Instagram Feature: ಇನ್ಸ್ಟಾಗ್ರಾಂನಲ್ಲಿ ಲಾಕ್ ಸ್ಕ್ರೀನ್‌ನಿಂದ ಸ್ಟೋರಿ ಅಪ್‌ಲೋಡ್ ಮಾಡಬಹುದು!

Instagram New Lock Screen Widget: ಮೆಟಾ ಮಾಲೀಕತ್ವದ ಇನ್ಸ್ಟಾಗ್ರಾಂನಲ್ಲಿ ಹೊಸ ಲಾಕ್ ಸ್ಕ್ರೀನ್ ವಿಜೆಟ್ ವೈಶಿಷ್ಟ್ಯವನ್ನು ಪರಿಚಯಿಸಲಾಗಿದ್ದು, ಇದರಲ್ಲಿ ಇನ್ಸ್ಟಾಗ್ರಾಂ ಬಳಕೆದಾದರು ಲಾಕ್-ಸ್ಕ್ರೀನ್‌ನಿಂದ ನೇರವಾಗಿ ಸ್ಟೋರಿಗಳನ್ನು ಅಪ್‌ಲೋಡ್ ಮಾಡುವ ಸೌಲಭ್ಯವನ್ನು ಒದಗಿಸಲಾಗಿದೆ. 

Written by - Yashaswini V | Last Updated : Mar 5, 2024, 03:45 PM IST
  • ಇನ್ಸ್ಟಾಗ್ರಾಮ್ ಹೊಸ ಲಾಕ್ ಸ್ಕ್ರೀನ್ ವಿಜೆಟ್ ಅನ್ನು ಹೊರತಂದಿದೆ.
  • ಈ ವೈಶಿಷ್ಟ್ಯದ ಸಹಾಯದಿಂದ ಇನ್ಸ್ಟಾಗ್ರಾಂ ಬಳಕೆದಾರರು ಲಾಕ್-ಸ್ಕ್ರೀನ್‌ನಿಂದ ನೇರವಾಗಿ ಇನ್ಸ್ಟಾ ಸ್ಟೋರಿಯನ್ನು ಪೋಸ್ಟ್ ಮಾಡಬಹುದಾಗಿದೆ.
Instagram Feature: ಇನ್ಸ್ಟಾಗ್ರಾಂನಲ್ಲಿ ಲಾಕ್ ಸ್ಕ್ರೀನ್‌ನಿಂದ ಸ್ಟೋರಿ ಅಪ್‌ಲೋಡ್ ಮಾಡಬಹುದು!  title=

Instagram New Lock Screen Widget: ಮೆಟಾ ಮಾಲೀಕತ್ವದ ಇನ್ಸ್ಟಾಗ್ರಾಂ ತನ್ನ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಇನ್ಸ್ಟಾಗ್ರಾಮ್ ಹೊಸ ಲಾಕ್ ಸ್ಕ್ರೀನ್ ವಿಜೆಟ್ ಅನ್ನು ಹೊರತಂದಿದೆ. ಈ ವೈಶಿಷ್ಟ್ಯದ ಸಹಾಯದಿಂದ ಇನ್ಸ್ಟಾಗ್ರಾಂ ಬಳಕೆದಾರರು  ಲಾಕ್-ಸ್ಕ್ರೀನ್‌ನಿಂದ ನೇರವಾಗಿ  ಇನ್ಸ್ಟಾ ಸ್ಟೋರಿಯನ್ನು ಪೋಸ್ಟ್ ಮಾಡಬಹುದಾಗಿದೆ. 

