ಬೆಂಗಳೂರು: ರಾಜ್ಯದಲ್ಲಿನ 14 ಕ್ಷೇತ್ರಗಳಲ್ಲಿನ 2ನೇ ಹಂತದ ಮತದಾನಕ್ಕೆ ೩ ದಿನ ಬಾಕಿ ಇದೆ. ಇದೇ ವೇಳೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಬೆಲೆ ಏರಿಕೆಯ ಬಾಣ ಬಿಟ್ಟಿದೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ʼಪ್ರಧಾನಿ ಮೋದಿಯವರ ಅಚ್ಚೆ ದಿನ, ಅಮೃತ್ ಕಾಲದಲ್ಲಿ ಗಗನಮುಖಿಯಾಗಿದ್ದು ಅಭಿವೃದ್ಧಿಯಲ್ಲ, ದಿನಬಳಕೆಯ ವಸ್ತುಗಳು..! ಬೆಲೆ ಏರಿಕೆಯ ಜೊತೆಗೆ GST ಹೊರೆ ಹೊರೆಸಿ ಜನರ ಬದುಕನ್ನು ಭಾರವಾಗಿಸಿದ್ದೇ ಬಿಜೆಪಿ ಮೋದಿಯವರ 10 ವರ್ಷಗಳ ಸಾಧನೆ. ಬಂಡವಾಳಶಾಹಿಗಳ ಪರ ನೀತಿ ಹೊಂದಿದ ಬಿಜೆಪಿಯನ್ನು ಸೋಲಿಸಿ, ಜನರ ಪರ ಚಿಂತಿಸುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿʼ ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಎಂ ಸಿದ್ದರಾಮಯ್ಯ
ಮೋದಿಯವರ ಅಚ್ಚೆ ದಿನ, ಅಮೃತ್ ಕಾಲದಲ್ಲಿ ಗಗನಮುಖಿಯಾಗಿದ್ದು ಅಭಿವೃದ್ಧಿಯಲ್ಲ, ದಿನಬಳಕೆಯ ವಸ್ತುಗಳು..!
ಬೆಲೆ ಏರಿಕೆಯ ಜೊತೆಗೆ GST ಹೊರೆ ಹೊರೆಸಿ ಜನರ ಬದುಕನ್ನು ಭಾರವಾಗಿಸಿದ್ದೇ ಮೋದಿಯವರ 10 ವರ್ಷಗಳ ಸಾಧನೆ.
ಬಂಡವಾಳಶಾಹಿಗಳ ಪರ ನೀತಿ ಹೊಂದಿದ ಬಿಜೆಪಿಯನ್ನು ಸೋಲಿಸಿ, ಜನರ ಪರ ಚಿಂತಿಸುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ. pic.twitter.com/LbPP1uDUTO
— Karnataka Congress (@INCKarnataka) May 4, 2024
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯನವರು, ʼಸುಳ್ಳಿನ ಸರದಾದ ಮೋದಿʼ ಎಂದು ಕಿಡಿಕಾರಿದ್ದಾರೆ. ʼಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನಿಯ ವಯಸ್ಸಿಗಿಂತ ಪೆಟ್ರೋಲ್ - ಡೀಸೆಲ್ ಬೆಲೆ ಹೆಚ್ಚಾಗಿದೆ. ಚಿನ್ನ ಬಡವರ ಕೈ ಸುಡುತ್ತಿದೆ, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್, ಬೇಳೆಕಾಳಿನ ಬೆಲೆ ಕೇಳಿದರೆ ಹಸಿವೇ ಮರೆತು ಹೋಗುತ್ತದೆ. ಅಚ್ಚೇ ದಿನ್ ಅಂದ್ರೆ ದುಬಾರಿ, ಮೋದಿ ಅಂದ್ರೆ ಮಕ್ಮಲ್ ಟೋಪಿ. ಪ್ರಧಾನಿ ಮೋದಿಯವರು ಕನ್ನಡಿಗರ ಕೈಗೆ ಕೊಟ್ಟಿರುವ ಚೊಂಬನ್ನು ಈ ಚುನಾವಣೆಯಲ್ಲಿ ಮರೆಯದೆ ಅವರ ಕೈಗಿಡಿʼ ಎಂದು ಟೀಕಿಸಿದ್ದಾರೆ.
ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನಿಯ ವಯಸ್ಸಿಗಿಂತ ಪೆಟ್ರೋಲ್ - ಡೀಸೆಲ್ ಬೆಲೆ ಹೆಚ್ಚಾಗಿದೆ. ಚಿನ್ನ ಬಡವರ ಕೈ ಸುಡುತ್ತಿದೆ, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್, ಬೇಳೆಕಾಳಿನ ಬೆಲೆ ಕೇಳಿದರೆ ಹಸಿವೇ ಮರೆತು ಹೋಗುತ್ತದೆ.
ಅಚ್ಚೇ ದಿನ್ ಅಂದ್ರೆ ದುಬಾರಿ,
ಮೋದಿ ಅಂದ್ರೆ ಮಕ್ಮಲ್ ಟೋಪಿ.
ಪ್ರಧಾನಿ @narendramodi ಅವರು ಕನ್ನಡಿಗರ… pic.twitter.com/KWZnm4N6eN— Siddaramaiah (@siddaramaiah) May 4, 2024
ʼಕನ್ನಡಿಗರು ಐಕ್ಯತೆ, ಭಾವೈಕ್ಯ, ಸಮಗ್ರತೆ ಮತ್ತು ಸೌಹಾರ್ದತೆಯಲ್ಲಿ ನಂಬಿಕೆ ಇಟ್ಟಿದ್ದಾರೆ. ಪ್ರಜಾಪ್ರಭುತ್ವದ ಹಬ್ಬವಾಗಿರುವ ಚುನಾವಣೆಯಲ್ಲಿ ಭಾಗವಹಿಸಿ ದ್ವೇಷ ಬಿತ್ತುವ ಶಕ್ತಿಗಳಿಗೆ ಹಾಗೂ ದೆಹಲಿಯಲ್ಲಿ ಕುಳಿತು ಸರ್ವಾಧಿಕಾರಿ ಪ್ರವೃತ್ತಿ ಅನುಸರಿಸುತ್ತಿರುವವರಿಗೆ ತಕ್ಕಪಾಠ ಕಲಿಸಿ ಎಂದು ಸಿಎಂ ಸಿದ್ದರಾಮಯ್ಯನವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Prajwal Revanna case: ಎಚ್.ಡಿ.ರೇವಣ್ಣ ಮನೆಯಲ್ಲಿ SIT ಅಧಿಕಾರಿಗಳಿಂದ ಸ್ಥಳ ಮಹಜರು!
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಜಾಹೀರಾತು ಅಸ್ತ್ರವನ್ನು ಬಳಕೆ ಮಾಡಿದೆ. ಅಡುಗೆ ಎಣ್ಣೆ ಲೀಟರ್ಗೆ 180 ರೂ., ಪೆಟ್ರೋಲ್ 100 ರೂ., ಡೀಸೆಲ್ 85 ರೂ., ತೊಗರಿಬೇಳೆ ಕೆಜಿಗೆ 200 ರೂ. ಇದ್ದರೆ, ಡಿಎಪಿ ರಸಗೊಬ್ಬರ 1,600 ರೂ., ಅಡುಗೆ ಅನಿಲದ ಪ್ರತಿ ಸಿಲಿಂಡರ್ಗೆ 1,100 ರೂ. ದರ ಹೆಚ್ಚಾಗಿದೆ. ಅಚ್ಛೇದಿನ್ ಎಂದರೆ ದುಬಾರಿ ಎಂಬಂತಾಗಿದೆʼ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.