IPL 2024ರಲ್ಲಿ ಅಬ್ಬರಿಸುತ್ತಿದ್ದಾನೆ ದೇಶದ ಪ್ರಖ್ಯಾತ IPS ಆಫೀಸರ್ ಮಗ: ಯಾರು ಗೊತ್ತಾ ಆ ಕ್ರಿಕೆಟಿಗ?

Shashank Singh Profile: ಐಪಿಎಲ್ 2024ರಲ್ಲಿ ಬುಧವಾರ ನಡೆದ ರೋಚಕ ಪಂದ್ಯದಲ್ಲಿ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಸ್ಫೋಟಕ ಬ್ಯಾಟಿಂಗ್‌ ಕಂಡು ಇಡೀ ಕ್ರಿಕೆಟ್ ಜಗತ್ತು ಸಂತಸ ವ್ಯಕ್ತಪಡಿಸಿದೆ.

Written by - Bhavishya Shetty | Last Updated : Apr 5, 2024, 03:51 PM IST
    • ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್
    • 32 ವರ್ಷದ ಬ್ಯಾಟಿಂಗ್ ಆಲ್‌ರೌಂಡರ್ ಶಶಾಂಕ್ ಸಿಂಗ್
    • ಶಶಾಂಕ್ ಸಿಂಗ್ ತಂದೆ ಶೈಲೇಶ್ ಸಿಂಗ್ ಐಪಿಎಸ್ ಅಧಿಕಾರಿ
IPL 2024ರಲ್ಲಿ ಅಬ್ಬರಿಸುತ್ತಿದ್ದಾನೆ ದೇಶದ ಪ್ರಖ್ಯಾತ IPS ಆಫೀಸರ್ ಮಗ: ಯಾರು ಗೊತ್ತಾ ಆ ಕ್ರಿಕೆಟಿಗ? title=
punjab kings player shashank singh

Shashank Singh Profile: ಕಳೆದ ದಿನ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್, ತನ್ನ ತಂಡದ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದ್ದಲ್ಲದೆ ಇಬ್ಬರು ಭವಿಷ್ಯದ ಸ್ಟಾರ್ ಆಟಗಾರರನ್ನು ಸೃಷ್ಟಿಸಿದೆ ಎಂದೇ ಹೇಳಬಹುದು.

ಇದನ್ನೂ ಓದಿ: ಇಂದು ಚೆನ್ನೈ vs ಹೈದರಾಬಾದ್ ಬಿಗ್ ಫೈಟ್: ಉಭಯ ತಂಡಗಳ ಕದನದಲ್ಲಿ ಯಾರ ಬಲ ಹೇಗೇಗಿದೆ? ಇಲ್ಲಿದೆ ವರದಿ

ಐಪಿಎಲ್ 2024ರಲ್ಲಿ ಬುಧವಾರ ನಡೆದ ರೋಚಕ ಪಂದ್ಯದಲ್ಲಿ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಸ್ಫೋಟಕ ಬ್ಯಾಟಿಂಗ್‌ ಕಂಡು ಇಡೀ ಕ್ರಿಕೆಟ್ ಜಗತ್ತು ಸಂತಸ ವ್ಯಕ್ತಪಡಿಸಿದೆ. ಶಶಾಂಕ್ ಸಿಂಗ್ 29 ಎಸೆತಗಳಲ್ಲಿ ಅಜೇಯ 61 ರನ್ ಗಳಿಸಿದರೆ, ಅಶುತೋಷ್ ಶರ್ಮಾ 17 ಎಸೆತಗಳಲ್ಲಿ 31 ರನ್ ಗಳಿಸಿದ್ದರು. ಈ ಇಬ್ಬರು ಬ್ಯಾಟ್ಸ್‌ಮನ್‌’ಗಳ ನಡುವೆ 22 ಎಸೆತಗಳಲ್ಲಿ 43 ರನ್‌’ಗಳ ಜೊತೆಯಾಟವಿದ್ದ ಕಾರಣ ಪಂಜಾಬ್ 200 ರನ್‌’ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು.

32 ವರ್ಷದ ಬ್ಯಾಟಿಂಗ್ ಆಲ್‌ರೌಂಡರ್ ಶಶಾಂಕ್ ಸಿಂಗ್ ಪಂದ್ಯದ ಬಳಿಕ ಮಾತನಾಡಿ, “ನಾನು ಈ ಕ್ಷಣಗಳನ್ನು ಕಲ್ಪಿಸಿಕೊಂಡಿದ್ದೆ. ಆದರೆ ವಾಸ್ತವದಲ್ಲಿ ಕಂಡಾಗ ಖುಷಿಯ ಜೊತೆ ಹೆಮ್ಮೆಯೂ ಆಗುತ್ತಿದೆ. ಮೊದಲು ಚೆಂಡನ್ನು ಅರ್ಥೈಸಿಕೊಂಡು, ಅದಕ್ಕೆ ತಕ್ಕಂತೆ ಆಡಬೇಕು ಎಂದು ನನಗೆ ನನ್ನ ಕೋಚ್ ಹೇಳಿದ್ದರು” ಎಂದು ಹೇಳಿದ್ದಾರೆ.

