OLA Gift: ತನ್ನೆಲ್ಲಾ ಸ್ಕೂಟರ್ಗಳ ಮೇಲೆ ₹25000 ರಿಯಾಯಿತಿ ಘೋಷಿಸಿ ಗ್ರಾಹಕರಿಗೆ ಭಾರಿ ಉಡುಗೊರೆ ನೀಡಿದೆ ಓಲಾ!

OLA Price Drop: ದೇಶದಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿ ಉತ್ತೇಜಿಸಲು ಕಂಪನಿಯು ಈ ಘೋಷಣೆ ಮಾಡಿದೆ. ಕಂಪನಿಯು ತನ್ನ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ರೂ 25,000 ವರೆಗೆ ರಿಯಾಯಿತಿಯನ್ನು ಘೋಷಿಸಿದೆ ಎಂದು ಹೇಳಿದೆ (Technology News In Kannada).  

Written by - Nitin Tabib | Last Updated : Feb 16, 2024, 06:00 PM IST
  • ICE ಎಂಜಿನ್ ಹೊಂದಿರುವ ಸ್ಕೂಟರ್‌ಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಪ್ರತಿ ವರ್ಷ 30,000 ರೂಪಾಯಿಗಳನ್ನು ಉಳಿಸಬಹುದು ಎಂದು ಕಂಪನಿ ಹೇಳಿದೆ. ಆದಾಗ್ಯೂ, ಈ ಬೆಲೆ ಫೆಬ್ರವರಿ ತಿಂಗಳಿಗೆ ಮಾತ್ರ ಮಾನ್ಯವಾಗಿರುತ್ತದೆ. ಅದರ ನಂತರ ಸ್ಕೂಟರ್‌ಗಳ ಬೆಲೆಗಳು ಕಂಪನಿಯು ನಿರ್ಧರಿಸಿದಂತೆಯೇ ಇರಲಿದೆ
OLA Gift: ತನ್ನೆಲ್ಲಾ ಸ್ಕೂಟರ್ಗಳ ಮೇಲೆ ₹25000 ರಿಯಾಯಿತಿ ಘೋಷಿಸಿ ಗ್ರಾಹಕರಿಗೆ ಭಾರಿ ಉಡುಗೊರೆ ನೀಡಿದೆ ಓಲಾ! title=

OLA Reduces e-Scooter Rates: ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಓಲಾ ಎಲೆಕ್ಟ್ರಿಕ್ ತನ್ನ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದೆ. ಕಂಪನಿಯು ತನ್ನ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ಘೋಷಿಸಿದೆ. ದೇಶದಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿಯನ್ನು ಉತ್ತೇಜಿಸಲು ಕಂಪನಿಯು ಈ ಘೋಷಣೆ ಮಾಡಿದೆ. ಕಂಪನಿಯು ತನ್ನ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ರೂ 25,000 ವರೆಗೆ ರಿಯಾಯಿತಿಯನ್ನು ಘೋಷಿಸಿದೆ ಎಂದು ಹೇಳಿದೆ. S1 ಪೋರ್ಟ್‌ಫೋಲಿಯೊದಲ್ಲಿ ಕಂಪನಿಯು ರೂ 25000 ವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಈ ಹೊಸ ಬೆಲೆಗಳು ಫೆಬ್ರವರಿ ತಿಂಗಳವರೆಗೆ ಮಾತ್ರ ಮಾನ್ಯವಾಗಿರಲಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ. (Technology News In Kannada)

ನಿಮಗೆ ₹ 25000 ವರೆಗೆ ರಿಯಾಯಿತಿ ಸಿಗಲಿದೆ
ಕಂಪನಿ ನೀಡಿರುವ ಮಾಹಿತಿಯ ಪ್ರಕಾರ ಫೆಬ್ರವರಿ ತಿಂಗಳಲ್ಲಿ ತನ್ನ ಎಲ್ಲಾ ಸ್ಕೂಟರ್‌ಗಳ ಮೇಲೆ 25,000 ರೂ.ವರೆಗೆ ರಿಯಾಯಿತಿ ಲಭ್ಯವಿರಲಿದೆ. ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಜನರು ಹೊಂದಿರುವ ಹಿಂಜರಿಕೆಯನ್ನು ಹೋಗಲಾಡಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.

