How to get rid of White Hair : ಬಿಳಿ ಕೂದಲು ನಮ್ಮ ಮುಖದ ಸೌಂದರ್ಯವನ್ನು ಕೆಡಿಸುತ್ತದೆ. ಹಿಂದೆ 40-50 ವಯಸ್ಸಿನ ನಂತರ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದ್ದರೆ ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ತಲೆಯಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಕೂದಲು ಕಿರಿ ವಯಸ್ಸಿನಲ್ಲಿ ಬಿಳಿಯಾಗುವುದರ ಹಿಂದೆ ಕಾರಣ ಅನೇಕವಿರಬಹುದು. ಬಿಳಿ ಕೂದಲಿಗೆ ರಾಸಾಯನಿಕ ಪರಿಹಾರ ಬಳಸುವುದಕ್ಕೆ ಮುನ್ನ ಬಿಳಿ ಕೂದಲಿಗೆ ಕಾರಣ ಏನು ಎಂದು ತಿಳಿದುಕೊಳ್ಳಬೇಕು. ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಮೂಡಲು ಇರುವ ಮುಖ್ಯವಾದ ಕಾರಣವೆಂದರೆ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿ. ಅಲ್ಲದೆ ವಿಟಮಿನ್ ಕೊರತೆ, ಧೂಮಪಾನ ಮತ್ತು ಇತರ ಅಂಶಗಳಿಂದ ಕೂದಲು ಬಿಳಿಯಾಗುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ಯುವಕರವರೆಗೂ ಬಿಳಿ ಕೂದಲಿನ ಸಮಸ್ಯೆ ಕಾಡುತ್ತದೆ. ಬಿಳಿ ಕೂದಲನ್ನು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿಸಲು ಹಲವು ಮಾರ್ಗಗಳಿವೆ. ಬಿಳಿ ಕೂದಲು ಕಾಣಿಸಿಕೊಂಡ ಕೂಡಲೇ ಡೈ, ಅಥವಾ ಹೇರ್ ಕಲರ್ ಹಚ್ಚಲೇ ಬೇಕೆಂದಿಲ್ಲ. ರಾಸಾಯನಿಕಗಳಿಲ್ಲದ ಮನೆಮದ್ದುಗಳನ್ನು ಬಳಸುವ ಮೂಲಕ ಯಾವುದೇ ಅಡ್ಡ ಪರಿಣಾಮವಿಲ್ಲದೆ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ಬೂದು ಕೂದಲಿಗೆ ಕಾರಣವೇನು? :
ಅನುವಂಶೀಯ ಕಾರಣ ಮತ್ತು ಒತ್ತಡ ಕೂಡಾ ಬಿಳಿ ಕೂದಲಿನ ಸಮಸ್ಯೆಯನ್ನು ಉಂಟುಮಾಡುತ್ತದೆ. 'ಮೆಲನಿನ್' ಎಂಬುದು ನಮ್ಮ ಚರ್ಮದ ಬಣ್ಣವನ್ನು ನಿರ್ಧರಿಸುವ ವರ್ಣದ್ರವ್ಯವಾಗಿದೆ.ಯುಮೆಲನಿನ್ ಮತ್ತು ಫಿಯೋ ಮೆಲನಿನ್ ನಮ್ಮ ಕೂದಲನ್ನು ಕಪ್ಪಾಗಿಡಲು ಸಹಾಯ ಮಾಡುತ್ತದೆ.ಇವುಗಳ ಉತ್ಪಾದನೆ ಕಡಿಮೆಯಾಗುತ್ತಿದ್ದಂತೆಯೇ ಕೂದಲಿನ ಬಣ್ಣ ಬದಲಾಗುತ್ತದೆ. 40ರಿಂದ 50ರ ವಯೋಮಾನದವರಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುವುದು ಸಹಜ.ಆದರೆ, ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರಲ್ಲಿ ಬಿಳಿ ಕೂದಲಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.ಈ ಸಮಸ್ಯೆಯು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಸಾಮಾನ್ಯವಾಗಿದೆ.
ಇದನ್ನೂ ಓದಿ : Weight Loss: ಈ ಸಮಯದಲ್ಲಿ ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್ ಸೇವಿಸಿದರೆ ಬೆಣ್ಣೆಯಂತೆ ಕರಗುತ್ತೆ ಹೊಟ್ಟೆ
ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುವುದು ಹೇಗೆ? :
ನೆಲ್ಲಿಕಾಯಿ ಮತ್ತು ಗೋರಂಟಿ: ನೆಲ್ಲಿಕಾಯಿ ಸಾಮಾನ್ಯವಾಗಿ ಬಿಳಿ ಕೂದಲಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಪ್ರಾಚೀನ ಕಾಲದಿಂದಲೂ ಮೆಹೆಂದಿ ಅಥವಾ ಹೆನ್ನಾವನ್ನು ಕೂದಲಿಗೆ ಹಚ್ಚಲಾಗುತ್ತದೆ. ಇದು ನೆತ್ತಿಯನ್ನು ತಂಪಾಗಿಸುತ್ತದೆ. ನೆಲ್ಲಿಕಾಯಿ ಮತ್ತು ಮೆಹೆಂದಿಯನ್ನು ನಿಯಮಿತವಾಗಿ ಕೂದಲಿಗೆ ಹಚ್ಚುವುದರಿಂದ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ.
ಈರುಳ್ಳಿ ರಸ: ಈರುಳ್ಳಿಯಲ್ಲಿರುವ ನೈಸರ್ಗಿಕ ಅಂಶಗಳು ಕೂದಲು ಕಪ್ಪಾಗಲು ಸಹಾಯ ಮಾಡುತ್ತದೆ. ಈರುಳ್ಳಿಯನ್ನು ಚೆನ್ನಾಗಿ ರುಬ್ಬಿ ಅದರ ರಸವನ್ನು ತಲೆಗೆ ಹಚ್ಚಿ ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಬಿಳಿ ಕೂದಲಿನ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಹಾಗೆಯೇ ಪಲಾವ್ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರಿನಿಂದ ಕೂದಲನ್ನು ನಿರಂತರವಾಗಿ ತೊಳೆದರೂ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.
ಇದನ್ನೂ ಓದಿ : Drinking Water Stale Mouth: ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿಯುವುದರಿಂದಾಗುವ ಈ ಲಾಭಗಳು ನಿಮಗೂ ಗೊತ್ತಿರಲಿ!
ತೆಂಗಿನೆಣ್ಣೆ ಮತ್ತು ನಿಂಬೆರಸ: ತೆಂಗಿನೆಣ್ಣೆಯನ್ನು ನಿಂಬೆರಸಕ್ಕೆ ಬೆರೆಸಿ ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ. ಈ ಮಿಶ್ರಣವನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಬೇಕು. 30 ರಿಂದ 45 ನಿಮಿಷಗಳ ಕಾಲ ಬಿಟ್ಟು ಶಾಂಪೂ ಮಾಡಬೇಕು. ಅಲ್ಲದೆ ವಿಟಮಿನ್ ಬಿ12 ಇರುವ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಬಿಳಿ ಕೂದಲಿನ ಸಮಸ್ಯೆಯನ್ನು ತಡೆಯಬಹುದು.
ಮೇಲೆ ಹೇಳಿದ ಪರಿಹಾರ ಕ್ರಮಗಳನ್ನು ನಿರಂತರವಾಗಿ ಅನುಸರಿಸುವುದರಿಂದ ಬಿಳಿ ಕೂದಲಿನ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗುತ್ತದೆ.
(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