Diabetes Control Tips: ಬಾದಾಮಿ ಹಿಟ್ಟಿನ ರೊಟ್ಟಿ ಸೇವನೆಯಿಂದಲೂ ಮಧುಮೇಹ ನಿಯಂತ್ರಣಕ್ಕೆ ಬರುತ್ತೆ ಗೊತ್ತಾ?

Diabetes Control Flours: ಮಧುಮೇಹ ರೋಗಿಗಳು ಈ 5 ಧಾನ್ಯಗಳನ್ನು ತಮ್ಮ ಆಹಾರದಲ್ಲಿ ಶಾಮೀಲುಗೊಳಿಸಿದರೆ, ಅವು ಅವರಿಗೆ ಮಧುಮೇಹವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡಬಲ್ಲವು. ಆ ಧಾನ್ಯಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ (Health News In Kannada)  

Written by - Nitin Tabib | Last Updated : Mar 2, 2024, 09:30 PM IST
  • ಇದರ ಜೊತೆಗೆ ನಾವೆಲ್ಲರೂ ನಮ್ಮ ಜೀವನಶೈಲಿಯಲ್ಲಿ ಎಲ್ಲವನ್ನೂ ಮಾಡಬೇಕು, ಅದು ಆಹಾರವಾವಾಗಿರಲಿ,
  • ವ್ಯಾಯಾಮ ಅಥವಾ ಇತರ ಯಾವುದೇ ಕೆಲಸ, ವ್ಯವಸ್ಥಿತವಾಗಿ, ಸೀಮಿತ ಮತ್ತು ಸರಿಯಾದ ರೀತಿಯಲ್ಲಿ.
  • ನೀವು ಅದನ್ನು ಮಾಡಿದರೆ ಚಿಕ್ಕ ಕಾಯಿಲೆ ಕೂಡ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಬಾಧಿಸುವುದಿಲ್ಲ.
Diabetes Control Tips: ಬಾದಾಮಿ ಹಿಟ್ಟಿನ ರೊಟ್ಟಿ ಸೇವನೆಯಿಂದಲೂ ಮಧುಮೇಹ ನಿಯಂತ್ರಣಕ್ಕೆ ಬರುತ್ತೆ ಗೊತ್ತಾ? title=

Diabetes Home Remedies: ಇಂದಿನ ಕಾಲದಲ್ಲಿ ಮಧುಮೇಹ ಒಂದು ಸಾಮಾನ್ಯ ಕಾಯಿಲೆಯಾಗಿ ಮಾರ್ಪಟ್ಟಿದೆ. ಭಾರತದಲ್ಲಿ ಪ್ರತಿ ಇಬ್ಬರಲ್ಲಿ ಓರ್ವ ವ್ಯಕ್ತಿ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ವಾಸ್ತವದಲ್ಲಿ, ಈ ಕಾಯಿಲೆಗೆ ಪ್ರಮುಖ  ಕಾರಣವೆಂದರೆ ಜನರ ತಪ್ಪು ಆಹಾರ ಪದ್ಧತಿ ಮತ್ತು ಅವರ ಹದಗೆಟ್ಟ ಜೀವನಶೈಲಿ. ನೀವು ಕೂಡ ಒಂದು ವೇಳೆ ಮಧುಮೇಹದಿಂದ ಬಳಲುತ್ತಿದ್ದರೆ, ನಿಮ್ಮ ಆಹಾರದಲ್ಲಿ ಅಗತ್ಯ ಆಹಾರ ಪದಾರ್ಥಗಳನ್ನು ಶಾಮೀಲುಗೊಳಿಸಬೇಕು, ಈ ಆಹಾರಗಳು ನಿಮ್ಮ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಮಧುಮೇಹವನ್ನು ಗಮನದಲ್ಲಿಟ್ಟುಕೊಂಡು, ಇಂದು ನಾವು ನಿಮಗೆ ಕೆಲ ಅಗತ್ಯ ಧಾನ್ಯಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಅವು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ ಮತ್ತು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿಡಲು ಸಹ ಅವು ಕೆಲಸ ಮಾಡುತ್ತವೆ. (Health News In Kannada)

