Gold Rate: ಸತತ ಏರುತ್ತಿರುವ ಚಿನ್ನ, ಬೆಳ್ಳಿ ಬೆಲೆ.. ಮಾರುಕಟ್ಟೆಯಲ್ಲಿ ಹೀಗಿದೆ ಇಂದಿನ ರೇಟ್!

Gold-Silver Rate: ಕಳೆದ ತಿಂಗಳ ಅಂತ್ಯದಲ್ಲಿ ಸಾಕಷ್ಟು ಇಳಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿ ಬೆಲೆ ಮಾರ್ಚ್‌ ತಿಂಗಳ ಮೊದಲ ವಾರದಲ್ಲಿ ಸತತ ಏರಿಕೆಯಾಗುತ್ತಿದೆ.. ಹಾಗಾದರೆ ಇಂದು ಮಾರುಕಟ್ಟೆಯಲ್ಲಿ ಯಾವ ರೇಟ್‌ ಇದೆ ಎನ್ನುವುದನ್ನು ಇಲ್ಲಿ ತಿಳಿಯಿರಿ..   

Written by - Savita M B | Last Updated : Mar 3, 2024, 09:28 AM IST
  • ಫೆಬ್ರವರಿ ತಿಂಗಳಿನಲ್ಲಿ ಇಳಿಕೆ ಕಂಡು ಒಂದೆರದು ದಿನ ಅದೇ ಬೆಲೆಯನ್ನು ಕಾಯ್ದುಕೊಂಡಿದ್ದ ಚಿನ್ನ
  • ಚಿನ್ನದ ಬೆಲೆ ಇಂದು ಏರಿಕೆಯಾಗಿದೆ
  • ಇದರೊಂದಿಗೆ ಬೆಳ್ಳಿಯ ಬೆಲೆ ಸಹ ಹೆಚ್ಚಾಗಿದೆ
Gold Rate: ಸತತ ಏರುತ್ತಿರುವ ಚಿನ್ನ, ಬೆಳ್ಳಿ ಬೆಲೆ.. ಮಾರುಕಟ್ಟೆಯಲ್ಲಿ ಹೀಗಿದೆ ಇಂದಿನ ರೇಟ್!  title=

Gold Rate: ಫೆಬ್ರವರಿ ತಿಂಗಳಿನಲ್ಲಿ ಇಳಿಕೆ ಕಂಡು ಒಂದೆರದು ದಿನ ಅದೇ ಬೆಲೆಯನ್ನು ಕಾಯ್ದುಕೊಂಡಿದ್ದ ಚಿನ್ನ ಇಂದು ದಿಢೀರ್‌ ಏರಿಕೆಯಾಗಿದೆ.. ಇದರೊಂದಿಗೆ ಬೆಳ್ಳಿಯ ಬೆಲೆ ಸಹ ಹೆಚ್ಚಾಗಿದೆ.. ನಿನ್ನೆಗೆ ಹೋಲಿಸಿದರೆ ಚಿನ್ನ ಇಂದು ಗ್ರಾಂಗೆ 85 ಪೈಸೆ.. ಬೆಳ್ಳಿ 1 ಗ್ರಾಂಗೆ 10 ಪೈಸೆ ಹೆಚ್ಚಾಗಿದೆ. ಹಾಗಾದ್ರೆ ಇಂದು ಇತರ ರಾಜ್ಯಗಳಲ್ಲಿ 22 ಕ್ಯಾರೆಟ್‌ ಹಾಗೂ 24 ಕ್ಯಾರೆಟ್‌ ಬಂಗಾರದ ಬೆಲೆ ಹೇಗಿದೆ ಎನ್ನುವದನ್ನು ಇದೀಗ ತಿಳಿಯೋಣ..

22 ಕ್ಯಾರೆಟ್‌ ಚಿನ್ನದ ಬೆಲೆ
ನಿನ್ನೆ 5,790 ರೂ ಇದ್ದ 22 ಕ್ಯಾರೆಟ್‌ ಬಂಗಾರದ ಬೆಲೆ ಇವತ್ತು ಗ್ರಾಂಗೆ 5,875 ರೂ ಆಗಿದೆ.. ನಿನ್ನೆ  46,320 ರೂ ಇದ್ದ 8 ಗ್ರಾಂ ಚಿನ್ನ ಇಂದು 47,000 ರೂ ಇದೆ.. ಹಾಗೇ 10 ಗ್ರಾಂಗೆ 58,750 ರೂ. 100 ಗ್ರಾಂಗೆ 5,87,500 ರೂ ಬೆಲೆ ನಿಗದಿಮಾಡಲಾಗಿದೆ.. 

