ನವದೆಹಲಿ: 2021 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನ ಜನರು ಅದ್ಭುತವನ್ನು ಸೃಷ್ಟಿಸಲಿದ್ದಾರೆ ಎಂದು ಸೂಪರ್ಸ್ಟಾರ್ ರಜನಿಕಾಂತ್ ಗುರುವಾರ ಪ್ರತಿಪಾದಿಸಿದ್ದಾರೆ.
"2021 ರಲ್ಲಿ, ತಮಿಳುನಾಡಿನ ಜನರು ಶೇಕಡಾ 100 ರಷ್ಟು ರಾಜಕೀಯದಲ್ಲಿ ದೊಡ್ಡ ಅದ್ಭುತವನ್ನು ಸೃಷ್ಟಿಸುತ್ತಾರೆ" ಎಂದು ರಜನಿಕಾಂತ್ ಹೇಳಿದರು. ತಮಿಳುನಾಡಿನ "ದ್ರಾವಿಡ ಭೂಮಿಯಲ್ಲಿ ರಜನಿಕಾಂತ್ ಅವರ ಆಧ್ಯಾತ್ಮಿಕ ರಾಜಕೀಯ ಸಾಧ್ಯವಿಲ್ಲ ಎಂದು ಎಐಎಡಿಎಂಕೆ ಹೇಳಿಕೆಗೆ ರಜನಿಕಾಂತ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.ಎಐಎಡಿಎಂಕೆ ಮುಖವಾಣಿಯಾಗಿರುವ 'ನಮತು ಅಮ್ಮ' ಗುರುವಾರದಂದು ರಜನಿಕಾಂತ್ ಅವರ "ಆಧ್ಯಾತ್ಮಿಕ ರಾಜಕೀಯ" ಮತ್ತು ಕಮಲ್ ಹಾಸನ್ ಅವರ ಎಡಪಂಥೀಯ ಒಲವು ರಾಜಕೀಯವಾಗಿ ಹೊಂದಾಣಿಕೆಯಾಗಲು ಸಾಧ್ಯವಿಲ್ಲ ಎಂದು ಹೇಳಿದೆ.
ಈಗ ಎಂಎನ್ಎಂ ಮುಖ್ಯಸ್ಥ ಕಮಲ್ ಹಾಸನ್ ಅವರೊಂದಿಗೆ ರಾಜಕೀಯವಾಗಿ ಹೊಂದಾಣಿಕೆ ಮಾಡಿಕೊಳ್ಳುವ ಸೂಚನೆಗಳ ಮಧ್ಯೆ ಅವರ ಈ ಹೇಳಿಕೆಗಳು ಬಂದಿವೆ. ತಮ್ಮದೇ ರಾಜಕೀಯ ಪಕ್ಷದ ಮೂಲಕ 2021 ರಲ್ಲಿ ಚುನಾವಣೆಯನ್ನು ಎದುರಿಸುವುದಾಗಿ ಹೇಳಿರುವ ರಜನಿಕಾಂತ್ ಅವರು ಮಕ್ಕಲ್ ನೀಧಿ ಮಯಂ (ಎಂಎನ್ಎಂ) ನ ಕಮಲ್ ಹಾಸನ್ ಜೊತೆ ಮೈತ್ರಿ ಮಾಡಿಕೊಂಡರೆ ಅಧಿಕಾರ ಹಂಚಿಕೊಳ್ಳುವ ಮುಂತಾದ ವಿಷಯಗಳ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ.
ಇನ್ನು ಕಮಲ್ ಹಾಸನ್ ಪಕ್ಷ ಜೊತೆಗಿನ ಮೈತ್ರಿ ಕುರಿತಾಗಿ ಮಾತನಾಡಿದ ಅವರು ಇಂತಹ ವಿಷಯಗಳನ್ನು ಚುನಾವಣಾ ಸಮಯದಲ್ಲಿ ಮಾತ್ರ ಚರ್ಚಿಸಬಹುದಾಗಿದೆ ಎಂದು ಹೇಳಿದರು.ಅಂತಹ ವಿಷಯಗಳನ್ನು ಆಗ ಮತ್ತು ಈಗಿರುವ ಪರಿಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ. ಅದೂ ಸಹ, ನಾನು ಪಕ್ಷವನ್ನು ಪ್ರಾರಂಭಿಸಿದ ನಂತರ ನನ್ನ ಪಕ್ಷದ ಸದಸ್ಯರನ್ನು ಸಂಪರ್ಕಿಸಬೇಕು. ಅಲ್ಲಿಯವರೆಗೆ ನಾನು ಈ ವಿಷಯಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ಅವರು ಹೇಳಿದರು.