ನಿಮ್ಮ ಆಹಾರದಲ್ಲಿ ಈ ಧಾನ್ಯಗಳನ್ನು ಶಾಮೀಲುಗೊಳಿಸಿ
ಮಲ್ಟಿ ಗ್ರಾಮ್ ರೊಟ್ಟಿಯನ್ನು ಸೇವಿಸಿ

ಮಧುಮೇಹವನ್ನು ನಿಯಂತ್ರಣದಲ್ಲಿಡಲು, ನೀವು ವಿವಿಧ ರೀತಿಯ ಬೇಳೆಕಾಳುಗಳಿಂದ ತಯಾರಿಸಿದ  ಹಿಟ್ಟಿನಿಂದ ಮಾಡಿದ ರೊಟ್ಟಿಯನ್ನು ಸೇವಿಸಬಹುದು. ಬೇಳೆ ಹಿಟ್ಟಿನ ರೊಟ್ಟಿ ತಿನ್ನಲು ಸ್ವಲ್ಪ ಭಾರವಾಗಿರುತ್ತದೆ, ಆದ್ದರಿಂದ ನೀವು ಇದನ್ನು ದಿನದ ಅವಧಿಯಲ್ಲಿ ಸೇವಿಸಿದರೆ ಉತ್ತಮ, ನೀವು ನಿಮ್ಮ ಆಹಾರ ಕ್ರಮವನ್ನು ದೀರ್ಘಕಾಲದವರೆಗೆ ನಿಯಂತ್ರಿಸಬಹುದು ಮತ್ತು ನೀವು ತೂಕ ಇಳಿಕೆಯ ಸಮಸ್ಯೆಗಳಿಂದ ಬೇಗನೆ ಮುಕ್ತರಾಗಬಹುದು. ಇದರ ಹಿಟ್ಟಿನಲ್ಲಿ ಪ್ರೊಟೀನ್ ಮತ್ತು ನಾರಿನಂಶ ಹೇರಳ ಪ್ರಮಾಣದಲ್ಲಿದ್ದು, ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿದೆ.

ಇನ್ಸುಲಿನ್ ಹೆಚ್ಚಿಸಲು ಹುರುಳಿ ಹಿಟ್ಟಿನ ರೊಟ್ಟಿ ತಿನ್ನಿ
ಹುರುಳಿ ಹಿಟ್ಟನ್ನು ಪೋಷಕಾಂಶಗಳ ಆಗರ ಎಂದು ಪರಿಗಣಿಸ್ಲಾಗುತ್ತದೆ. ಇದು ಫೈಬರ್, ಪ್ರೋಟೀನ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಹೇರಳ ಪ್ರಮಾಣದಲ್ಲಿ ಹೊಂದಿರುತ್ತದೆ. ಇದರ ಸೇವನೆಯು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಇದರ ಸೇವನೆಯಿಂದ ನಿಮ್ಮ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚುತ್ತದೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

ಸಕ್ಕರೆ ಮಟ್ಟ ನಿಯಂತ್ರಿಸಲು ರಾಗಿ ರೊಟ್ಟಿ ತಿನ್ನಿರಿ
ರಾಗಿ ಹಿಟ್ಟು ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಈ ಹಿಟ್ಟಿನಲ್ಲಿ ಪ್ರೋಟೀನ್ ಮತ್ತು ಫೈಬರ್ ಜೊತೆಗೆ ಕಬ್ಬಿಣ ಮತ್ತು ಇತರ ಪೋಷಕಾಂಶಗಳು ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ. ನಿಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದರ ಜೊತೆಗೆ, ದೇಹದ ತೂಕವನ್ನು ಹೆಚ್ಚಿಸುವುದು, ರಕ್ತಹೀನತೆ ಮುಂತಾದ ಇತರ ಸಮಸ್ಯೆಗಳನ್ನು ಸಹ ಇದು ನಿವಾರಿಸುತ್ತದೆ.