ಶಶಾಂಕ್ ಸಿಂಗ್ ತಮ್ಮ ವೃತ್ತಿಜೀವನದಲ್ಲಿ 58 ದೇಶೀಯ T20 ಗಳನ್ನು ಆಡಿದ್ದು, 137.34 ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಛತ್ತೀಸ್‌ಗಢ ಪರ ಆಡುವ ಶಶಾಂಕ್ ಸಿಂಗ್, ಈ ಹಿಂದೆ ಡೆಲ್ಲಿ ಡೇರ್‌ ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್), ಸನ್‌ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್‌ ನ ಭಾಗವಾಗಿದ್ದರು.

ಶಶಾಂಕ್ ಸಿಂಗ್ ತಂದೆ IPS ಆಫೀಸರ್:

ಶಶಾಂಕ್ ಸಿಂಗ್ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ, ಇವರು ಹುಟ್ಟಿದ್ದು ಛತ್ತೀಸ್‌ಗಢದ ಭಿಲಾಯ್‌’ನಲ್ಲಿ, ಶಶಾಂಕ್ ಸಿಂಗ್ ತಂದೆ ಶೈಲೇಶ್ ಸಿಂಗ್ ಐಪಿಎಸ್ ಅಧಿಕಾರಿ. ತಂದೆ ಐಪಿಎಸ್ ಅಧಿಕಾರಿಯಾಗಿದ್ದ ಕಾರಣ ಶಶಾಂಕ್ ಸಿಂಗ್ ಬೇರೆ ಬೇರೆ ನಗರಗಳಲ್ಲಿ ವಾಸಿಸುವ ಪರಿಸ್ಥಿತಿ ಇತ್ತು. ಒಂದು ಸಂದರ್ಭದಲ್ಲಿ ಶಶಾಂಕ್ ತಂದೆ ಶೈಲೇಶ್ ಸಿಂಗ್ ಭೋಪಾಲ್‌’ಗೆ ನಿಯೋಜನೆಗೊಂಡಿದ್ದರು. ಅಲ್ಲಿ ತಮ್ಮ ಮಗನ ಪ್ರತಿಭೆಯನ್ನು ಗುರುತಿಸಿ ಹೆಚ್ಚಿನ ಶಿಕ್ಷಣಕ್ಕಾಗಿ ಕ್ರಿಕೆಟ್ ಅಕಾಡೆಮಿಗೆ ಕಳುಹಿಸಿದರು. ಇದಾದ ಬಳಿಕ ಶಶಾಂಕ್ ಸಿಂಗ್ ಮುಂಬೈಗೆ ತೆರಳಿ, 2015 ರಲ್ಲಿ ಮುಂಬೈ ಪರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಮೊದಲ ಬಾರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವನ್ನು ಪಡೆದರು.

ಇದನ್ನೂ ಓದಿ:  ಮುರಿದುಬಿತ್ತು 14 ವರ್ಷಗಳ ಒಡನಾಟ! ಮುಂಬೈ ಇಂಡಿಯನ್ಸ್ ತೊರೆದು ಈ ತಂಡ ಸೇರಲು ರೋಹಿತ್ ಶರ್ಮಾ ನಿರ್ಧಾರ!

ಮುಂಬೈ ತಂಡದಲ್ಲಿ ಶಶಾಂಕ್ ಸಿಂಗ್ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಇದಾದ ಬಳಿಕ ಶಶಾಂಕ್ ಸಿಂಗ್ ತವರು ರಾಜ್ಯ ಛತ್ತೀಸ್ ಗಢಕ್ಕೆ ತೆರಳಿ, ಅದೇ ರಾಜ್ಯದ ಪರ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದರು. ಒಟ್ಟು 21 ಪ್ರಥಮ ದರ್ಜೆ ಪಂದ್ಯಗಳಲ್ಲಿ 858 ರನ್ ಗಳಿಸಿರುವ ಶಶಾಂಕ್ ಸಿಂಗ್, 12 ವಿಕೆಟ್ ಕಬಳಿಸಿದ್ದಾರೆ. 30 ಲಿಸ್ಟ್ ಎ ಪಂದ್ಯಗಳಲ್ಲಿ 41.08 ಸರಾಸರಿಯಲ್ಲಿ 986 ರನ್ ಗಳಿಸಿರುವ ಅವರು, ಇದೇ ಮಾದರಿಯಲ್ಲಿ 33 ವಿಕೆಟ್‌ ಕೂಡ ಕಿತ್ತಿದ್ದಾರೆ. ಇನ್ನೊಂದೆಡೆ 59 ಟಿ20 ಪಂದ್ಯಗಳಲ್ಲಿ 815 ರನ್ ಗಳಿಸಿದ್ದಲ್ಲದೆ, 15 ವಿಕೆಟ್ ಪಡೆದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News