IPL 2024: ಇಂಡಿಯನ್ ಪ್ರೀಮಿಯರ್ ಲೀಗ್’ನ 17 ನೇ ಆವೃತ್ತಿ ಶುರುವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಇದಕ್ಕೂ ಮುನ್ನ ಎಲ್ಲಾ ತಂಡಗಳಲ್ಲಿ ಕೊಂಚ ಅಸಮಾಧಾನ ಭುಗಿಲೆದ್ದಿದೆ. ಇತ್ತೀಚೆಗಷ್ಟೇ ಐಪಿಎಲ್ 2024ರ ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಿ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ನಗದು ಒಪ್ಪಂದದ ಮೂಲಕ ತಂಡಕ್ಕೆ ವಾಪಸ್ ಕರೆತಂದು ನಾಯಕತ್ವವನ್ನು ನೀಡಲಾಗಿತ್ತು, ಅಷ್ಟೇ ಅಲ್ಲದೆ, ರೋಹಿತ್ ಶರ್ಮಾ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲಾಗಿತ್ತು.
ಇದನ್ನೂ ಓದಿ: ಎಣ್ಣೆ, ಶಾಂಪೂ, ಹೇರ್ ಸ್ಪಾ ಅಲ್ಲ ಈ ಗಿಡಮೂಲಿಕೆ ಬಳಸಿದರೆ ಕೂದಲು ಉದುರುವುದು ತಕ್ಷಣ ನಿಲ್ಲುತ್ತದೆ!
ಇದೀಗ ಈ ವಿಷಯದ ಬಗ್ಗೆ ಸ್ವತಃ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಮಾರ್ಕ್ ಬೌಚರ್ ಮಾತನಾಡಿದ್ದಾರೆ. ಈ ನಿರ್ಧಾರ ಸಂಪೂರ್ಣವಾಗಿ ಕ್ರಿಕೆಟ್ ನಿರ್ಧಾರ ಎಂದು ನಾನು ಭಾವಿಸುತ್ತೇನೆ ಎಂದು ಮಾರ್ಕ್ ಬೌಚರ್ ಹೇಳಿದ್ದಾರೆ. ವಿಂಡೋ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳುವಂತೆ ಮಾಡಿದೆವು. ಇದು ಪರಿವರ್ತನೆಯ ಹಂತವಾಗಿದೆ ಮತ್ತು ಭಾರತದ ಅನೇಕ ಜನರು ಇದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅವರು ಭಾವುಕರಾಗುತ್ತಾರೆ. ಆದರೆ, ಅಂತಹ ಆಟಗಳಿಂದ ಭಾವನೆಗಳನ್ನು ದೂರವಿಡಬೇಕು ಎಂದು ನೀವು ತಿಳಿದಿರಬೇಕು ಎಂದಿದ್ದಾರೆ.
'ರೋಹಿತ್ ಶರ್ಮಾ ಆಟಗಾರನಾಗಿ ಸುಧಾರಿಸಲಿದ್ದಾರೆ'
“ರೋಹಿತ್ ಶರ್ಮಾ ಆಟಗಾರನಾಗಿ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಅವರು ಮೈದಾನಕ್ಕೆ ಹೋಗಿ ತಂಡಕ್ಕಾಗಿ ಕೆಲವು ದೊಡ್ಡ ಸ್ಕೋರ್’ಗಳನ್ನು ಮಾಡಬೇಕೆಂದು ನಾವು ಬಯಸುತ್ತೇವೆ. ರೋಹಿತ್ ಶರ್ಮಾ ಅವರ ಅತ್ಯುತ್ತಮ ವಿಷಯವೆಂದರೆ ಅವರು ಅದ್ಭುತ ವ್ಯಕ್ತಿ. ಅವರು ದೀರ್ಘಕಾಲದವರೆಗೆ ನಾಯಕತ್ವ ವಹಿಸಿದ್ದಾರೆ. ಮುಂಬೈ ಇಂಡಿಯನ್ಸ್ಗಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ: ಈ ಮನೆಮದ್ದುಗಳನ್ನು ಟ್ರೈ ಮಾಡಿ, ಬೆನ್ನು ನೋವು, ಸೊಂಟನೋವಿನಿಂದ ಸಿಗುತ್ತೆ ತಕ್ಷಣ ಪರಿಹಾರ
“ಮುಂಬೈ ಇಂಡಿಯನ್ಸ್ ತಂಡದಲ್ಲಿ ನಾವು ಈ ವಿಷಯವನ್ನು ಚರ್ಚಿಸಿದಾಗ ರೋಹಿತ್ ಆಟಗಾರನಾಗಿ ಅತ್ಯುತ್ತಮವಾದದ್ದನ್ನು ನೀಡಲು ಸಾಧ್ಯವಾಗುತ್ತದೆ ಎಂದು ಎಲ್ಲರೂ ಹೇಳಿದರು. ಸದ್ಯ ರೋಹಿತ್ ಟೀಂ ಇಂಡಿಯಾ ನಾಯಕರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರನ್ನು ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ಕೆಳಗಿಳಿಸಿದರೆ ವಿವಾದ ಸೃಷ್ಟಿಯಾಗುವುದು ನಿಶ್ಚಿತ. ಆದರೆ ಈ ನಿರ್ಧಾರದ ನಂತರ, ಈಗ ಅವರು ಐಪಿಎಲ್ 2024 ರಲ್ಲಿ ಆಡುವಾಗ, ಅವರ ಮೇಲಿನ ಒತ್ತಡವು ತುಂಬಾ ಕಡಿಮೆ ಇರುತ್ತದೆ ಮತ್ತು ಅವರು ಅದ್ಭುತ ಪ್ರದರ್ಶನ ನೀಡುತ್ತಾರೆ ಎಂದು ನಾವು ಭಾವಿಸುತ್ತೇವೆ” ಎಂದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