ಗಮನಾರ್ಹವಾಗಿ, ಇನ್ಸ್ಟಾಗ್ರಾಂ ಪ್ರಸ್ತುತ ಈ ವೈಶಿಷ್ಟ್ಯವನ್ನು ತನ್ನ iOS ಬಳಕೆದಾರರಿಗಾಗಿ ಬಿಡುಗಡೆಗೊಳಿಸಿದೆ.  ಶೀಘ್ರದಲ್ಲಿಯೇ   ಆಂಡ್ರಾಯ್ಡ್ ಬಳಕೆದಾರರಿಗೂ ಈ ವೈಶಿಷ್ಟ್ಯ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ- Google Chrome Features: ಗೂಗಲ್ ಕ್ರೋಮ್‌ನಲ್ಲಿ ಒಮ್ಮೆಗೆ ಮೂರು ವೈಶಿಷ್ಟ್ಯಗಳನ್ನು ಪರಿಚಯಿಸಿದ ಗೂಗಲ್

ಇನ್ಸ್ಟಾಗ್ರಾಮ್ ಹೊಸ ಲಾಕ್ ಸ್ಕ್ರೀನ್ ವಿಜೆಟ್: 
ಲಭ್ಯವಿರುವ ಮಾಹಿತಿಯ ಪ್ರಕಾರ, ಇನ್ಸ್ಟಾಗ್ರಾಮ್ ಹೊಸ ಲಾಕ್ ಸ್ಕ್ರೀನ್ ವಿಜೆಟ್ ವೈಶಿಷ್ಟ್ಯದ ಸಹಾಯದಿಂದ ಇನ್ಸ್ಟಾಗ್ರಾಂ ಬಳಕೆದಾರರು ಇನ್ಸ್ಟಾಗ್ರಾಂ ಸ್ಟೋರಿಗಳಿಗೆ  ಲಾಕ್ ಸ್ಕ್ರೀನ್‌ನಿಂದ ನೇರವಾಗಿ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ಮತ್ತು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಇದಕ್ಕಾಗಿ, ಹೊಸ ಲಾಕ್-ಸ್ಕ್ರೀನ್ ವಿಸಿಟ್ ಬಳಕೆದಾರರಿಗೆ ಡೈರೆಕ್ಟರಿ ಸ್ಟೋರಿ ಕ್ಯಾಮೆರಾಗೆ ಪ್ರವೇಶವನ್ನು ನೀಡುತ್ತದೆ. ಈ ಕ್ಯಾಮರಾವನ್ನು ಕ್ಲಿಕ್ ಮಾಡುವ ಮೂಲಕ ಅವರು ಇನ್ಸ್ಟಾ ಸ್ಟೋರಿಯನ್ನು ರಚಿಸಿ ಅದನ್ನು ಅಪ್‌ಲೋಡ್ ಮಾಲು ಸಾಧ್ಯವಾಗುತ್ತದೆ. 

ಇದನ್ನೂ ಓದಿ- WhatsApp: ಹ್ಯಾಕರ್‌ಗಳಿಂದ ರಕ್ಷಣೆಗಾಗಿ ವಾಟ್ಸಾಪ್‌ನಲ್ಲಿ ಈ ಒಂದೇ ಒಂದು ಸೆಟ್ಟಿಂಗ್ ಬದಲಾಯಿಸಿ!

ಐಫೋನ್‌ನಲ್ಲಿ ಲಾಕ್ ಸ್ಕ್ರೀನ್ ವಿಜೆಟ್ ಅನ್ನು ಬಳಸುವ ವಿಧಾನ: 
>> ಮೊದಲನೆಯದಾಗಿ, ನಿಮ್ಮ ಐಫೋನ್‌ನ ಲಾಕ್ ಸ್ಕ್ರೀನ್ ಮೇಲೆ ದೀರ್ಘವಾಗಿ ಒತ್ತಿರಿ.
>> ನಂತರ ಕಸ್ಟಮೈಸೇಶನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
>> ಇಲ್ಲಿ ಕಾಣುವ 'Add Widgets' ಆಯ್ಕೆಯನ್ನು ಆರಿಸಿ. 
>> ನಂತರ, ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಇನ್ಸ್ಟಾಗ್ರಾಂ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು 'ಸ್ಟೋರಿ ಕ್ಯಾಮೆರಾ'  ಎಂಬ ಆಯ್ಕೆಯನ್ನು ಆರಿಸಿ. 
>> ಬಳಿಕ ನೀವು ನಿಮ್ಮಐಫೋನ್‌ನ ಲಾಕ್-ಸ್ಕ್ರೀನ್‌ನಿಂದಲೇ ಇನ್ಸ್ಟಾಗ್ರಾಂ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News