RCB vs CSK match score : ಐಪಿಎಲ್ 2024 ರ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮುಖಾಮುಖಿಯಾಗಲಿವೆ. ಈ ಹೈವೊಲ್ಟೇಜ್ ಪಂದ್ಯ ಮಾರ್ಚ್ 22 ರಂದು ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಆರಂಭಿಕ ಪಂದ್ಯಕ್ಕೆ ಸಂಬಂಧಿಸಿದ ಇಂಟ್ರಸ್ಟಿಂಗ್ ಪ್ಯಾಕ್ಸ್ ಇಲ್ಲಿವೆ ನೋಡಿ..
ಹೌದು.. 2008 ಆರಂಭವಾದ ಐಪಿಎಲ್ ಇದುವರೆಗೆ 16 ಸೀಸನ್ ಪಂದ್ಯಾವಳಿಗಳನ್ನು ನಡೆಸಿದೆ. ಆದರೆ 16 ಋತುಗಳಲ್ಲಿ ಕೇವಲ 5 ಬಾರಿ ಮಾತ್ರ ಆರಂಭಿಕ ಪಂದ್ಯವನ್ನು ಆಡಿದ ತಂಡವು ಚಾಂಪಿಯನ್ ಆಗಿದೆ. ಅಲ್ಲದೆ ಆರಂಭಿಕ ಪಂದ್ಯವನ್ನು ಗೆದ್ದ ತಂಡವು 3 ಮೂರು ಬಾರಿ ಕಪ್ ಗೆದ್ದುಕೊಂಡಿದೆ. ಹೀಗಾಗಿ RCB vs CSK ಪಂಧ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳ ಕಣ್ಣು ಬಿದ್ದಿದೆ.
ಇದನ್ನೂ ಓದಿ:RCB ಪ್ಯಾನ್ಸ್ಗೆ ಬ್ಯಾಡ್ ನ್ಯೂಸ್..! ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯಗಳು ಸ್ಥಳಾಂತರ?
ಚೆನ್ನೈ ಸೂಪರ್ಕಿಂಗ್ಸ್ ಆರನೇ ಬಾರಿಗೆ ಪ್ರಶಸ್ತಿ ಗೆಲ್ಲಲು ಹೊರಟಿದೆ. ಇದುವರೆಗೆ ಐಪಿಎಲ್ನ ಆರಂಭಿಕ ಪಂದ್ಯದಲ್ಲಿ ಸೋತ 2 ತಂಡಗಳು ಮಾತ್ರ ಪ್ರಶಸ್ತಿ ಗೆದ್ದಿವೆ. ಇದರಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಎಚ್ಚರಿಕೆಯಿಂದ ಆಡಬೇಕಾಗುತ್ತದೆ.
ಐಪಿಎಲ್ 2024 ರ ಆರಂಭಿಕ ಪಂದ್ಯವು ಈ ಎರಡು ತಂಡಗಳ ನಡುವೆ ನಡೆಯಲಿದೆ. ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದು ಬಾರಿ ಟ್ರೋಫಿ ಗೆದ್ದಿದೆ. ಹಾಗಾಗಿ ಆರ್ಸಿಬಿ ತಂಡ ಇದುವರೆಗೂ ಚಾಂಪಿಯನ್ ಆಗಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2010, 2011, 2018, 2021 ಮತ್ತು 2023 ರಲ್ಲಿ ಪ್ರಶಸ್ತಿಯನ್ನು ವಶಪಡಿಸಿಕೊಂಡಿದೆ.
ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಆರ್ಸಿಬಿ ( RCB first match) ಚೊಚ್ಚಲ ಬಾರಿಗೆ ಟ್ರೋಫಿ ಗೆಲ್ಲುವ ಉದ್ದೇಶದಿಂದ ಮೈದಾನಕ್ಕಿಳಿಯಲಿದೆ. ಇಲ್ಲಿಯವರೆಗೆ ತಂಡ ಟ್ರೋಫಿ ಗೆದ್ದಿಲ್ಲ. ಆದರೆ ಈ ಬಾರಿ WPL RCB ಗೆಲುವಿನಿಂದ ಉತ್ಸಾಹಗೊಂಡಿರುವ ಬಾಯ್ಸ್ ಟೀಮ್ ಗೆಲ್ಲುವ ಭರವಸೆಯಲ್ಲಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.