ತುಮಕೂರು: ಅದು ಅಮವಾಸ್ಯೆ ದಿನ.. ಮುಂಜಾನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಕುಳಿನಂಜಯ್ಯನ ಪಾಳ್ಯದಲ್ಲಿ ನಡೆದಿದ್ದ ಕೊಲೆ ಪ್ರಕರಣ. ಇಡೀ ತಾಲೂಕು ಬೆಚ್ಚುವಂತೆ ಮಾಡಿತ್ತು. ಕಾರಣ ಕೊಲೆಯಾದವ ಅಥಿತಿ ಶಿಕ್ಷಕ ಮರಿಯಪ್ಪ ಅಲ್ಲದೆ ಮಾಟಾ ಮಂತ್ರದಲ್ಲಿ ಎತ್ತಿದ ಕೈ ಆಗಿತ್ತು. ಗ್ರಾಮದ ಹೊರವಲಯದಲ್ಲಿ ಇರೋ ನಿರ್ಜನ ಪ್ರದೇಶ..ಈ ನಿರ್ಜನ ಪ್ರದೇಶದ ರಸ್ತೆಯ ಕೂಗಳತೆ ದೂರದಲ್ಲೇ ರಕ್ತದ ಮಡುವಿನಲ್ಲಿ ಪತ್ತೆಯಾಗಿರೋ ಶವ..ಕೊಲೆಯ ಭೀಕರತೆ ಎಷ್ಟೆಂದರೇ ,ಶವದ ಕೈ ಕತ್ತರಿಸಿ, ತಲೆಯನ್ನ ಜಜ್ಜಲಾಗಿದೆ..ಇಷ್ಟು ಭೀಕರವಾಗಿ ಕೊಲೆಯಾಗಿರೋ ದೃಶ್ಯ ಮಾಟಾಮಂತ್ರಕ್ಕೆ ಯಾರೋ ದ್ವೇಷದಿಂದ ಬರ್ಬರ ಕೊಲೆ ಮಾಡಲಾಗಿದೆ ಎಂದು ನಂಬಲಗಿತ್ತು. ಆದರೆ ಈ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ..
ಕೊಲೆ ಹರಸ್ಯ ಬೆನ್ನ ಬಿದ್ದ ಖಾಕಿಗೆ ಹತ್ಯೆಯ ಹಿಂದಿನ ಕೈಗಳು ಯಾರು ಅನ್ನೋದನ್ನ ಪತ್ತೆ ಹಚ್ಚಿದ್ದೇ ರೋಚಕ. ಶಿಕ್ಷಕನ ಕೊಲೆಗೆ ಹೆಂಡತಿ ಮತ್ತು ಮಗಳಿಂದಲೇ ಸುಫಾರಿಯ ಘಟನೆ ಕೇಳಿ ಬೆಚ್ಚಿದ್ದಾರೆ. ಹೆಂಡತಿ ಶೊಭಾ, ಮಗಳು ಹೇಮಲತಾರಿಂದ ಕೊಲೆಗೆ ಸುಫಾರಿ ಕೊಟ್ಟಿದ್ದರು ಅನ್ನೋ ಸತ್ಯ ಬಹಿರಂಗವಾಗಿದೆ. ತಂದೆ ಮರಿಯಪ್ಪ ಮಗಳು ಹೇಮಲತಾ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದ್ದ. ಅದೇ ಗ್ರಾಮದ ಶಾಂತ ಕುಮಾರ್ ನನ್ನು ಪ್ರೀತಿಸಿದ್ದ ಹೇಮಲತಾಗಳಿಗೆ ಬುದ್ದಿ ಹೇಳಿದ್ದ. ಅಲ್ಲದೆ ಈ ಸಂಬಂಧ ಶಾಂತ ಕುಮಾರ್ ನನ್ನ ಥಳಿಸಿದ್ದ ಮರಿಯಪ್ಪ ಶಾಂತಕುಮಾರ್ ದ್ವೇಷ ಕಟ್ಟಿಕೊಂಡಿದ್ದ. ಸ್ನೇಹಿತರ ಜೊತೆಗೂಡಿ ಮರಿಯಪ್ಪ ಕೊಲೆಗೆ ಸಂಚು ರೂಪಿಸಿದ್ದ. ಈ ಸಂಚಿಗೆ ಶಾಂತಕುಮಾರ್ ಜೊತೆ ಹೇಮಲತಾ ಹಾಗೂ ತಾಯಿ ಶೋಭಾ ಕೈ ಜೋಡಿಸಿದ್ದರು. ಸ್ಕೇಚ್ ರೆಡಿಯಾಗುತಿದ್ದಂತೆ ಬೆಂಗಳೂರಿನಲ್ಲಿ ವಾಸವಿದ್ದ ಶಾಂತಕುಮಾರ್ ಸ್ನೇಹಿತ ಸಂತು, ಹೇಮಂತ್ ಗೆ ಕೊಲೆ ಸುಫಾರಿ ನೀಡಲಾಗಿತ್ತು. ಹೇಮಂತ್ ಕಾನೂನು ಸಂಘರ್ಷಕ್ಕೆ ಒಳಪಟ್ಟ ಮೂರು ಬಾಲಕರನ್ನು ಬಳಸಿಕೊಂಡು ಕೊಲೆಗೆ ದಿನಾಂಕ ಫಿಕ್ಸ್ ಮಾಡಿಕೊಂಡಿದ್ದರು.
