Weight Loss Remedy: ಏನಿದು 2-2-2 ಮೇಥೆಡ್ ಮೆಟಾಬಾಲಿಸಂ, ತೂಕ ಇಳಿಕೆಗೆ ಇದು ಹೇಗೆ ಸಹಕಾರಿಯಾಗಿದೆ?

Weight Loss Remedy: ತೂಕ ಇಳಿಕೆಗೆ 2-2-2 ವಿಧಾನ ಚಯಾಪಚಯ ಒಂದು ರೀತಿಯ 6 ವಾರಗಳ ಯೋಜನೆಯಾಗಿದ್ದು (extreme weight loss methods),  ಅದು ತೂಕವನ್ನು ಇಳಿಕೆ ಮಾಡಲು ಸಾಕಷ್ಟು ಸಹಾಯ ಮಾಡುತ್ತದೆ. ಅದರ ಪ್ರಯೋಜನಗಳು ಮತ್ತು ಅನುಸರಿಸಬೇಕಾದ ವಿಧಾನ ತಿಳಿದುಕೊಳ್ಳೋಣ ಬನ್ನಿ (Health News In Kannada).  

Written by - Nitin Tabib | Last Updated : Apr 4, 2024, 09:35 PM IST
  • ಇದು ತೂಕವನ್ನು ಇಳಿಸಿಕೊಳ್ಳಲು ಪ್ರಯೋಜನಕಾರಿ ಪರಿಹಾರ ಸಾಬೀತಾಗುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ.
  • ಮೆಟಾಬಾಲಿಕ್ ಫ್ಲೇಕ್ಷಿಬಿಲಿಟಿ ಹೊಂದಿರುವ ಜನರು ಸುಲಭವಾಗಿ ತೂಕವನ್ನು ಇಳಿಕೆ ಮಾಡಿಕೊಳ್ಳುತ್ತಾರೆ.
  • ಆದರೆ ಎಲ್ಲರಿಗೂ ಈ ಫ್ಲೇಕ್ಸಿಬಿಲಿಟಿ ಇರುವುದಿಲ್ಲ.
Weight Loss Remedy: ಏನಿದು 2-2-2 ಮೇಥೆಡ್ ಮೆಟಾಬಾಲಿಸಂ, ತೂಕ ಇಳಿಕೆಗೆ ಇದು ಹೇಗೆ ಸಹಕಾರಿಯಾಗಿದೆ? title=

Weight Loss Technique: ತೂಕ ಇಳಿಕೆಗೆ ಜನರು ಜಿಮ್ ನಿಂದ ಹಿಡಿದು ಆಹಾರ ಕ್ರಮದವರೆಗೆ ಹಲವು ತಂತ್ರಗಳನ್ನು ಅನುಸರಿಸುತ್ತಾರೆ. ಆದರೆ ಸಾಕಷ್ಟು ಪ್ರಯತ್ನಗಳ ಬಳಿಕವೂ ತೂಕ ಇಳಿಕೆಯಾಗುವ ಮಾತೆ ಎತ್ತುವುದಿಲ್ಲ. ಇಂದು ನಾವು ನಿಮಗಾಗಿ ತೂಕ ಇಳಿಕೆಯ ತಂತ್ರವೊಂದನ್ನು ತಂದಿದ್ದು, ಈ ತಂತ್ರದ ಹೆಸರು 2-2-2 ಮೇಥೆಡ್ ಮೆಟಾಬಾಲಿಸಮ್. ಇದರಲ್ಲಿ, ಕಾರ್ಬೋಹೈಡ್ರೇಟ್‌ಗಳು, ಕೊಬ್ಬುಗಳು ಮತ್ತು ಪ್ರೋಟೀನ್‌ಗಳ 2-2 ಸರ್ವಿಂಗ್‌ಗಳನ್ನು ಸೇವಿಸುವುದು ತೂಕ ಇಳಿಕೆಗೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಅಂದರೆ ತೂಕ ಇಳಿಕೆಗೆ  ಈ ಮೂರು ಪೋಷಕಾಂಶಗಳನ್ನು ನೀವು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಈ ತಂತ್ರದಿಂದ, ನೀವು ಇದನ್ನು 6 ವಾರಗಳ ಕಾಲ ಅನುಸರಿಸಿದರೆ, ನೀವು ಸುಮಾರು 8 ರಿಂದ 9 ಕೆಜಿ ತೂಕ ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ.  ಚಯಾಪಚಯ ಕ್ರಿಯೆಯಲ್ಲಿ ಆಹಾರ ಬದಲಾವಣೆಗಳನ್ನು ಮಾಡುವ ಮೂಲಕ ತೂಕ ಇಳಿಕೆಯನ್ನು ಇದರಲ್ಲಿ ಸಾಧಿಸಲಾಗುತ್ತದೆ. 2-2-2 ವಿಧಾನದ ಚಯಾಪಚಯ ಕ್ರಿಯೆಯ ವಿಧಾನ ಮತ್ತು ಪ್ರಯೋಜನಗಳ ಬಗ್ಗೆ ನಾವು ಮತ್ತಷ್ಟು ತಿಳಿದುಕೊಳ್ಳೋಣ ಬನ್ನಿ. (Health News In Kannada)

