Top Smart Watches At Low Price: ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಟಾಪ್ ಬ್ರಾಂಡ್‌ ಸ್ಮಾರ್ಟ್ ವಾಚ್‌ಗಳಿವು!

Top Smart Watches At Low Price: ಕಡಿಮೆ ಬೆಲೆಯಲ್ಲಿ ಬ್ರಾಂಡೆಡ್‌ ಸ್ಮಾರ್ಟ್ ವಾಚ್‌ಗಳನ್ನು ಖರೀದಿಸಲು ಬಯಸುವವರಿಗೆ ಇದು ಸಂತಸ ತರುವ ಸುದ್ದಿ.

Written by - Chetana Devarmani | Last Updated : Feb 24, 2024, 11:10 AM IST
  • ಕಡಿಮೆ ಬೆಲೆಯ ಸ್ಮಾರ್ಟ್ ವಾಚ್‌ಗಳು
  • ಅಗ್ಗದ ಬೆಲೆಗೆ ಬ್ರಾಂಡೆಡ್‌ ಸ್ಮಾರ್ಟ್ ವಾಚ್‌
  • ಟಾಪ್ ಬ್ರಾಂಡ್‌ ಸ್ಮಾರ್ಟ್ ವಾಚ್‌ಗಳಿವು
Top Smart Watches At Low Price: ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಟಾಪ್ ಬ್ರಾಂಡ್‌ ಸ್ಮಾರ್ಟ್ ವಾಚ್‌ಗಳಿವು!  title=

Top Branded Smart Watches: ತಂತ್ರಜ್ಞಾನ ಬೆಳೆದಂತೆಲ್ಲ ಎಲೆಕ್ಟ್ರಿಕ್ ಸಾಧನಗಳ ಬಳಕೆಯೂ ಹೆಚ್ಚತ್ತಲೇ ಸಾಗುತ್ತಿದೆ. ಅದರಲ್ಲೂ ಪ್ರಪಂಚದಾದ್ಯಂತ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳ ಬಳಕೆ ದ್ವಿಗುಣಗೊಂಡಿದೆ. ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಸ್ಮಾರ್ಟ್ ವಾಚ್‌ಗಳ ಬೇಡಿಕೆಯೂ ಹೆಚ್ಚಾಗಿದೆ. ಯುವಕರು ಕೂಡ ಹೆಚ್ಚಾಗಿ ಇಂತಹ ವಾಚ್‌ಗಳನ್ನೇ ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ.  

ನಾಯ್ಸ್ ಕಲರ್‌ಫಿಟ್ ಅಲ್ಟ್ರಾ ಬಜ್: ಈ ಸ್ಮಾರ್ಟ್ ವಾಚ್ ಮಾರುಕಟ್ಟೆಯಲ್ಲಿ ರೂ.1,799 ಬೆಲೆಯಲ್ಲಿ ಲಭ್ಯವಿದೆ. ವಾಚ್ 1.75-ಇಂಚಿನ ಟಚ್‌ಸ್ಕ್ರೀನ್, ಬ್ಲೂಟೂತ್ ಕಾಲಿಂಗ್, SpO2 ಮಾನಿಟರಿಂಗ್, 100+ ಸ್ಪೋರ್ಟ್ಸ್ ಮೋಡ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಒಂದೇ ಚಾರ್ಜ್‌ನಲ್ಲಿ ಸುಮಾರು 7 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ.

ಇದನ್ನೂ ಓದಿ:ಮುಂದಿನ ನಿರ್ಧಾರ ಫೆಬ್ರವರಿ 29 ರಂದು ಪ್ರಕಟ : ಅಲ್ಲಿಯವರೆಗೂ  'ದಿಲ್ಲಿ ಚಲೋ' ಹೋರಾಟ ಸ್ಥಗಿತ 

ಫೈರ್-ಬೋಲ್ಟ್ ರಿಂಗ್ ಡಯಲ್ಸ್:‌ ಈ ಫೈರ್-ಬೋಲ್ಟ್ ರಿಂಗ್ ಡಯಲ್ಸ್ ಸ್ಮಾರ್ಟ್ ವಾಚ್ ಕೂಡ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಲ್ಲಿದೆ. ಈ ವಾಚ್ ಮಾರುಕಟ್ಟೆಯಲ್ಲಿ ರೂ.999 ಬೆಲೆಯಲ್ಲಿ ಲಭ್ಯವಿದೆ. ಇದು 1.32 ಇಂಚಿನ ಟಚ್‌ಸ್ಕ್ರೀನ್, SpO2 ಮಾನಿಟರಿಂಗ್, 24/7 ಹಾರ್ಟ್‌ ಬೀಟ್ ಮಾನಿಟರಿಂಗ್, ಮಲ್ಟಿಪಲ್ ಸ್ಪೋರ್ಟ್ಸ್ ಮೋಡ್‌ಗಳಂತಹ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಒಂದೇ ಚಾರ್ಜ್‌ನಲ್ಲಿ 7 ದಿನಗಳವರೆಗೆ ಬ್ಯಾಟರಿ ಅವಧಿಯನ್ನು ನೀಡುತ್ತದೆ. 

ರಿಯಲ್‌ ಮಿ ವಾಚ್ 2 ಪ್ರೊ: ಈ ಸ್ಮಾರ್ಟ್ ವಾಚ್ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಇದರ ಬೆಲೆ 2,999 ರೂ. ಆಗಿದೆ. 1.75-ಇಂಚಿನ ಟಚ್‌ಸ್ಕ್ರೀನ್, GPS ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಒಂದೇ ಚಾರ್ಜ್‌ನಲ್ಲಿ 12 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ.

ಅಮೇಜ್‌ಫಿಟ್ ಬಿಪ್ ಯು ಪ್ರೊ: ಈ Amazfit Bip U Pro ಸ್ಮಾರ್ಟ್ ವಾಚ್ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಲಭ್ಯವಿದೆ. ಈ ವಾಚ್ ರೂ.3,499 ಬೆಲೆಯಲ್ಲಿ ಲಭ್ಯವಿದೆ. ಇದು GPS, SpO2 ಮಾನಿಟರಿಂಗ್ ಹೀಗೆ ಹಲವು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಒಂದೇ ಚಾರ್ಜ್‌ನಲ್ಲಿ ಸುಮಾರು 9 ದಿನಗಳ ಬ್ಯಾಟರಿ ಅವಧಿಯನ್ನು ಒದಗಿಸುತ್ತದೆ.

ಇದನ್ನೂ ಓದಿ:ಅಮೆಜಾನ್ ದಟ್ಟ ಕಾಡಿನ ನದಿಯ ಬುಡದಲ್ಲಿ ದೈತ್ಯ ಅನಕೊಂಡ ಪ್ರತ್ಯಕ್ಷ..! ವಿಡಿಯೊ ವೈರಲ್‌  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News