ಸೂಕ್ತ ದಾಖಲೆ ಇರದ ರೂ.3,35,500 ಮೌಲ್ಯದ ಪ್ರಸಿದ್ದ ಕಂಪನಿಯ ಪ್ಯಾಂಟ್ ಬಟ್ಟೆ ವಶಕ್ಕೆ ಪಡೆದ ಅಧಿಕಾರಿಗಳು

ಅಗ್ರಿ ಯುನಿವರ್ಸಿಟಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆಯಲ್ಲಿ ಮಾರುತಿ ಸುಜುಕಿ ಏರಟಿಗಾ ವಾಹನದಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ ರೂ.3,35,500 ಮೌಲ್ಯದ ಪ್ಯಾಂಟ್ ಪೀಸ್ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Written by - Manjunath N | Last Updated : Mar 28, 2024, 04:00 PM IST
  • ಚೇಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡಿದಾಗ ಪ್ರಸಿದ್ದ ಕಂಪನಿಗಳ 1,342 ಪ್ಯಾಂಟ್ ಪೀಸ್ ಬಟ್ಟೆಗಳು ದೊರೆತಿವೆ.
  • ಇವುಗಳ ಮೌಲ್ಯ ರೂ.3,35,500 ಆಗಿದ್ದು, ಇವು ವಾಹನ ಮಾಲೀಕ ಮೋಹಮ್ಮದ ಶಾಕೀರ್ ಶಾ ಅವರಿಗೆ ಸೇರಿವೆ.
  • ಸೂಕ್ತವಾದ ದಾಖಲೆಗಳನ್ನು ಸಲ್ಲಿಸದಿರುವದರಿಂದ ಇವು ಚುನಾವಣೆಗೆ ಬಳಸಬಹುದಾದ ಸಂಶಯದ ಮೇಲೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
 ಸೂಕ್ತ ದಾಖಲೆ ಇರದ ರೂ.3,35,500 ಮೌಲ್ಯದ ಪ್ರಸಿದ್ದ ಕಂಪನಿಯ ಪ್ಯಾಂಟ್ ಬಟ್ಟೆ ವಶಕ್ಕೆ ಪಡೆದ ಅಧಿಕಾರಿಗಳು title=

ಧಾರವಾಡ: ಅಗ್ರಿ ಯುನಿವರ್ಸಿಟಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆಯಲ್ಲಿ ಮಾರುತಿ ಸುಜುಕಿ ಏರಟಿಗಾ ವಾಹನದಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ ರೂ.3,35,500 ಮೌಲ್ಯದ ಪ್ಯಾಂಟ್ ಪೀಸ್ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ದು ಯಾವತ್ತೂ ಹೊಡಿ-ಬಡಿ ಸಂಸ್ಕೃತಿಯೇ: ಪ್ರಹ್ಲಾದ ಜೋಶಿ ಆಕ್ರೋಶ

ಈ ಕುರಿತು ಪ್ರಕಟಣೆ ನೀಡಿರುವ ಅವರು, ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಬೆಳಗಾವಿಯಿಂದ ಗದಗ ನಗರಕ್ಕೆ ತೆರಳುತ್ತಿದ್ದು ಕೆಎ-01, ಎಂ.ಎಲ್- 1243 ಸಂಖ್ಯೆಯ ಮಾರುತಿ ಸುಜುಕಿ ಏರಟಿಗಾ ವಾಹನವನ್ನು ಅಗ್ರಿ ಯುನಿವರ್ಸಿಟಿ ಚೇಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡಿದಾಗ ಪ್ರಸಿದ್ದ ಕಂಪನಿಗಳ 1,342 ಪ್ಯಾಂಟ್ ಪೀಸ್ ಬಟ್ಟೆಗಳು ದೊರೆತಿವೆ. ಇವುಗಳ ಮೌಲ್ಯ ರೂ.3,35,500 ಆಗಿದ್ದು, ಇವು ವಾಹನ ಮಾಲೀಕ ಮೋಹಮ್ಮದ ಶಾಕೀರ್ ಶಾ ಅವರಿಗೆ ಸೇರಿವೆ. ಸೂಕ್ತವಾದ ದಾಖಲೆಗಳನ್ನು ಸಲ್ಲಿಸದಿರುವದರಿಂದ ಇವು ಚುನಾವಣೆಗೆ ಬಳಸಬಹುದಾದ ಸಂಶಯದ ಮೇಲೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.May be an image of 9 people, people standing and text

ಎಸಿ ಶಾಲಂ ಹುಸೇನ್, ತಹಶಿಲ್ದಾರ ಡಾ.ಡಿ.ಎಚ್.ಹೂಗಾರ ಅವರು ಎಂಸಿಸಿ ನೋಡಲ್ ಅಧಿಕಾರಿ ಮೋನಾ ರಾವುತ್, ಶಿವಪುತ್ರಪ್ಪ ಹೊಸಮನಿ ಅವರ ಮಾರ್ಗದರ್ಶನದಲ್ಲಿ ಎಸ್.ಎಸ್.ಟಿ ಮತ್ತು ಎಫ್.ಎಸ್.ಟಿ ತಂಡಗಳ ಸದಸ್ಯರು ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಕಠಿಣಗೊಳಿಸಿದ್ದು, ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News