2-2-2 ಮೇಥೆಡ್ ಮೆಟಾಬಾಲಿಸಮ್ ತೂಕವನ್ನು ಕಡಿಮೆ ಮಾಡುತ್ತದೆ? (Metabolism technique for weight loss at home)
ಇದು ತೂಕವನ್ನು ಇಳಿಸಿಕೊಳ್ಳಲು ಪ್ರಯೋಜನಕಾರಿ ಪರಿಹಾರ ಸಾಬೀತಾಗುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ.  ಮೆಟಾಬಾಲಿಕ್ ಫ್ಲೇಕ್ಷಿಬಿಲಿಟಿ ಹೊಂದಿರುವ ಜನರು ಸುಲಭವಾಗಿ ತೂಕವನ್ನು ಇಳಿಕೆ ಮಾಡಿಕೊಳ್ಳುತ್ತಾರೆ. ಆದರೆ ಎಲ್ಲರಿಗೂ ಈ ಫ್ಲೇಕ್ಸಿಬಿಲಿಟಿ ಇರುವುದಿಲ್ಲ. ಅದರ ಮಟ್ಟವು ಬದಲಾಗುತ್ತದೆ. ಕೆಲವರು ಕಾರ್ಬೋಹೈಡ್ರೇಟ್‌ಗಳನ್ನು ಸುಲಭವಾಗಿ ಸುಡುತ್ತಾರೆ ಆದರೆ ಕೊಬ್ಬನ್ನು ಸುಡುವಲ್ಲಿ ತೊಂದರೆ ಹೊಂದಿರುತ್ತಾರೆ. ಕೆಲವರು ಕೊಬ್ಬನ್ನು ಸುಡುತ್ತಾರೆ ಆದರೆ ಕಾರ್ಬೋಹೈಡ್ರೇಟ್‌ಗಳನ್ನು ಸುಡುವಲ್ಲಿ ತೊಂದರೆ ಹೊಂದಿರುತ್ತಾರೆ. ಆದರೆ ತೂಕ ಇಳಿಕೆಗೆ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಎರಡನ್ನೂ ಸುಡುವುದು ಅವಶ್ಯಕ. 2-2-2 ವಿಧಾನ ಮೆಟಾಬಾಲಿಸಮ್ ಆರೋಗ್ಯಕರ ಆಹಾರ ಮತ್ತು ಪೋಷಕಾಂಶಗಳ ಅಗತ್ಯವನ್ನು ಹೇಳುತ್ತದೆ.  ಇದರಿಂದ ನೀವು ಆರೋಗ್ಯಕರ ರೀತಿಯಲ್ಲಿ ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು (Best metabolism technique for weight loss).

ಇದನ್ನೂ ಓದಿ-Hair Care Tips: ಕೂದಲು ಹಾಗೂ ತ್ವಚೆಯ ಆರೋಗ್ಯ ರಕ್ಷಣೆಗೆ ಈ ತೊಗಟೆ ಒಂದು ರಾಮಬಾಣ ಮನೆಮದ್ದು!