24 ಕ್ಯಾರೆಟ್‌ ಚಿನ್ನದ ಬೆಲೆ
24 ಕ್ಯಾರೆಟ್‌ ಗೋಲ್ಡ್‌ ಬೆಲೆ ಪ್ರತಿ ಗ್ರಾಂಗೆ 93ರೂ. ಹೆಚಾಗಿದ್ದು...ಸದ್ಯ 1 ಗ್ರಾಂ ಚಿನ್ನದ ಬೆಲೆ 6,409 ರೂ. ಆಗಿದೆ.. ಆದರೆ ನಿನ್ನೆ 6,316 ರೂ ಇತ್ತು.  8 ಗ್ರಾಂ ಚಿನ್ನದ ಬೆಲೆ 51,272 ರೂ. 10 ಗ್ರಾಂಗೆ 64,090 ರೂ. 100 ಗ್ರಾಂಗೆ ನಿನ್ನೆ 6,31,600 ರೂ ಇತ್ತು ಆದರೆ ಇಂದು 6,40,900 ರೂ ಆಗಿದೆ.

ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ: 
 ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂಗೆ 22 ಕ್ಯಾರೆಟ್‌ ಚಿನ್ನದ ಬೆಲೆಗೆ 58,750 ರೂ ಫಿಕ್ಸ್‌ ಆಗಿದೆ.. ಹಾಗೇ 24 ಕ್ಯಾರೆಟ್‌ ಚಿನ್ನದ ಬೆಲೆ 64,090 ರೂ. ಇದೆ. ಉಳಿದ ಪ್ರಮುಖ ನಗರಗಳಾದ ಮೈಸೂರು, ದಾವಣಗೆರೆ, ಬಳ್ಳಾರಿ, ಮಂಗಳೂರಿನಲ್ಲಿ ಇದೇ ಬೆಲೆ ನಿಗದಿಯಾಗಿದೆ.. ಮಜೂರಿ ಮತ್ತು ಇತರೆ ಶುಲ್ಕದಲ್ಲಿ ಮಾತ್ರ ವ್ಯತ್ಯಾಸ ಕಂಡು ಬರಬಹುದು..

 ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 58,900 ಆಗಿದ್ದರೆ 10 ಗ್ರಾಂ 24 ಕ್ಯಾರೆಟ್ ಚಿನ್ನ ರೂ. 64,240. ಮುಂಬೈ, ಕೋಲ್ಕತ್ತಾ ನಗರಗಳಲ್ಲಿ... 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 58,750, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 64,090. ಚೆನ್ನೈನಲ್ಲಿ 10 ಗ್ರಾಂ ಚಿನ್ನ ರೂ. ಸಾವಿರ ಹೆಚ್ಚಾಗಿದೆ. ಇದರಿಂದಾಗಿ 10 ಗ್ರಾಂ 22ಕ್ಯಾರೆಟ್ ಚಿನ್ನದ ಬೆಲೆ 59,400 ರೂ., 24ಕ್ಯಾರೆಟ್ ಚಿನ್ನದ ಬೆಲೆ 63,720 ರೂ. ಹೈದರಾಬಾದ್, ವಿಶಾಖಪಟ್ಟಣಂನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 58,750 ರೂ.ಗೆ ತಲುಪಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 64,090 ನಿಗದಿಯಾಗಿದೆ.. 

ಇಂದಿನ ಬೆಳ್ಳಿ ಬೆಲೆ ಹೀಗಿದೆ:
 ಇಂದು 1 ಗ್ರಾಂ ಬೆಳ್ಳಿ ಬೆಲೆ 72.10 ರೂ. ಆಗಿದ್ದು.. 8 ಗ್ರಾಂಗೆ 576.80ರೂ ಆಗಿದೆ.. ಹಾಗೇ 10 ಗ್ರಾಂಗೆ 721 ರೂ. 100 ಗ್ರಾಂಗೆ 7,210 ರೂ ಹಾಗೂ 1 ಕಿಲೋಗೆ 72,100 ರೂ. ಬೆಲೆ ಫಿಕ್ಸ್‌ ಆಗಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News