Rashmika Mandanna On Vijay Devarakonda : ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್ ವದಂತಿಗಳ ಬೆನ್ನಲ್ಲೇ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ, ನಿಶ್ಚಿತಾರ್ಥ ಮಾಡಿಕೊಳ್ಳುವ ಬಗ್ಗೆ ಎಷ್ಟೇ ವದಂತಿ ಹಬ್ಬಿದರೂ ರಶ್ಮಿಕಾ ಮತ್ತು ವಿಜಯ್ ತಾವು ಕೇವಲ 'ಆಪ್ತ ಸ್ನೇಹಿತರು' ಎಂದು ಹೇಳುತ್ತ ಬಂದಿದ್ದಾರೆ.
ಗೀತ ಗೋವಿಂದಂ (2018) ಮತ್ತು ಡಿಯರ್ ಕಾಮ್ರೇಡ್ (2019) ಚಿತ್ರಗಳಲ್ಲಿನ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ವೀಕ್ಷಕರ ಮನಗೆದ್ದಿತ್ತು. ಇವರ ನ್ಯಾಚುರಲ್ ಕೆಮಿಸ್ಟ್ರಿಯಿಂದಾಗಿ ಅಭಿಮಾನಿಗಳು ಮತ್ತೆ ಬೆಳ್ಳಿತೆರೆಯಲ್ಲಿ ಈ ಜೋಡಿ ಒಂದಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Bollywood: ಇತ್ತ ಹೆಂಡತಿ ಅತ್ತ ಇಬ್ಬರು ನಟಿಯರ ಅಫೇರ್! 2 ಕೋಟಿ ಗಿಫ್ಟ್ʼನಿಂದ ರಿವೀಲ್ ಆದ ಈ ಸ್ಟಾರ್ ನಟನ ಸೀಕ್ರೆಟ್ ಸಂಬಂಧ?
ನಾವು ಖಂಡಿತವಾಗಿಯೂ ಒಟ್ಟಿಗೆ ಮತ್ತೆ ಕೆಲಸ ಮಾಡುತ್ತೇವೆ. ಇದಕ್ಕಾಗಿ ಸ್ಕ್ರಿಪ್ಟ್ ಅನ್ನು ಹುಡುಕುತ್ತಿದ್ದೇವೆ. ತೆರೆ ಮೇಲೆ ನಮ್ಮನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ನಿಜವಾಗಿಯೂ ಕಾಯುತ್ತಿದ್ದಾರೆ. ಖಂಡಿತವಾಗಿಯೂ ಅದನ್ನು ಸಾಧ್ಯವಾಗಿಸುತ್ತೇವೆ ಎಂದಿದ್ದಾರೆ.
ರಶ್ಮಿಕಾ ಮಂದಣ್ಣ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ಅವರು ಫ್ಯಾನ್ ಕ್ಲಬ್ನ ಪೋಸ್ಟ್ಗೆ ಕಾಮೆಂಟ್ ಮಾಡಿದ್ದು, ಹೆಚ್ಚಿನ ಗಮನವನ್ನು ಸೆಳೆಯಿತು. ಈ ಪೋಸ್ಟ್ ನಲ್ಲಿ ರಶ್ಮಿಕಾ ಭಾವಿ ಪತಿ ಹೊಂದಿರಬೇಕಾದ ಗುಣಗಳ ಬಗ್ಗೆ ಚರ್ಚಿಸಲಾಗುತ್ತಿತ್ತು. ರಶ್ಮಿಕಾ ಪತಿ "VD" (ವಿಜಯ್ ದೇವರಕೊಂಡ) ಹಾಗಿರಬೇಕು ಎಂದು ಪೋಸ್ಟ್ ಇತ್ತು. ಇದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ, "ಅದು ನಿಜ" ಎಂದು ಹೇಳುವ ಮೂಲಕ ಚರ್ಚೆ ಹುಟ್ಟು ಹಾಕಿದರು.
ಇದನ್ನೂ ಓದಿ: ನಟಿ ಸೌಂದರ್ಯ ಜೊತೆಗೆ ಜಗಪತಿ ಬಾಬು ಅಫೇರ್.! ಮದುವೆ ವರೆಗೂ ಹೋಗಿತ್ತಾ ಈ ಸಂಬಂಧ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.