ ಇದೆ.
ಮೀನ ರಾಶಿ:
ಪೂರ್ವಾಷಾಢ ನಕ್ಷತ್ರದಲ್ಲಿ ಬುಧನ ಸಂಚಾರವು ಮೀನ ರಾಶಿಯ ಉದ್ಯೋಗಸ್ಥರಿಗೆ ಮಂಗಳಕರ ಫಲಗಳನ್ನು ನೀಡಲಿದೆ. ಸಮಾಜದಲ್ಲಿ ಗೌರವವೂ ಹೆಚ್ಚಾಗಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.