ICE ಎಂಜಿನ್ ಹೊಂದಿರುವ ಸ್ಕೂಟರ್‌ಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಪ್ರತಿ ವರ್ಷ 30,000 ರೂಪಾಯಿಗಳನ್ನು ಉಳಿಸಬಹುದು ಎಂದು ಕಂಪನಿ ಹೇಳಿದೆ. ಆದಾಗ್ಯೂ, ಈ ಬೆಲೆ ಫೆಬ್ರವರಿ ತಿಂಗಳಿಗೆ ಮಾತ್ರ ಮಾನ್ಯವಾಗಿರುತ್ತದೆ. ಅದರ ನಂತರ ಸ್ಕೂಟರ್‌ಗಳ ಬೆಲೆಗಳು ಕಂಪನಿಯು ನಿರ್ಧರಿಸಿದಂತೆಯೇ ಇರಲಿದೆ

ಹೊಸ ಬೆಲೆ ಮಾಹಿತಿಯನ್ನು ಇಲ್ಲಿ ಪಡೆಯಿರಿ
ರೂಪಾಂತರಗಳು         ಪ್ರಸ್ತುತ ಬೆಲೆ (₹ ನಲ್ಲಿ)                             ಹೊಸ ಬೆಲೆ (₹ ನಲ್ಲಿ)

S1 ಪ್ರೊ                     1,47,499                  1,29,999
S1 ಏರ್              1,19,999                  1,04,999
X (4kwh)         1,09,999                 1,09,999
S1 X+ (3kwh)         1,09,999                 84,999
S1 X (3kwh)         89,999                     89,999
S1 X (2kwh)       79,999                     79,999

ಇದನ್ನೂ ಓದಿ-Wifi Router Tips: ಮನೆಯ ಈ ನಾಲ್ಕು ಸ್ಥಳಗಳಲ್ಲಿ ಅತಿ ಹೆಚ್ಚಿನ ಇಂಟರ್ನೆಟ್ ವೇಗ ನೀಡುತ್ತೇ ವೈಫೈ ರೌಟರ್!

ಕಂಪನಿಯು ಜನವರಿಯಲ್ಲಿ 31000 ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ
VAHAN ಪೋರ್ಟಲ್ ಪ್ರಕಾರ, ಕಂಪನಿಯು ಜನವರಿಯಲ್ಲಿ 31000 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಅದು ಡಿಸೆಂಬರ್‌ನಲ್ಲಿ 30000 ಯುನಿಟ್‌ಗಳು ಮಾರಾತಗೊಂಡಿದ್ದವು. ಈ ದಾಖಲೆಯ ಮಾರಾಟದ ನಂತರ, ಕಂಪನಿಯು ಮತ್ತೊಮ್ಮೆ EV 2W ವಿಭಾಗದಲ್ಲಿ ಮುನ್ನಡೆ ಸಾಧಿಸಿದೆ ಮತ್ತು 40 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ಇದನ್ನೂ ಓದಿ-Hero MotoCorp ನಿಂದ ಪ್ರಿಮಿಯಮ್ ಬೈಕ್ Mavrick 440 ಬಿಡುಗಡೆ, ಬೆಲೆ-ವೈಶಿಷ್ಟ್ಯಗಳ ವಿವರ ಇಲ್ಲಿದೆ

ಜನವರಿಯ ಮಾರಾಟದ ಅಂಕಿಅಂಶಗಳ ಕುರಿತು ಹೇಳುವುದಾದರೆ, ಕಂಪನಿಯು ದಾಖಲೆ ನುಚ್ಚುನೂರು ಮಾಡುವ ಮಾರಾಟವನ್ನು ಮಾಡಿದೆ ಮತ್ತು ವರ್ಷದಿಂದ ವರ್ಷಕ್ಕೆ ಶೇ. 70ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ (YoY). ಕಂಪನಿಯು ಡಿಸೆಂಬರ್‌ನಲ್ಲಿ 30 ಸಾವಿರ ಯುನಿಟ್‌ಗಳನ್ನು ಮಾರಾಟ ಮಾಡಿತ್ತು ಮತ್ತು ಜನವರಿಯಲ್ಲಿ 1000 ಹೆಚ್ಚುವರಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುವ ಮೂಲಕ ಅದು 31000 ಅಂಕಗಳನ್ನು ತಲುಪಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News