WhatsApp New Feature : ಈಗ WhatsAppನಲ್ಲಿ ದಿನಾಂಕವನ್ನು ಆಧರಿಸಿ ಮೆಸೇಜ್ ಗಳನ್ನು ಹುಡುಕಬಹುದು. ಇದಲ್ಲದೆ, ವರದಿಯ ಪ್ರಕಾರ, ವಾಟ್ಸ್ ಆಪ್ ನಲ್ಲಿ ಸ್ಟಿಕ್ಕರ್ ಎಡಿಟರ್ ವೈಶಿಷ್ಟ್ಯವು ಶೀಘ್ರದಲ್ಲೇ ಬರಲಿದೆ. WABetaInfo ವರದಿಯ ಪ್ರಕಾರ, ಮೆಟಾದ ಈ ಅಪ್ಲಿಕೇಶನ್‌ನಲ್ಲಿರುವ ಸ್ಟಿಕ್ಕರ್ ಎಡಿಟರ್ ವೈಶಿಷ್ಟ್ಯವನ್ನು ಪ್ರಸ್ತುತ ಆಂಡ್ರಾಯ್ಡ್ ಬೀಟಾ ಪರೀಕ್ಷಕರಿಗೆ ಬಿಡುಗಡೆ ಮಾಡಲಾಗುತ್ತಿದೆ. ಈ ವೈಶಿಷ್ಟ್ಯವನ್ನು ಬಳಸಲು, WhatsApp ನ ಇತ್ತೀಚಿನ ಅಪ್ಡೇಟೆಡ್ ವರ್ಸನ್ ಅನ್ನು (ಆವೃತ್ತಿ 2.24.6.5) ಇನ್ಸ್ಟಾಲ್ ಮಾಡಬೇಕು.
ಫೋಟೋವನ್ನು ಸ್ಟಿಕ್ಕರ್ ಆಗಿ ಪರಿವರ್ತಿಸಬಹುದು :
ವಾಟ್ಸಾಪ್ ಹೊಸ ಟೂಲ್ ಅನ್ನು ತರುತ್ತಿದ್ದು, ಇದರೊಂದಿಗೆ ನೀವು ಯಾವುದೇ ಫೋಟೋವನ್ನು ಸ್ಟಿಕ್ಕರ್ ಆಗಿ ಪರಿವರ್ತಿಸಬಹುದು. ಹೀಗೆ ಮಾಡುವುದು ಬಹಳ ಸುಲಭ. ಇದಕ್ಕಾಗಿ ಸ್ಟಿಕ್ಕರ್ ಕೀಬೋರ್ಡ್‌ಗೆ ಹೋಗಿ ಮತ್ತು ಅಲ್ಲಿ "create" ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅಥವಾ ನೇರವಾಗಿ ಫೋಟೋವನ್ನು ಓಪನ್ ಮಾಡಿಕೊಳ್ಳಬಹುದು. ಮೇಲ್ಭಾಗದಲ್ಲಿರುವ ಮೂರು ಚುಕ್ಕೆಗಳ ಮೆನುಗೆ ಹೋಗಿ "create sticker" ಆಯ್ಕೆಮಾಡಿ.
ಇದನ್ನೂ ಓದಿ : most searched person on google : ಜನರು ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿರುವುದು ಈ ವ್ಯಕ್ತಿಯ ಬಗ್ಗೆಯೇ !
ಸ್ಟಿಕ್ಕರ್‌ಗಳನ್ನು ಎಡಿಟ್ ಮಾಡುವುದು ಸಾಧ್ಯವಾಗುತ್ತದೆ :
ಈಗಾಗಲೇ ಅಸ್ತಿತ್ವದಲ್ಲಿರುವ ಸ್ಟಿಕ್ಕರ್‌ಗಳನ್ನು ಎಡಿಟ್ ಮಾಡಲು ಕೂಡಾ ನಿಮಗೆ ಸಾಧ್ಯವಾಗುತ್ತದೆ. ಯಾವುದೇ ಸ್ಟಿಕ್ಕರ್ ಅನ್ನು ಆಯ್ಕೆಮಾಡುವಾಗ, WhatsApp ಸ್ವಯಂಚಾಲಿತವಾಗಿ ಡ್ರಾಯಿಂಗ್ ಎಡಿಟರ್ ಅನ್ನು ತೆರೆಯುತ್ತದೆ. ಅದು ಆ ಫೋಟೋದ ಮುಖ್ಯ ಭಾಗವನ್ನು ಫೋಕಸ್ ಗೆ ತರುತ್ತದೆ. ಎಡಿಟ್ ಮಾಡಿದ ನಂತರವೂ ನಿಮಗೆ ಸ್ಟಿಕ್ಕರ್ ಇಷ್ಟವಾಗದಿದ್ದರೆ, ಸ್ಕ್ರೀನ್ ಕೆಳಭಾಗದಲ್ಲಿ ನೀಡಲಾದ ಆಯ್ಕೆಗಳಿಂದ ಇನ್ನೊಂದು ಸ್ಟಿಕ್ಕರ್ ಅನ್ನು ಆಯ್ಕೆ ಮಾಡಬಹುದು.
ವರದಿಯ ಪ್ರಕಾರ, ಬಳಕೆದಾರರು ಈ ಹೊಸ ವೈಶಿಷ್ಟ್ಯದಿಂದ ಪ್ರಯೋಜನ ಪಡೆಯುತ್ತಾರೆ. ಈಗ ತಮ್ಮ ಫೋಟೋಗಳಿಂದ ತಮ್ಮದೇ ಆದ ಸ್ಟಿಕ್ಕರ್‌ಗಳನ್ನು ರಚಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಬೇರೆ ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ ಅಥವಾ ಹೊರಗಿನಿಂದ ಸ್ಟಿಕ್ಕರ್‌ಗಳನ್ನು ಸರ್ಚ್ ಮಾಡುವ ಅಗತ್ಯವೂ ಇಲ್ಲ.
ಇದನ್ನೂ ಓದಿ : Facebook-Instagram Down ಆಗಲು ಕಾರಣವೇನು? ಮೆಟಾ ಕಂಪನಿಗೆ ಆದ ನಷ್ಟವೆಷ್ಟು?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.