ಇದನ್ನೂ ಓದಿ-ಬ್ಯಾಟರಾಯನಪುರ ವಾರ್ಡ್ ವ್ಯಾಪ್ತಿಯ ರೂ. 85 ಕೋಟಿ ಮೌಲ್ಯದ ಒತ್ತುವರಿ ಆಸ್ತಿ ವಶಪಡಿಸಿಕೊಂಡ ಪಾಲಿಕೆ
ಇತ್ತ ಕೊಲೆಯ ದಿನ ಮರಿಯಪ್ಪನ ಚಲನ ವಲನಗಳ ಬಗ್ಗೆ ಮಾಹಿತಿ ನೀಡಿದರು ತಾಯಿ-ಮಗಳು. ಮರಿಯಪ್ಪ ಅಮವಾಸ್ಯೆ ಪೂಜೆ ಮುಗಿಸಿ ವಾಪಸ್ ಗ್ರಾಮಕ್ಕೆ ಬರುತ್ತಿದ್ದ ಮಾಹಿತಿ ಪಡೆದು ಮರಿಯಪ್ಪ ಗ್ರಾಮದ ಬಳಿ ಬರುವ ಸಂದರ್ಭದಲ್ಲಿ ಬೈಕ್ ಅಡ್ಡಗಟ್ಟಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದಿದ್ದಾರೆ. ಗಾಬರಿಗೊಂಡ ಬೈಕ್ ನಿಂದ ಕೆಳಗೆ ಇಳಿದು ಓಡಿದರೂ ಬೆನ್ನಟ್ಟಿದ ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿಕೊಲೆ ಮಾಡಿದ್ದರು.
ದುರಂತ ಅಂದರೆ ಮಗಳು ಹೇಮಲತಾ ತಂದೆಯ ಕೊಲೆ ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸುವಂತೆ ದೂರು ನೀಡಿದರು. ತಾಯಿ ಕೂಡ ಘಟನಾ ಸ್ಥಳದಲ್ಲಿ ಕಣ್ಣೀರಿಟ್ಟು ಏನೂ ಗೊತ್ತಿಲ್ಲದಂತೆ ನಾಟವಾಡಿದ್ರು. ಒಟ್ಟು 8 ಜನರನ್ನ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿರುವ ಪೊಲೀಸರಿಗೆ ಶಾಂತಕುಮಾರ್, ಸಂತು, ಹೇಮಂತ್, ಶೋಭಾ, ಹೇಮಲತಾ ಹಾಗೂ ಮೂವರು ಬಾಲಕರು ವಶಕ್ಕೆ ಪಡೆದಿದ್ದಾರೆ. ಹೇಮಲತಾ ಪ್ರೇಮ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ್ದಾಗ ಕೊಲೆ ಪ್ರಕರಣ ಬಯಲಾಗಿದೆ. ಕೊಲೆಯಾದ ಮರಿಯಪ್ಪನ ತಂಗಿ ಮಗನಾಗಿದ್ದ ಶಾಂತಕುಮಾರ್, ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೇಮಲತಾ ನರ್ಸಿಂಗ್ ಕೆಲಸ ಮಾಡ್ತಿದರು. ಕುಣಿಗಲ್ ಪೊಲೀಸರಿಂದ ಆರೋಪಿಗಳಿಂದ ಮತ್ತಷ್ಟು ಮಾಹಿತಿ ತೆಗೆಯೋ ಕೆಲಸ ನಡೆಯುತ್ತಿದೆ.
ಇದನ್ನೂ ಓದಿ-ತಡರಾತ್ರಿ ಪ್ರತಿಭಟನಾಕಾರರ ಮನವೊಲಿಸಿದ ಪಾಲಿಕೆ ಆಯುಕ್ತರು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.