ಪೋಷಕಾಂಶ ಭರಿತ ಜೋಳದ ಹಿಟ್ಟಿನ ರೊಟ್ಟಿ
ಎಲ್ಲಾ ಧಾನ್ಯಗಳ ಪೈಕಿ ಜೋಳ ನಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸುವ ಒಂದು ಪರಿಪೂರ್ಣ ಧಾನ್ಯವಾಗಿದೆ.  ಅದರ ಹಿಟ್ಟಿನಿಂದ ತಯಾರಿಸಿದ ರೊಟ್ಟಿ ಸೇವಿಸಿ, ನಿಮ್ಮ ದೇಹದಲ್ಲಿ ಹೆಚ್ಚುತ್ತಿರುವ ಇನ್ಸುಲಿನ್ ಮಟ್ಟವನ್ನು ನೀವು ಕಡಿಮೆ ಮಾಡಬಹುದು ಮತ್ತು ಮಲಬದ್ಧತೆ ಮತ್ತು ಯಕೃತ್ತಿನ ಸಂಬಂಧಿತ ಸಮಸ್ಯೆಗಳಿಗೆ ಇದು ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ.

ಬಾದಾಮಿ ಹಿಟ್ಟಿನ ರೊಟ್ಟಿ ಸೇವಿಸಿ
ಬಾದಾಮಿಯಿಂದ ತಯಾರಿಸಿದ ರೊಟ್ಟಿ ಮಧುಮೇಹವನ್ನು ನಿಯಂತ್ರಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಬಾದಾಮಿ ಹಿಟ್ಟು ಪ್ರೋಟೀನ್ ಮತ್ತು ಫೈಬರ್ ಸೇರಿದಂತೆ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದರ ರೊಟ್ಟಿಯನ್ನು  ನಿಯಮಿತವಾಗಿ ಸೇವಿಸುವುದು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಮಧುಮೇಹವನ್ನು ಸಹ ತ್ವರಿತವಾಗಿ ಇದರಿಂದ ನಿಯಂತ್ರಿಸಬಹುದು.

ಇದನ್ನೂ ಓದಿ-Hair Fall Remedy:ಕೂದಲುದುರುವ ಸಮಸ್ಯೆಗೆ ಒಂದು ವರದಾನಕ್ಕೆ ಸಮಾನ ಈ ಎಣ್ಣೆ!

ಇದರ ಜೊತೆಗೆ ನಾವೆಲ್ಲರೂ ನಮ್ಮ ಜೀವನಶೈಲಿಯಲ್ಲಿ ಎಲ್ಲವನ್ನೂ ಮಾಡಬೇಕು, ಅದು ಆಹಾರವಾಗಿರಲಿ, ವ್ಯಾಯಾಮ ಅಥವಾ ಇತರ ಯಾವುದೇ ಕೆಲಸ, ವ್ಯವಸ್ಥಿತವಾಗಿ, ಸೀಮಿತ ಮತ್ತು ಸರಿಯಾದ ರೀತಿಯಲ್ಲಿ. ನೀವು ಅದನ್ನು ಮಾಡಿದರೆ ಚಿಕ್ಕ ಕಾಯಿಲೆ ಕೂಡ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಬಾಧಿಸುವುದಿಲ್ಲ.

ಇದನ್ನೂ ಓದಿ-Work Place Health Tips: ನೀವೂ ವರ್ಕ್ ಪ್ಲೇಸ್ ನಲ್ಲಿ ಸತತ ಕೆಲಸ ಮಾಡುತ್ತೀರಾ? ಈ ಸಲಹೆ ಅನುಸರಿಸಿ!

(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News