ನವದೆಹಲಿ: ಅಲಿಗಡ್ ನಲ್ಲಿನ ಜೀವಂಗರ್ ಪ್ರದೇಶದಲ್ಲಿ ಬಾಲಕಿಯೊಬ್ಬಳು ಮದುವೆಯಾಗಲು ನಿರಾಕರಿಸಿದ ಕಾರಣ ತನ್ನ ಪ್ರಿಯತಮನ ಮೇಲೆ ಆಸಿಡ್ ಎಸೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿವಿಲ್ ಲೈನ್ಸ್ನ ಅನಿಲ್ ಸಿಮಾನಿಯಾ ಸಿಒ, ಹುಡುಗನ ಹೆಸರು ಫೈಜಾದ್, ಆತ ಕಳೆದ ಆರು ತಿಂಗಳಿನಿಂದ ಹುಡುಗಿಯ ಜೊತೆ ಪ್ರೇಮ ಸಂಬಂಧ ಹೊಂದಿದ್ದ. ಕಳೆದ ತಿಂಗಳಿನಿಂದ ಅವನು ಆ ಹುಡುಗಿಯನ್ನು ಕಡೆಗಣಿಸುತ್ತಿದ್ದನು ಮತ್ತು ಅದಕ್ಕಾಗಿಯೇ ಅವಳು ಅವನ ಮೇಲೆ ಆಸಿಡ್ ನಿಂದ ದಾಳಿ ಮಾಡಿದ್ದಾಳೆ' ಎಂದು ಪೊಲೀಸರು ತಿಳಿಸಿದ್ದಾರೆ.
"ನಾವು ಸೆಕ್ಷನ್ 326 ಎ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ ಮತ್ತು ಆರೋಪಿ ಬಾಲಕಿಯನ್ನು ಬಂಧಿಸಿದ್ದೇವೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯ ವೈದ್ಯ ಡಾ. ಖಾನ್ ವಲಯ 'ಆಸಿಡ್ ನಿಂದ ಗಾಯಗೊಂಡ ನಂತರ 20 ವರ್ಷದ ಬಾಲಕನನ್ನು ಇಲ್ಲಿ ದಾಖಲಿಸಲಾಗಿದೆ. ಕಣ್ಣುಗಳಿಗೆ ತೊಂದರೆಯಾಗಿದೆ ಮತ್ತು ವೈದ್ಯರ ತಂಡ ಅವನಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಹೇಳಿದ್ದಾರೆ. ಸಂತ್ರಸ್ತೆಯ ತಾಯಿ ರುಖ್ಸಾನಾ ಹೇಳುವಂತೆ 'ಹುಡುಗಿ ನನ್ನ ಮಗನಿಗೆ ಪೋನ್ ಮಾಡುತ್ತಿದ್ದಳು, ಆದರೆ ಅವನು ಅವಳ ಕರೆಗಳನ್ನು ತೆಗೆದುಕೊಳ್ಳಲು ನಿರಾಕರಿಸಿದನು. ಘಟನೆ ನಡೆದ ಬೆಳಗ್ಗೆ ಅವನಿಗೆ ಆ ಬಾಲಕಿ ಕರೆ ಮಾಡಿದ್ದಳು ಎಂದು ತಿಳಿಸಿದ್ದಾಳೆ.