ನವದೆಹಲಿ: ಸಾಮಾನ್ಯವಾಗಿ ನಾವು ಉತ್ತರ ಪ್ರದೇಶದಲ್ಲಿ ಭಗವಾನ್ ರಾಮನನ್ನು ಪೂಜಿಸುವ ಮತ್ತು ಆರಾಧಿಸುವ ಪದ್ಧತಿ ಬಗ್ಗೆ ಕೇಳಿರುತ್ತೇವೆ, ಆದರೆ ಈಗ ಇಲ್ಲಿ ರಾಮನ ಬದಲಾಗಿ ರಾವಣನನ್ನು ಹೀರೋ ಆಗಿ ಆರಾಧಿಸುವ ಪದ್ಧತಿಯೊಂದು ರಾಜ್ಯದ ಗ್ರಾಮದಲ್ಲಿ ಚಾಲ್ತಿಯಲ್ಲಿದೆ.
ಹೌದು, ದಸರಾ ಹಬ್ಬವನ್ನು ದುಷ್ಟ ಶಕ್ತಿಗಳನ್ನು ಮಟ್ಟ ಹಾಕಿದ ಪ್ರತೀಕವಾಗಿ ಆಚರಿಸಲಾಗುತ್ತದೆ, ಈ ಹಬ್ಬದ ದಿನದಂದು ರಾಮನು ರಾವಣನನ್ನು ಸಂಹರಿಸಿದ ದಿನವಾಗಿ ಆಚರಿಸುವ ಪದ್ಧತಿ ಉತ್ತರ ಭಾರತದಲ್ಲಿ ಹೇರಳವಾಗಿದೆ. ಆದರೆ ಇಗ ಉತ್ತರ ಪ್ರದೇಶದ ಗ್ರೇಟರ್ ನೋಯಿಡಾದ ಬಿಸ್ರಾಖ್ ಎಂಬ ಹಳ್ಳಿಯಲ್ಲಿ ರಾಮನ ಬದಲು ರಾವಣನನ್ನು ಹೀರೋ ಆಗಿ ಆರಾಧಿಸಲಾಗುತ್ತದೆ.
ಇಲ್ಲಿನ ನಂಬಿಕೆ ಪ್ರಕಾರ ರಾವಣ ಈ ಗ್ರಾಮದಲ್ಲಿ ಜನಿಸಿದ್ದು, ಮುಂದೆ ಅವನು ಇಲ್ಲಿಂದ ಶ್ರೀಲಂಕಾಗೆ ವಲಸೆ ಹೋದನು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಬಿಸ್ರಾಕ್ ಗ್ರಾಮದ ಜನರು ರಾವನನ್ನು ಆರಾಧಿಸುತ್ತಾರೆ. ದಸರಾ ಮತ್ತು ದೀಪಾವಳಿಯಲ್ಲಿ ರಾವಣನಿಗೆ ಶೋಕ ವ್ಯಕ್ತಪಡಿಸುತ್ತಾರೆ. ಈ ಎರಡು ಹಬ್ಬಗಳಲ್ಲಿ ಅವರು ರಾವಣನ ಸಾವಿಗೆ ಶೋಕಿಸುತ್ತಿದ್ದರೆ, ಭಾರತದ ಉಳಿದ ಭಾಗಗಳಲ್ಲಿ ಮೇಘನಾಥ್ (ಅವನ ಮಗ) ಮತ್ತು ಕುಂಭಕರ್ಣ (ಅವನ ಕಿರಿಯ ಸಹೋದರ) ಜೊತೆಗೆ ಹತ್ತು ತಲೆಗಳ ಬ್ರಾಹ್ಮಣನ ಪ್ರತಿಮೆಯನ್ನು ಸುಡಲಾಗುತ್ತದೆ.
ಸ್ಥಳೀಯ ದಂತಕಥೆಯ ಪ್ರಕಾರ, ರಾವಣನು ವಿಶ್ರವ ಮತ್ತು ಕೈಕೇಶಿಗೆ ಜನಿಸಿದನು. ಅವನು ಪುಲಸ್ತ್ಯರ ಮೊಮ್ಮಗ ಎನ್ನಲಾಗಿದೆ. ಶಿವನನ್ನು ಪೂಜಿಸಿದ ರಾವಣನ ತಂದೆ ವಿಶ್ರವರಿಂದ ಬಿಸ್ರಾಖ್ ಗ್ರಾಮದ ಹೆಸರು ಬಂದಿತೆಂದು ನಂಬಲಾಗಿದೆ. ತನ್ನ ಬಾಲ್ಯವನ್ನು ಇದೇ ಹಳ್ಳಿಯಲ್ಲಿಯೂ ಕಳೆದನು ಎನ್ನುವ ಪ್ರತೀತಿ ಇದೆ.