Sudharani Dance On Holi Celebration: ಸ್ಯಾಂಡಲ್ವುಡ್ ಹಿರಿಯ ನಟಿ ಸುಧಾರಾಣಿ ಗೋವರ್ಧನ್ ಹೋಳಿ ಹಬ್ಬದಂದು ಸ್ವಸ್ಥಿಕ್ ಸಿನಿಮಾದ ಕಲರ್ ಕಲರ್ ಸಾಂಗ್ಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ನಟಿ ಬ್ಲ್ಯಾಕ್ ಪ್ಯಾಂಟ್ ಹಾಗೂ ವೈಟ್ ಶರ್ಟ್ ಧರಿಸಿ, ತಲೆಗೆ ಮುಂಡಾಸು ಕಟ್ಟಿಕೊಂಡು ಮತ್ತು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಮಾಸ್ ಲುಕ್ನಲ್ಲಿ ಎನರ್ಜಿಟಿಕ್ ಆಗಿ ಸ್ಟೆಪ್ ಹಾಕಿದ್ದಾರೆ.
ನಟಿ ಸುಧಾರಾಣಿ ಈ ರೀಲ್ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿ ಕ್ಯಾಪ್ಶನ್ನಲ್ಲಿ ʻಈ ಹೋಳಿ ಹಬ್ಬದ ಬಣ್ಣ ನಮ್ಮ ಜೀವನದಲ್ಲಿ ಖುಷಿ, ಆರೋಗ್ಯವನ್ನು ತರಲಿ. ಬಣ್ಣದ ಬದುಕನ್ನು ಸಂಭ್ರಮಿಸೋಣʼ ಎಂದು ಬರೆದಿದ್ದಾರೆ. ಈ ಚಂದನವನದ ನಟಿಗೆ ನಾಲ್ಕು ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಹಾಗೆಯೇ ಈ ವಿಡಯೋ ನೋಡಿಸ ನೆಟ್ಟಿಗರ ಹಲವು ಬಗೆ ಬಗೆಯ ರೀತಿ ಕಾಮೆಂಟ್ಗಳನ್ನು ಮಾಡಿದ್ದಾರೆ.
ಇದನ್ನೂ ಓದಿ: Puttakkana Makkalu Serial: ಪುಟ್ಟಕ್ಕನ ಅಳಿಯ ʼಕಂಠಿʼ ರಿಯಲ್ ಲವರ್ ಯಾರು ಗೊತ್ತಾ?
ಎವರ್ಗ್ರೀನ್ ನಟಿ ಸುಧಾರಾಣಿಯ ಹೋಳಿ ಡ್ಯಾನ್ಸ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮಿಡಿಯಾದಲ್ಲಿ ಫಾನ್ಸ್ ಕಮೆಂಟ್ ವಿಭಾಗದಲ್ಲಿ ರೆಡ್ ಹಾರ್ಟ್ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. ಮತ್ತೆ ಕೆಲವರು ಹೋಳಿ ಹಬ್ಬದ ಶುಭಾಷಯಗಳು ಎಂದು ವಿಶ್ ಮಾಡಿದ್ದಾರೆ. ಮತ್ತೆ ಕೆಲವರು ಸೂಪರ್, ನೀವು ಸದಾ ವರ್ಣ ರಂಜಿತ, ಆಸಮ್, ಸುಂದರವಾಗಿದ್ದೀರ, ದೇವತೆ ಅಂತೆಲ್ಲಾ ಹೊಗಳಿದ್ದಾರೆ.
ಸದ್ಯ ನಟಿ ಸುಧಾರಾಣಿ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ತುಳಸಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಇಬ್ಬರು ಮಕ್ಕಳ ತಾಯಿಯಾಗಿ, ಕುಟುಂಬಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವಂತವಳ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಸೀರಿಯಲ್ನಲ್ಲಿ ಹೊರಜಗತ್ತಿನ ಪರಿಚಯವಿಲ್ಲದ ಅತ್ತೆ ತುಳಸಿಗೆ ಬೆನ್ನೆಲುಬಾಗಿ ಸೊಸೆ ನಿಂತು ಪರಿಚಯಿಸುತ್ತಾಳೆ. ನಟಿ ಸುಧಾರಾಣಿ ಇದೊಂದು ವಿಭಿನ್ನವಾದ ಕಥೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.