Blood In Urine: ಮೂತ್ರದಿಂದ ರಕ್ತ ಈ ಖಾಯಿಲೆಗಳ ಸಂಕೇತವೂ ಆಗಿರಬಹುದು!

Blood In Urine: ಕೆಲವರಿಗೆ ಆಗಾಗ್ಗೆ ಮೂತ್ರದಲ್ಲಿ ರಕ್ತ ಕಾಣಿಸುತ್ತದೆ. ಇದಕ್ಕೆ ಕಾರಣವೇನು? ಇದು ಯಾವ ಕಾಯಿಲೆಗಳ ಅಪಾಯವಾಗಿರಬಹುದು. ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ? ಈ ಬಗ್ಗೆ ಇಲ್ಲಿದೆ ಮಾಹಿತಿ. 

Written by - Yashaswini V | Last Updated : Apr 4, 2024, 12:40 PM IST
  • ಮೂತ್ರದಲ್ಲಿ ರಕ್ತದ ಸಮಸ್ಯೆಯನ್ನು ಹೆಮಟುರಿಯಾ ಎಂದು ಕರೆಯಲಾಗುತ್ತದೆ.
  • ಮೂತ್ರನಾಳದ ಸೋಂಕಿನಿಂದ ಇದು ಉಂಟಾಗಬಹುದು.
  • ಕೆಲವೊಮ್ಮೆ ಇದು ಕೆಲವು ಅಪಾಯಕಾರಿ ಕಾಯಿಲೆಗಳ ಮುನ್ಸೂಚನೆಯೂ ಆಗಿರಬಹುದು.
Blood In Urine: ಮೂತ್ರದಿಂದ ರಕ್ತ ಈ ಖಾಯಿಲೆಗಳ ಸಂಕೇತವೂ ಆಗಿರಬಹುದು! title=

Blood In Urine: ಬಹುತೇಕ ಸಂದರ್ಭಗಳಲ್ಲಿ ಕೆಲವು ವಿಷಯಗಳನ್ನು ಮುಕ್ತವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಅಂತಹ ವಿಷಯಗಳಲ್ಲಿ ಅತಿಯಾದ ಮೂತ್ರ ವಿಸರ್ಜನೆ,  ಮೂತ್ರದಲ್ಲಿ ರಕ್ತದಂತಹ ಸಮಸ್ಯೆಗಳು ಕೂಡ ಒಂದು. ಸಾಮಾನ್ಯವಾಗಿ, ಯಾರಿಗೆ ಆದರೂ, ಮೂತ್ರದಿಂದ ರಕ್ತ ಕಂಡರೆ ಭಯವಾಗುವುದು ಸಹಜವೇ. ಆದಾಗ್ಯೂ, ಜನರು ಸಂಕೋಚದಿಂದಲೋ ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಇದನ್ನು ನಿರ್ಲಕ್ಷಿಸುತ್ತಾರೆ. ಆದರಿದು ಭವಿಷ್ಯದಲ್ಲಿ ಅಪಾಯಕಾರಿ ಕಾಯಿಲೆಗೆ ಕಾರಣವಾಗಬಹುದು. 

ಅಷ್ಟಕ್ಕೂ, ಮೂತ್ರದಲ್ಲಿ ರಕ್ತಸ್ರಾವ (Blood In Urine) ಆಗುವುದಕ್ಕೆ ಕಾರಣವೇನು? ಈ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಏನಾಗುತ್ತದೆ ಎಂಬ ಬಗ್ಗೆ ದೆಹಲಿಯ ಮಣಿಪಾಲ್ ಆಸ್ಪತ್ರೆಯ ಡಾ.ವಿಕಾಸ್ ಜೈನ್ (ಸಲಹೆಗಾರ ಮತ್ತು ಎಚ್‌ಒಡಿ, ಮೂತ್ರಶಾಸ್ತ್ರ, ರೋಬೋಟಿಕ್ ಸರ್ಜರಿ ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್), ಅವರು ಮಾತನಾಡಿದ್ದು, ಈ ಬಗ್ಗೆ ಏನು ಹೇಳಿದ್ದಾರೆ ಎಂದು ತಿಳಿಯೋಣ... 

ಮೂತ್ರದಿಂದ ರಕ್ತಸ್ರಾವಕ್ಕೆ ಕಾರಣ? 
ಮೂತ್ರದಲ್ಲಿ ರಕ್ತದ ಸಮಸ್ಯೆಯನ್ನು ಹೆಮಟುರಿಯಾ ಎಂದು ಕರೆಯಲಾಗುತ್ತದೆ.  ಮೂತ್ರನಾಳದ ಸೋಂಕಿನಿಂದ (Urinary tract infection) ಇದು ಉಂಟಾಗಬಹುದು. ಕೆಲವೊಮ್ಮೆ ಇದು ಕೆಲವು ಅಪಾಯಕಾರಿ ಕಾಯಿಲೆಗಳ ಮುನ್ಸೂಚನೆಯೂ ಆಗಿರಬಹುದು. ಇದನ್ನು ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸಿ ತಡಮಾಡದೆ ಸೂಕ್ತ ಚಿಕಿತ್ಸೆಯನ್ನು ಪಡೆಯುವುದು ಒಳ್ಳೆಯದು ಎನ್ನುತ್ತಾರೆ ವೈದ್ಯ ಡಾ.ವಿಕಾಸ್ ಜೈನ್. 