2-2-2 ಮೇಥೆಡ್ ಮೆಟಾಬಾಲಿಸಮ್ ನ ಪ್ರಯೋಜನಗಳು (foods that increase metabolism and burn fat)
>> 30 ರಿಂದ 40 ವರ್ಷ ವಯಸ್ಸಿನ ನಡುವೆ ಚಯಾಪಚಯವನ್ನು ಹೆಚ್ಚಿಸಲು ಕಷ್ಟವಾಗುತ್ತದೆ. ನೀವು ಈ ವಯಸ್ಸಿನವರಾಗಿದ್ದರೆ ಮತ್ತು ತೂಕ ಇಳಿಸಿಕೊಳ್ಳಲು ಬಯಸಿದರೆ, ನೀವು ಈ ವಿಧಾನವನ್ನು ಪ್ರಯತ್ನಿಸಬಹುದು.
>> 2-2-2 ವಿಧಾನದ ಮೆಟಾಬಾಲಿಸಮ್ ಅನ್ನು ಅನುಸರಿಸಲು, ನಿಮ್ಮ ನೆಚ್ಚಿನ ಆಹಾರವನ್ನು ನೀವು ಬಿಟ್ಟುಕೊಡಬೇಕಾಗಿಲ್ಲ, ಬದಲಿಗೆ ನೀವು ಎಲ್ಲವನ್ನೂ ತಿನ್ನುವ ಮೂಲಕ ತೂಕವನ್ನು ಕಳೆದುಕೊಳ್ಳಬಹುದು.
>> ಆರೋಗ್ಯಕರ ತೂಕ ಇಳಿಕೆ  ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ನೀವು 2-2-2 ಮೇಥೆಡ್ ಮೆಟಾಬಾಲಿಸಮ್ ಪ್ರಯತ್ನಿಸಬಹುದು.
>> ಈ ತಂತ್ರದಲ್ಲಿ, ಪ್ರೋಟೀನ್ ಅನ್ನು ಸೇವಿಸುವ ಮೂಲಕ, ಸ್ನಾಯುಗಳನ್ನು ಸರಿಪಡಿಸಲಾಗುತ್ತದೆ ಮತ್ತು ಚಯಾಪಚಯ ಕ್ರಿಯೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ.
>> ಈ ತಂತ್ರದಲ್ಲಿ ಆರೋಗ್ಯಕರ ಕೊಬ್ಬುಗಳನ್ನು ಸೇರಿಸಲಾಗಿದೆ, ಇದು ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ ಮತ್ತು ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ.
>> ಈ ತಂತ್ರದ ಸಹಾಯದಿಂದ, ನೀವು ಆಯಾಸ ಮತ್ತು ದೌರ್ಬಲ್ಯವನ್ನು ತೆಗೆದುಹಾಕುವ ಕಾರ್ಬೋಹೈಡ್ರೇಟ್ಗಳನ್ನು ಸೇವಿಸುತ್ತೀರಿ. ಅಲ್ಲದೆ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ.

2-2-2 ಮೇಥೆಡ್ ಮೆಟಾಬಾಲಿಸಮ್ ಅನ್ನು ಹೇಗೆ ಅನುಸರಿಸಬೇಕು?
>> 2-2-2 ವಿಧಾನದ ಚಯಾಪಚಯ ಕ್ರಿಯೆಯಲ್ಲಿ, ನೀವು ವಾರದಲ್ಲಿ 5 ದಿನಗಳು ಸಾಮಾನ್ಯ ಆಹಾರವನ್ನು ಸೇವಿಸುತ್ತೀರಿ. ನಿಮ್ಮ ಮೆಚ್ಚಿನ ಆಹಾರಗಳ ಆರೋಗ್ಯಕರ ಆವೃತ್ತಿಗಳತ್ತ ಗಮನಹರಿಸಿ.
>> ಇದರ ನಂತರ, ವಾರಕ್ಕೆ ಎರಡು ದಿನಗಳು ಕ್ಯಾಲೋರಿ ಸೇವನೆಯನ್ನು 800 ಕ್ಕೆ ತರಲು, ಮೊದಲ ಎರಡು ವಾರಗಳಲ್ಲಿ, ಕಾರ್ಬೋಹೈಡ್ರೇಟ್ಗಳು ಮತ್ತು ಪ್ರೋಟೀನ್ ಹೊಂದಿರುವ ವಸ್ತುಗಳನ್ನು ಸೇವಿಸಿ. ಉದಾಹರಣೆಗೆ, ನೀವು ಪಾಸ್ಟಾ, ಆಮ್ಲೆಟ್, ಪ್ಯಾನ್ಕೇಕ್ಗಳನ್ನು ತಿನ್ನಬಹುದು. ಈ ಸಮಯದಲ್ಲಿ ನಿಮ್ಮ ದೇಹವು ಕಾರ್ಬೋಹೈಡ್ರೇಟ್‌ಗಳನ್ನು ಸುಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬಹುದು.
>> ಇದರ ನಂತರ, 4 ವಾರಗಳ ಕಾಲ ಒಂದು ದಿನವನ್ನು ಬಿಟ್ಟು ಕಾರ್ಬೋಹೈಡ್ರೇಟ್ಗಳು, ಕೊಬ್ಬುಗಳು ಮತ್ತು ಪ್ರೋಟೀನ್ ಭರಿತ ಆಹಾರವನ್ನು ಸೇವಿಸಿ. ಈ ರೀತಿಯಾಗಿ ದೇಹದ ಕೊಬ್ಬು ಕಡಿಮೆಯಾಗುತ್ತದೆ.

ಇದನ್ನೂ ಓದಿ-Diabetes Control Tips: ಮಧುಮೇಹ ನಿಯಂತ್ರಣಕ್ಕೆ ಇಂದಿನಿಂದಲೇ ಈ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಿ!

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News