Deependra Singh Viral Video: ನೇಪಾಳದ ಬ್ಯಾಟ್ಸ್‌ಮನ್ ದೀಪೇಂದ್ರ ಸಿಂಗ್ ಐರಿ ವಿಶ್ವ ಕ್ರಿಕೆಟ್‌ನಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದ್ದಾರೆ. ಕತಾರ್ ವಿರುದ್ಧದ ಎಸಿಸಿ ಪುರುಷರ ಟಿ20 ಇಂಟರ್‌ನ್ಯಾಶನಲ್ ಪ್ರೀಮಿಯರ್ ಲೀಗ್ ಕಪ್‌ನಲ್ಲಿ ಬ್ಯಾಟ್ ಮೂಲಕ ಅವರು ಭಾರಿ ವಿದ್ವಾಂಸ ಸೃಷ್ಟಿಸಿದ್ದಾರೆ. ದೀಪೇಂದ್ರ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿ ದಾಖಲೆ ನಿರ್ಮಿಸಿದರು. ಅಂತಾರಾಷ್ಟ್ರೀಯ ಟಿ20ಯಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಭಾರತದ ಯುವರಾಜ್ ಸಿಂಗ್ ಮತ್ತು ವೆಸ್ಟ್ ಇಂಡೀಸ್‌ನ ಕೀರಾನ್ ಪೊಲಾರ್ಡ್ ಈ ಸಾಧನೆ ಮಾಡಿದ್ದಾರೆ.
300 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಬ್ಯಾಟಿಂಗ್
ಪಂದ್ಯದಲ್ಲಿ ಟಾಸ್ ಗೆದ್ದ ನೇಪಾಳ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತು ಮತ್ತು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 210 ರನ್ ಗಳಸಿದೆ. ಈ ಪಂದ್ಯದಲ್ಲಿ ದೀಪೇಂದ್ರ ಸಿಂಗ್ 21 ಎಸೆತಗಳಲ್ಲಿ 64 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. ಅವರ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಅವರು 3 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ದೀಪೇಂದ್ರ 304.76 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಇದಲ್ಲದೆ, ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಸಿಫ್ ಶೇಖ್ 41 ಎಸೆತಗಳಲ್ಲಿ 52 ರನ್ ಮತ್ತು ಕುಶಾಲ್ ಮಲ್ಲಾ 18 ಎಸೆತಗಳಲ್ಲಿ 35 ರನ್ ಗಳಿಸಿದ್ದಾರೆ.
ಯುವರಾಜ್ ಮತ್ತು ಪೊಲಾರ್ಡ್ ಕ್ಲಬ್‌ನಲ್ಲಿ ದೀಪೇಂದ್ರ
ನೇಪಾಳದ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ದೀಪೇಂದ್ರ ಸಿಂಗ್ ಕತಾರ್ ಬೌಲರ್ ಆಗಿರುವ ಕಮ್ರಾನ್ ಖಾನ್ ಅವರನ್ನು ಸಿಕ್ಕಾಪಟ್ಟೆ ದಂಡಿಸಿದ್ದಾರೆ. ಅವರು ಕತಾರ್ ಬೌಲರ್ ಕಮ್ರಾನ್ ಅವರ ಎಲ್ಲಾ ಆರು ಎಸೆತಗಳನ್ನು ಹಗ್ಗ ದಾಟಿಸಿದ್ದಾರೆ. ದೀಪೇಂದ್ರ ಅವರಿಗಿಂತ ಮೊದಲು, ಯುವರಾಜ್ ಸಿಂಗ್ ಮತ್ತು ಕೀರಾನ್ ಪೊಲಾರ್ಡ್ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್ ಬಾರಿಸಿದ್ದಾರೆ. 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಸ್ಟುವರ್ಟ್ ಬ್ರಾಡ್ ಅವರ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ್ದರು. ಇನ್ನೊಂದೆಡೆ ಪೊಲಾರ್ಡ್ 2021 ರಲ್ಲಿ ಶ್ರೀಲಂಕಾ ವಿರುದ್ಧ ಅಕಿಲಾ ಧನಂಜಯ್ ಅವರ ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ-IPL 2024: RCB ಯ ದಿಗ್ಗಜ ಆಟಗಾರರ ಪರೀಕ್ಷೆ ತೆಗೆದುಕೊಂಡ Virat, King Kohli ಕುರಿತ ಈ ಸಂಗತಿಗಳು ನಿಮಗೂ ಗೊತ್ತಿರಲಿ!
ದಾಖಲೆ ಬರೆದ ದೀಪೇಂದ್ರ
ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ದೀಪೇಂದ್ರ ಹೊಂದಿದ್ದಾರೆ. ಕಳೆದ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ಧ ಹ್ಯಾಂಗ್‌ಝೌನಲ್ಲಿ ಕೇವಲ 9 ಎಸೆತಗಳಲ್ಲಿ ಅವರು ಅರ್ಧ ಶತಕ ಗಳಿಸಿದ್ದಾರೆ. ದೀಪೇಂದ್ರ ಟಿ20 ಕ್ರಿಕೆಟ್‌ನಲ್ಲಿ 300 ಸ್ಟ್ರೈಕ್ ರೇಟ್‌ನೊಂದಿಗೆ ಎರಡು ಬಾರಿ ಅರ್ಧಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂದೆನೆಸಿಕೊಂಡಿದ್ದಾರೆ. ಅವರು ಮಂಗೋಲಿಯಾ ವಿರುದ್ಧ 10 ಎಸೆತಗಳಲ್ಲಿ 52* ರನ್ ಗಳಿಸಿದ್ದರು.
ಇಲ್ಲಿದೆ ಆ ವೈರಲ್ ವಿಡಿಯೋ
Dipendra Singh Airee has etched his name in cricketing history with his extraordinary display of batting prowess, hitting six sixes on six balls. Well done#NepvQAT
6️⃣6️⃣6️⃣6️⃣6️⃣6️⃣
📍 AI Amerat Cricket Ground, Oman Cricket pic.twitter.com/PHHmmDAAdl— Basanta Ghimire (@basantaplp) April 13, 2024
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