ಇದನ್ನೂ ಓದಿ- ಬೆಳಿಗ್ಗೆ ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿದರೆ ಸಂಜೆಯ ವೇಳೆಗೆ ನಾರ್ಮಲ್ ಆಗುವುದು ಬ್ಲಡ್ ಶುಗರ್ ! ನೀವೂ ಬಳಸಿ ನೋಡಿ ಈ ಮ್ಯಾಜಿಕ್ ಪೌಡರ್

ಮೂತ್ರದಿಂದ ರಕ್ತ ಏಕೆ ಬರುತ್ತದೆ? ಇದು ಯಾವ ಖಾಯಿಲೆಯ ಸಂಕೇತ? 
ಮೂತ್ರದ ಸೋಂಕು/ಯುಟಿಐ: 

ಮೂತ್ರದ ಸೋಂಕು (UTI) ಅಥವಾ ಮೂತ್ರಪಿಂಡದ ಸೋಂಕಿನಿಂದ ಮೂತ್ರದಲ್ಲಿ ರಕ್ತ ಬರಬಹುದು. ವೈದ್ಯರ ಪ್ರಕಾರ, ಇದು ಮೂತ್ರದಲ್ಲಿ ರಕ್ತದ ಉತ್ಪಾದನೆಗೆ ಮುಖ್ಯ ಕಾರಣವಾಗಬಹುದು. 

ಕ್ಯಾನ್ಸರ್: 
ಮೂತ್ರಪಿಂಡ, ಮೂತ್ರಕೋಶ ಮತ್ತು ಮೂತ್ರನಾಳದ ಕ್ಯಾನ್ಸರ್ ಸಮಸ್ಯೆ ಇರುವವರಲ್ಲಿಯೂ ಮೂತ್ರದಿಂದ ರಕ್ತಸ್ರಾವ ಸಾಮಾನ್ಯ ಸಮಸ್ಯೆ ಆಗಿರುತ್ತದೆ. ಹಾಗಾಗಿ, ಇದು ಅಪಾಯಕಾರಿ ಸ್ಥಿತಿಯನ್ನು ತಲುಪುವ ಮೊದಲು ಇದಕ್ಕೆ ಚಿಕಿತ್ಸೆ ಪಡೆಯುವುದು ಸೂಕ್ತ. 

ಕಿಡ್ನಿ ಸ್ಟೋನ್: 
ವೈದ್ಯರ ಪ್ರಕಾರ, ಮೂತ್ರಪಿಂಡದಲ್ಲಿ ಕಲ್ಲು ಎಂದರೆ ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಲ್ಲಿಯೂ ಕೂಡ ಮೂತ್ರನಾಳದಲ್ಲಿ ರಕ್ತಸ್ರಾವವಾಗುವ ಸಾಧ್ಯತೆ ಇದೆ. 

ಇದನ್ನೂ ಓದಿ- ರಾತ್ರಿ ಊಟ ಮಾಡಿ ಮಲಗುವ ಮುಂಚೆ ಇವುಗಳನ್ನು ತಿನ್ನಿ: ಗೊರಕೆ ತಾಪತ್ರಯ ಪರ್ಮನೆಂಟ್ ಆಗಿ ದೂರವಾಗುತ್ತೆ!

ಇತರ ಕಾರಣಗಳು: 
ಮೂತ್ರಪಿಂಡಗಳು ಅಥವಾ ಮೂತ್ರನಾಳದಲ್ಲಿ ಗಾಯ, ಖಿನ್ನತೆ, ಮೂತ್ರಪಿಂಡದ ತೊಂದರೆಗಳು, ಅತಿಯಾದ ಮದ್ಯಪಾನ ಮತ್ತು ಯಾವುದೇ ಔಷಧದ ಅಡ್ಡಪರಿಣಾಮಗಳು  ಮೂತ್ರನಾಳಗಳಲ್ಲಿ ರಕ್ತಸ್ರಾವಕ್ಕೆ ಕಾರಣವಾಗಿರಬಹುದು. ಯಾವುದೇ ರೀತಿಯ ಅಪಾಯವನ್ನು ತಪ್ಪಿಸಲು, ಈ ರೀತಿಯ ಆರೋಗ್ಯ ಲಕ್ಷಣಗಳು ಕಂಡೊಡನೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು ಎನ್ನುತ್ತಾರೆ ವೈದ್ಯರು. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News