IPL 2024 CSK vs KKR: ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದಹಾಗೆ ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ಗೌತಮ್ ಗಂಭೀರ್ ನಡುವಿನ ಹಣಾಹಣಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಧೋನಿ ಚೆನ್ನೈ ತಂಡದ ಮಾಜಿ ನಾಯಕರಾಗಿದ್ದು, ಈಗಲೂ ಆಡುತ್ತಿದ್ದಾರೆ. ಇನ್ನೊಂದೆಡೆ, ಗಂಭೀರ್ ಕೆಕೆಆರ್ ತಂಡದ ಮಾರ್ಗದರ್ಶಕರಾಗಿದ್ದಾರೆ.
ಧೋನಿ ಮತ್ತು ಗಂಭೀರ್ ಐಪಿಎಲ್’ನಲ್ಲಿ ತಮ್ಮ ತಂಡಗಳಿಗಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಧೋನಿ ನಾಯಕತ್ವದಲ್ಲಿ ಚೆನ್ನೈ 5 ಪ್ರಶಸ್ತಿಗಳನ್ನು ಗೆದ್ದಿದೆ. ಮತ್ತೊಂದೆಡೆ, ಗಂಭೀರ್ ಕೆಕೆಆರ್ ಎರಡು ಬಾರಿ ಚಾಂಪಿಯನ್ ಆಗಿದ್ದಾರೆ.
ಇನ್ನು ಈ ಪಂದ್ಯಕ್ಕೂ ಮುನ್ನ ಧೋನಿ ಬಗ್ಗೆ ಹೇಳಿಕೆ ನೀಡಿರುವ ಗಂಭೀರ್, ಅವರು ಭಾರತದ ಅತ್ಯಂತ ಯಶಸ್ವಿ ನಾಯಕ ಎಂದು ಬಣ್ಣಿಸಿದ್ದಾರೆ.
"ನಾನು ಗೆಲ್ಲಲು ಬಯಸುತ್ತೇನೆ. ನನ್ನ ಮನಸ್ಸಿನಲ್ಲಿ ನಾನು ತುಂಬಾ ಸ್ಪಷ್ಟವಾಗಿದ್ದೇನೆ. ಸ್ನೇಹ ಮತ್ತು ಪರಸ್ಪರ ಗೌರವ ಎಲ್ಲವೂ ಉಳಿಯುತ್ತದೆ. ಮೈದಾನದಲ್ಲಿರುವಾಗ ನಾನು ಕೆಕೆಆರ್ ನಾಯಕನಾಗಿರುತ್ತೇನೆ ಮತ್ತು ಅವರು ಸಿಎಸ್‌ಕೆ ನಾಯಕತ್ವ ವಹಿಸುತ್ತಿದ್ದಾರೆ. ಆದರೆ ಧೋನಿ ಇಲ್ಲಿಯವರೆಗೆ ಭಾರತದ ಅತ್ಯಂತ ಯಶಸ್ವಿ ನಾಯಕ. ಯಾರೂ ಆ ಮಟ್ಟಕ್ಕೆ ಬರಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿ: ನಟಿ ಅನುಷ್ಕಾ ಶೆಟ್ಟಿ ಮೊದಲು ನಟಿಸಿದ್ದು ಕನ್ನಡದ ಈ ಖ್ಯಾತ ಧಾರಾವಾಹಿಯಲ್ಲಿ… ತೆಲುಗಿನಲ್ಲಿ ಅಲ್ಲ! ಆ ಸೀರಿಯಲ್ ಯಾವುದು?
"3 ಐಸಿಸಿ ಟ್ರೋಫಿಗಳನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಐಪಿಎಲ್’ನಲ್ಲಿ ಅವರ ವಿರುದ್ಧ ಆಡುವುದನ್ನು ನಾನು ಯಾವಾಗಲೂ ಆನಂದಿಸುತ್ತಿದ್ದೆ. ಏಕೆಂದರೆ ತಂತ್ರದ ವಿಷಯದಲ್ಲಿ ಅವರನ್ನು ಸೋಲಿಸಲು ಸಾಧ್ಯವಿಲ್ಲ. ತಂತ್ರಗಳನ್ನು ರೂಪಿಸುವುದರಲ್ಲಿ ಅವರು ಬಹಳ ನಿಪುಣರು. ಸ್ಪಿನ್ನರ್’ಗಳ ವಿರುದ್ಧ ಹೇಗೆ ರನ್ ಗಳಿಸಬೇಕು ಮತ್ತು ಸ್ಪಿನ್ನರ್‌ಗಳ ವಿರುದ್ಧ ಯಾವ ರೀತಿಯ ಮೈದಾನವನ್ನು ಹೊಂದಿಸಬೇಕು ಎಂಬುದು ಅವರಿಗೆ ತಿಳಿದಿದೆ” ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.